ಇದೀಗ ನಿನ್ನ ಸರದಿ ಜೀವನದ 'ಸ್ಟ್ರೇಟ್ ಡ್ರೈವ್' ಮಾಡು ಯುವಿ!
ಬೆಂಗಳೂರು, ಅಕ್ಟೋಬರ್, 31: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಹರ್ಭಜನ್ ಸಿಂಗ್ ಆಲ್ ರೌಂಡರ್ ಯುವರಾಜ್ ಸಿಂಗ್ ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಮದುವೆಯ ನಂತರ ಯುವರಾಜ್ ಸಿಂಗ್ ಭಜ್ಜಿ ಬಗ್ಗೆ ಮಾಡಿದ್ದ ಟ್ವೀಟ್ ಸಲಹೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಸ್ಪಿನ್ ಮಾಂತ್ರಿಕ ಸಹ ಟ್ವಿಟ್ಟರ್ ಮೂಲಕವೇ ಉತ್ತರ ನೀಡಿದ್ದಾರೆ. ಯುವರಾಜ್ ಸಿಂಗ್ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸಂಗತಿಯೂ ಇಲ್ಲಿ ಬಹಿರಂಗವಾಗಿದೆ.[ಹರ್ಭಜನ್ ಮದುವೆ ಸಂಭ್ರಮ ನೋಡಿಕೊಂಡು ಬನ್ನಿ]

ಗೀತಾ ಬಸ್ರಾ ಅವರೊಂದಿಗೆ ವಿವಾಹವಾದ ಹರ್ಭಜನ್ ಗೆ ಶುಭಾಶಯ ತಿಳಿಸಿದ ಯುವಿ, 'ದೂಸ್ರಾ ಎಸಯಬೇಡ' ಎಂದು ಸಲಹೆ ನೀಡಿದ್ದರು. ಇದಕ್ಕೆ ಮೊದಲು ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದ ಭಜ್ಜಿ, ನಂತರ 'ನೀನು ನಮ್ಮ ಲೈನ್ ಗೆ ಬಂದು ನೇರವಾಗಿ ಆಡು' ಎಂದು ನೀಡಿದ್ದಾರೆ.
ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಯುವರಾಜ್, 'ಹೌದು, ನಿನ್ನ ಮಾತಲ್ಲಿ ಸತ್ಯವಿದೆ, ದೀಪಾವಳಿ ವೇಳೆಗೆ ನಾನು ಸ್ಟ್ರೇಟ್ ಡ್ರೈವ್ ಮಾಡುತ್ತೇನೆ ' ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.[ಕ್ಯಾಪ್ಟನ್ ಕೂಲ್ ಧೋನಿಗೆ ಬಹುಪರಾಕ್ ಎಂದ ಫ್ಯಾನ್ಸ್]
ಗೀತಾ ಬಸ್ರಾ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ನೇಹತರಿಬ್ಬರ ಮಾತನ್ನು ಉಲ್ಲೇಖ ಮಾಡಿದ್ದಾರೆ. ಅಲ್ಲದೇ ನಮ್ಮ ನಂತರದ ಸರದಿ ನಿಮ್ಮದು ಎಂದು ಯುವರಾಜ್ ಗೆ ಕಿವಿಮಾತು ಹೇಳಿದ್ದಾರೆ.
ಈ ಎಲ್ಲ ಸಂವಾದಗಳು ಯುವರಾಜ್ ಸಿಂಗ್ ದೀಪಾವಳಿ ವೇಳೆಗೆ ವೈವಾಹಿಕ ಜೀವನದ ಇನಿಂಗ್ಸ್ ಗೆ ಕಾಲಿಡಬಹುದು ಎಂಬ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದೆ.
ಟ್ವಿಟ್ಟರ್ ಸಂವಾದ ನೋಡಿಕೊಂಡು ಬನ್ನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications