Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರಂಭಿಕ ಆವೃತ್ತಿಯಿಂದ ಇಲ್ಲಿವರೆಗೆ ಎಲ್ಲ ಟಿ20 ವಿಶ್ವಕಪ್‌ಗಳನ್ನು ಆಡುತ್ತಿರುವ ಆಟಗಾರರು ಯಾರು ಗೊತ್ತೇ?

ಮೇ 30 ಗುರುವಾರ, 2007 ರಿಂದ ಇಲ್ಲಿವರೆಗೆ ಒಟ್ಟು 8 ಐಸಿಸಿ ಟಿ20 ವಿಶ್ವಕಪ್‌ ಆವೃತ್ತಿಗಳು ನಡೆದಿವೆ. ಇದೀಗ 9ನೇ ಆವೃತ್ತಿಯ ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಜೂನ್ 2ರಿಂದ ಆರಂಭವಾಗಲಿದೆ.

ಈ ಮೆಗಾ ಟೂರ್ನಿಯಲ್ಲಿ ಭಾರತ ತಂಡವು ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಅದಕ್ಕೂ ಮುನ್ನ ಐಸಿಸಿ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ, ಈ ಟೂರ್ನಿಯ ಆರಂಭದಿಂದಲೂ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿರುವ ಇಂತಹ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

Do you know the players who have played in all the T20 World Cups

ಟೀಮ್‌ ಇಂಡಿಯಾ ಆರಂಭಿಕ ಬ್ಯಾಟರ್‌ ಹಾಗು ನಾಯಕ ರೋಹಿತ್ ಶರ್ಮಾ ಮತ್ತು ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಆವೃತ್ತಿಗಳಲ್ಲಿ ಆಡಿದ ಕ್ರಿಕೆಟಿಗರಾಗಿ ಉಳಿದಿದ್ದಾರೆ. ಇದುವರೆಗೆ ನಡೆದ 8 ಆವೃತ್ತಿಗಳಲ್ಲಿ ರೋಹಿತ್ ಮತ್ತು ಶಕೀಬ್ ಮಾತ್ರ ಭಾಗವಹಿಸಿರುವ ಇಬ್ಬರು ಕ್ರಿಕೆಟಿಗರು.

ಈಗ ಇಬ್ಬರು ಟಿ20 ವಿಶ್ವಕಪ್‌ನ 9ನೇ ಆವೃತ್ತಿಯಲ್ಲಿಯೂ ಕಾಣಿಸಿಕೊಳ್ಳಲಿದ್ದು, ನಾಯಕರಾಗಿ ತಮ್ಮ ತಮ್ಮ ತಂಡಗಳನ್ನು ಮುನ್ನೆಡೆಸಲಿದ್ದಾರೆ. ಈ ಇಬ್ಬರೂ ಕ್ರಿಕೆಟಿಗರು 2007 ರಿಂದ 2022 ರವರೆಗಿನ ಪ್ರತಿ ಆವೃತ್ತಿಯಲ್ಲಿ ಆಡುವಾಗ ಅದ್ಭುತ ಪ್ರದರ್ಶನ ನೀಡಿದ್ದಾರೆ.

Do you know the players who have played in all the T20 World Cups

ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ಶಕೀಬ್ ಅದ್ಭುತ ಪ್ರದರ್ಶನ

ರೋಹಿತ್ ಶರ್ಮಾ 2007-2022ರ ಟಿ20 ವಿಶ್ವಕಪ್‌ನಲ್ಲಿ 39 ಪಂದ್ಯಗಳ 36 ಇನ್ನಿಂಗ್ಸ್‌ಗಳಲ್ಲಿ 9 ಅರ್ಧಶತಕಗಳ ಸಹಾಯದಿಂದ ಒಟ್ಟು 963 ರನ್ ಗಳಿಸಿದ್ದಾರೆ. ರೋಹಿತ್ ಇದುವರೆಗೆ 8 ಸೀಸನ್‌ಗಳಲ್ಲಿ 91 ಬೌಂಡರಿ ಮತ್ತು 35 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಅವಧಿಯಲ್ಲಿ ರೋಹಿತ್ ಅವರ ಸರಾಸರಿ 34.39 ಮತ್ತು ಸ್ಟ್ರೈಕ್ ರೇಟ್ 127.88 ಆಗಿತ್ತು.

ಶಕೀಬ್ ಅಲ್ ಹಸನ್ 2007-2022ರ ಟಿ20 ವಿಶ್ವಕಪ್‌ನಲ್ಲಿ 36 ಪಂದ್ಯಗಳ 36 ಇನ್ನಿಂಗ್ಸ್‌ಗಳಲ್ಲಿ 3 ಅರ್ಧಶತಕಗಳೊಂದಿಗೆ 742 ರನ್ ಗಳಿಸಿದ್ದಾರೆ. ಶಕೀಬ್ ತಮ್ಮ ಬ್ಯಾಟ್‌ನಿಂದ 62 ಬೌಂಡರಿ ಮತ್ತು 23 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಈ ವಿಶ್ವಕಪ್‌ನಲ್ಲಿ ಅವರ ಸರಾಸರಿ 23.93 ಮತ್ತು ಸ್ಟ್ರೈಕ್ ರೇಟ್ 122.44. ಇದಲ್ಲದೇ ಶಕೀಬ್ 47 ವಿಕೆಟ್ ಕಬಳಿಸಿದ್ದಾರೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Story first published: Thursday, May 30, 2024, 23:04 [IST]
Other articles published on May 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+