ಐಪಿಎಲ್ 2025: ಸೌದಿ ಅರೇಬಿಯಾ ಅಲ್ಲ; ಈ ಸುಂದರ ನಗರದಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ
ದಿನದಿಂದ ದಿನಕ್ಕೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆ ಕುತೂಹಲ ಮೂಡಿಸುತ್ತಿದೆ. ಪ್ರತಿಯೊಂದು ಹಂತದಲ್ಲಿ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ಹೊಸ ಅಪ್ಡೇಟ್‌ಗಳು ಹೊರ ಬೀಳುತ್ತಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಮೆಗಾ ಹರಾಜಿ ಪ್ರಕ್ರಿಯೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಇತ್ತೀಚೆಗೆ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ನಿಯಮಗಳನ್ನು ಹೊರಡಿಸಿದೆ. ಫ್ರಾಂಚೈಸಿಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲೂ ಗಡುವು ನೀಡಿದೆ. ಜೊತೆಗೆ ನವೆಂಬರ್ ಕೊನೆಯ ವಾರದ ಅಥವಾ ಡಿಸೆಂಬರ್ ಆರಂಭದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಸಜ್ಜಾಗುತ್ತಿದೆ. ಆದರೆ, ಹರಾಜಿ ಪ್ರಕ್ರಿಯೆಯನ್ನು ನಡೆಸಲು ಸ್ಥಳವನ್ನು ಆಯ್ಕೆ ಮಾಡಲು ಬಿಸಿಸಿಐಗೆ ಇನ್ನೂ ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ಬಿಗ್ ಅಪ್ಡೇಟ್ ಹೊರ ಬಿದ್ದಿದೆ.

ಈ ಬಾರಿ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದಲ್ಲಿ ನಡೆಯಲಿದೆ ಎಂದು ಇತ್ತೀಚೆಗೆ ವರದಿಗಳು ಬಂದಿದ್ದವು. ಇದೀಗ ಹೊಸ ವರದಿಯೊಂದು ಹೊರಬಿದ್ದಿದ್ದು, ಸೌದಿ ಅರೇಬಿಯಾ ಜೊತೆಗೆ ಹೊಸ ದೇಶವನ್ನು ಬಿಸಿಸಿಐ ಮೆಗಾ ಹರಾಜಿಗೆ ಪರಿಗಣಿಸಲಾಗುತ್ತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳು ಸಿಂಗಾಪುರದಲ್ಲಿ ಮೆಗಾ ಹರಾಜಿ ಪ್ರಕ್ರಿಯೆ ನಡೆಯಲು ಸಿದ್ಧತೆ ನಡೆಸಿದ್ದಾರೆ. ಸೌದಿ ಅರೇಬಿಯಾ ಹೆಸರನ್ನು ಇನ್ನೂ ಪರಿಗಣಿಸಲಾಗುತ್ತಿದೆ ಎಂದು ವರದಿ ಹೇಳುತ್ತವೆ. ಆದರೆ ಬಿಸಿಸಿಐ ಮೂಲಗಳ ಪ್ರಕಾರ, ಸಿಂಗಾಪುರವನ್ನು ಮೆಗಾ ಹರಾಜಿಗೆ ಆಯ್ಕೆ ಮಾಡಿದ್ದಾರೆ.
ಸೌದಿ ಅರೇಬಿಯಾದ ನಗರಗಳಾದ ರಿಯಾದ್ ಮತ್ತು ಜೆಡ್ಡಾಗಳು ಸ್ಥಳಗಳಲ್ಲಿ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯಬಹುದು. ಆದರೆ ಹೆಚ್ಚಿನ ವೆಚ್ಚವು ಸ್ಥಳದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಬಿಸಿಸಿಐಗೆ ವಿಳಂಬವಾಗಬಹುದು. ಇದೀಗ ಇತ್ತೀಚಿನ ವರದಿಯೊಂದು ಈ ಪಟ್ಟಿಯಲ್ಲಿ ಸಿಂಗಾಪುರವನ್ನೂ ಸೇರಿಸಿದೆ. ಮುಂದಿನ ಕೆಲವು ವಾರಗಳಲ್ಲಿ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮೆಗಾ ಹರಾಜಿನ ಮೊದಲು ಫ್ರಾಂಚೈಸಿ ತಂಡಗಳು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಯೋಜಿಸುತ್ತಿವೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಮೆಗಾ ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಆಯೋಜಿಸುತ್ತಿದೆ.
2008 ರಿಂದ 2024 ರವರೆಗೆ ಐಪಿಎಲ್ ಹರಾಜು ಪ್ರಕ್ರಿಯೆಗಳನ್ನು ಆಯೋಜಿಸಿದ ನಗರಗಳು
- ಮುಂಬೈ: 2008
- ಗೋವಾ: 2009
- ಮುಂಬೈ: 2010
- ಬೆಂಗಳೂರು: 2011, 2012, 2014, 2015, 2016, 2017, 2018, 2022
- ಜೈಪುರ: 2019
- ಕೋಲ್ಕತ್ತಾ: 2020
- ಚೆನ್ನೈ:2013, 2021
- ಕೊಚ್ಚಿ : 2023
- ದುಬೈ:2024
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications