For Quick Alerts
ALLOW NOTIFICATIONS  
For Daily Alerts
 

IND vs AUS: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಈ ಮೂವರಿಗೆ 'ಮಾಡು ಇಲ್ಲವೇ ಮಡಿ' ಆಗಿರಲಿದೆ

ಗುರುವಾರ, ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಆಡುತ್ತಿದೆ. ಮೊದಲ ಪಂದ್ಯವು ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಭಾರತ ಯುವ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

ಅಹಮದಾಬಾದ್‌ನಲ್ಲಿ ಉಭಯ ತಂಡಗಳು ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಆಡಿದ ನಾಲ್ಕು ದಿನಗಳ ನಂತರ ಟಿ20 ಸರಣಿಯು ಆರಂಭವಾಗುತ್ತಿದೆ.

Do or die Situation for these 3 players in T20 Series Against Australia Says Aakash Chopra

ಗಮನಾರ್ಹವಾಗಿ, ಈ ಸರಣಿಗೆ ಕಡಿಮೆ ಪ್ರಚಾರವಿದೆ ಮತ್ತು ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು ಆಗಮಿಸಿದ್ದರಿಂದ, ಅದು ಕಡಿಮೆ-ಒತ್ತಡದ ಸರಣಿಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಟಿ20 ಸರಣಿಯ ಮೊದಲು ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಪ್ರಮುಖವಾಗಿದೆ. ಏಕೆಂದರೆ ಇದು 2024ರ ಟಿ20 ವಿಶ್ವಕಪ್‌ಗೆ ಕೇವಲ 7-8 ತಿಂಗಳ ಮಾತ್ರ ದೂರದಲ್ಲಿದೆ ಎಂದು ತಿಳಿಸಿದರು.

ಟೀಮ್ ಇಂಡಿಯಾದ ಯುವ ಆಟಗಾರರು ತಮಗೆ ಸಿಕ್ಕಿರುವ ಅವಕಾಶಕ್ಕೆ ಸಂಪೂರ್ಣ ಗೌರವ ನೀಡಲಿದ್ದದಾರೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಬೇಕು ಎಂದು ಆಕಾಶ್ ಚೋಪ್ರಾ ಕಿವಿಮಾತು ಹೇಳಿದರು.

Do or die Situation for these 3 players in T20 Series Against Australia Says Aakash Chopra

"ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಬೇಕಾಗಿದೆ. ಆದ್ದರಿಂದ ಇದು ನಿಮಗೆ ಒಂದು ಅವಕಾಶವಾಗಿದೆ ಮತ್ತು ಮುಂದಿನ ವಿಶ್ವಕಪ್‌ಗೆ ಮೊದಲು ನೀವು ಕನಿಷ್ಠ 25 ಟಿ20 ಪಂದ್ಯಗಳನ್ನು ಹೊಂದಿಲ್ಲದ ಕಾರಣ ನಿಮಗೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಮತ್ತು ನಿಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ನೀವು ವಿಷಾದಿಸುತ್ತೀರಿ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಹೆಸರನ್ನು ಆಕಾಶ್ ಚೋಪ್ರಾ ತೆಗೆದುಕೊಂಡರು. ಇದು ಈ ಮೂವರು ಅಟಗಾರರಿಗೂ ಮಾಡು ಇಲ್ಲವೇ ಮಡಿ ಸರಣಿಯಾಗಿರಬಹುದು ಎಂದು ಹೇಳಿದರು.

"ನೀವು ಅದನ್ನು ಆ ಕೋನದಿಂದ ನೋಡಿದರೆ ಈ ಸರಣಿಯು ಮುಖ್ಯವಾಗಿದೆ. ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಈ ಮೂವರು ಆರಂಭಿಕರಲ್ಲಿ ಯಾರು ಇನ್ನಿಂಗ್ಸ್ ತೆರೆಯುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ? ಇದು ಮೂವರಲ್ಲಿ ಯಾರಿಗಾದರೂ ಪಡೆದುಕೊಳ್ಳುವುದು ಅಥವಾ ಕಳೆದುಕೊಳ್ಳುವ ಸರಣಿಯಾಗಿರಬಹುದು," ಎಂದು ಆಕಾಶ್ ಚೋಪ್ರಾ ತಿಳಿಸಿದರು.

Do or die Situation for these 3 players in T20 Series Against Australia Says Aakash Chopra

2024ರ ಟಿ20 ವಿಶ್ವಕಪ್‌ನಲ್ಲಿ ಭಾರತವು ಹಿರಿಯ ಆಟಗಾರರನ್ನು ಕೈಬಿಟ್ಟು ಯುವ ತಾರೆಗಳೊಂದಿಗೆ ಆಡುತ್ತದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಟಿ20 ವಿಶ್ವಕಪ್‌ನ 2022ರ ಆವೃತ್ತಿಯಲ್ಲಿ ಸೋತ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಸ್ವರೂಪದಲ್ಲಿ ಭಾರತ ತಂಡಕ್ಕಾಗಿ ಆಡಿಲ್ಲ ಎಂಬುದು ಗಮನಾರ್ಹ.

ರೋಹಿತ್ ಶರ್ಮಾ ಇನ್ನೂ ಎಲ್ಲಾ ಸ್ವರೂಪಗಳಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ ಮತ್ತು ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಸರಣಿಯಲ್ಲಿ ಪಾಂಡ್ಯ ಮತ್ತು ಕೆಎಲ್ ರಾಹುಲ್ ಇಲ್ಲದ ಕಾರಣ, ಸೂರ್ಯಕುಮಾರ್ ಯಾದವ್ ಅವರನ್ನು ಹಂಗಾಮಿ ನಾಯಕನಾಗಿ ನೇಮಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ಜಿತೇಶ್ ಶರ್ಮಾ.

Story first published: Thursday, November 23, 2023, 16:49 [IST]
Other articles published on Nov 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+