Ravi Shastri: ಬಾಲಿವುಡ್ ನಟಿ ಜೊತೆ ಟೀಮ್ ಇಂಡಿಯಾ ಮಾಜಿ ಕೋಚ್ ಲವ್ ಬ್ರೇಕಪ್ ಆಗಲು ಕಾರಣವೇನು?
ಆಗಸ್ಟ್ 17 ಶನಿವಾರ, ಭಾರತದ ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧ ತುಂಬ ಹಳೆಯದು. ಅನೇಕ ಕ್ರಿಕೆಟ್ ಆಟಗಾರರು ಬಾಲಿವುಡ್ ನಟಿಯರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಕೆಲವರು ಧರ್ಮದ ಸಂಕೋಲೆಗಳನ್ನು ಮುರಿದರೆ, ಒಂದಷ್ಟು ಆಟಗಾರರು ತಮ್ಮ ಪ್ರೀತಿಯನ್ನು ಪಡೆಯಲು ತಮ್ಮನ್ನು ಬದಲಾಯಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹೆಡ್ ಕೋಚ್ ರವಿಶಾಸ್ತ್ರಿ ಅವರದ್ದೂ ಇದೇ ಕಥೆ. ಬಾಲಿವುಡ್ ತಾರೆ ಅಮೃತಾ ಸಿಂಗ್ ಅವರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದರು. ಆದರೆ ಆ ಒಂದು ಷರತ್ತಿನಿಂದ ಅವರಿಬ್ಬ ಪ್ರೇಮ ಸಂಬಂಧ ಮುರಿದುಬಿತ್ತಿತ್ತು. ಈ ಪ್ರೇಮ ಕಥೆಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಮೊದಲ ಭೇಟಿ
ಆಗ್ಗಾಗೆ ರವಿಶಾಸ್ತ್ರಿ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿರುತ್ತದೆ. ಈ ಸಂದರ್ಶನದಲ್ಲಿ ಅವರು ತಮ್ಮ ಮತ್ತು ಅಮೃತಾ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಅವರ ಮೊದಲ ಭೇಟಿ ಹೇಗಿತ್ತು ಎಂಬುದನ್ನೂ ತಿಳಿಸಿದ್ದಾರೆ.
ಸಂದರ್ಶನದಲ್ಲಿ ರವಿಶಾಸ್ತ್ರಿ ನಗುತ್ತಲೇ ತಮ್ಮ ಪ್ರೀತಿಯ ಆರಂಭವನ್ನು ಹೇಳಿದ್ದಾರೆ. ನಾನು ಅವರನ್ನು (ಅಮೃತಾ) ಮೊದಲ ಬಾರಿಗೆ ಬಾಂಬೆಯ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದೆ. ಮೊದಲ 10 ನಿಮಿಷಗಳಲ್ಲಿ ನಾನು ಅವಳೊಂದಿಗೆ ಒಂದು ಮಾತನ್ನೂ ಆಡಲಿಲ್ಲ.
ಏಕೆಂದರೆ ಹುಡುಗಿಯರೊಂದಿಗೆ ಮಾತನಾಡಲು ತುಂಬಾ ನಾಚಿಕೆಪಡುತ್ತಿದ್ದೆ. ಆದರೆ ಅವಕಾಶ ಸಿಗದ ದಿನ ಬರುತ್ತೆ ಅಂತ ಗೊತ್ತಿರಲಿಲ್ಲ. ಆ 10 ನಿಮಿಷ ನಾನು ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವಳು ಅಲ್ಲಿಯೇ ಮಾತನಾಡುತ್ತಲೇ ಇದ್ದಳು. ಈ ವೇಳೆ ನಾನು ಸಾಕಷ್ಟು ಮುಜುಗರಕ್ಕೊಳಗಾಗಿದ್ದೆ ಎಂದು ವಿವರಿಸಿದ್ದಾರೆ.
ಇದಾದ ನಂತರ ಒಟ್ಟಿ ಕಾಣಿಸಿಕೊಳ್ಳುತ್ತಿದ್ದ ರವಿಶಾಸ್ತ್ರಿ ಮತ್ತು ಅಮೃತಾ ನಡುವಿನ ಪ್ರೇಮ ಪ್ರಕರಣದ ಬಗ್ಗೆ ತೀವ್ರ ಚರ್ಚೆಗಳು ನಡೆದಿದ್ದವು. ರವಿಶಾಸ್ತ್ರಿ ಮತ್ತು ಅಮೃತಾ ಸಿಂಗ್ ಅವರ ಫೋಟೋ ಕೂಡ ಫೇಮಸ್ ಮ್ಯಾಗಜೀನ್‌ನ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡಿತ್ತು. ಇದಲ್ಲದೆ ಶಾರ್ಜಾದಲ್ಲಿ ನಡೆಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆಯೂ ಅಮೃತಾ ಮೈದಾನದಲ್ಲಿದ್ದರು.
ಬ್ರೇಕಪ್
ರವಿಶಾಸ್ತ್ರಿ ಅವರು ಅಮೃತಾ ಅವರ ಸೌಂದರ್ಯಕ್ಕೆ ಮನಸೋತಿದ್ದರು. ಅವರು ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಿದ್ದರು. ಹಾಲಿನಂತಿದ್ದ ಈ ಪ್ರೀತಿಗೆ ಮದುವೆ ಅಡ್ಡಿಯಾಗಿತ್ತು. ಅಂದರೆ ಮದುವೆ ವಿಷಯ ಪ್ರಸ್ತಾಪಗೊಂಡಾಗ ಅಮೃತಾ ಅವರಿಗೆ ರವಿಶಾಸ್ತ್ರಿ ಒಂದು ಕಂಡೀಷನ್ ಹಾಕಿದ್ದರು.
ಮದುವೆ ಆದ ನಂತರ ಮಾಡೆಲಿಂಗ್ ಮತ್ತು ಸಿನಿಮಾಗಳಲ್ಲಿ ನಟಿಸದಂತೆ ಮಾಜಿ ಕೋಚ್ ಅಮೃತಾಗೆ ಹೇಳಿದ್ದರಂತೆ. ಈ ಕಂಡೀಷನ್‌ಗೆ ಅಮೃತ ಒಪ್ಪಿಗೆ ಕೊಡಲಿಲ್ಲ. ಹೀಗಾಗಿ ಇಬ್ಬರ ನಡುವಿನ ಪ್ರೀತಿಯ ಸೇತುವೆ ಮುರಿದು ಬಿದ್ದಿತ್ತು.
ಬ್ರೇಕಪ್ ನಂತರ ಅಮೃತಾ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾಗಿದ್ದರು. ಆದಾಗ್ಯೂ, ನಂತರ ಸೈಫ್, ಕರೀನಾ ಕಪೂರ್ ಅವರನ್ನು ಮದುವೆಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications