ಆರ್‌ಸಿಬಿ ಬಿಗ್ ಆಫರ್ ತಿರಸ್ಕರಿಸಿದ್ದ ಈ ಬೌಲರ್ ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತಾ?
ಟೀಮ್ ಇಂಡಿಯಾ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕಾಲದಲ್ಲಿ ವಿಶ್ವದ ಟಾಪ್ ಕ್ಲಾಸ್ ಎಲ್ಲಾ ಬೌಲರ್‌ಗಳಿಗೆ ಬೆವರಿಳಿಸಿದ್ದಾರೆ. ಅವರು ಒಮ್ಮೆ ಕ್ರೀಸ್‌ನಲ್ಲಿ ಕಚ್ಚಿ ನಿಂತರೆ ಔಟ್ ಮಾಡುವುದು ಬೌಲರ್‌ಗಳಿಗೆ ಸವಾಲಾಗಿತ್ತು. ಆದರೆ ಅವರಿಗೆ ಆಸ್ಟ್ರೇಲಿಯಾದ ಬೌಲರ್‌ವೊಬ್ಬರು ಸಾಕಷ್ಟು ಕಾಟ ನೀಡಿದ್ದಾರೆ.
ಕಾಂಗೂರು ಪಡೆಯ ಈ ಬೌಲರ್ ತಮ್ಮ ಸ್ವಿಂಗ್ ಮತ್ತು ವೇಗದ ಮೂಲಕ ಕೇವಲ ಸೆಹ್ವಾಗ್ ಅವರಿಗೆ ಮಾತ್ರವಲ್ಲದೆ, ವಿಶ್ವದ ಶ್ರೇಷ್ಠ ಬ್ಯಾಟರ್‌ಗಳನ್ನು ಕಂಗೆಡಿಸಿದ್ದಾರೆ. ಈ ಬೌಲರ್ ಇಂದು (ಗುರುವಾರ, ಸೆಪ್ಟೆಂಬರ್ 12) 47ನೇ ವರ್ಷಕ್ಕೆ ಕಾಲಿಟ್ಟರು. ಅವರು ಬೇರೆ ಯಾರು ಅಲ್ಲ, ಆಸ್ಟ್ರೇಲಿಯಾದ ಮಾಜಿ ಸ್ಟಾರ್ ವೇಗದ ಬೌಲರ್ ನಾಥನ್ ಬ್ರಾಕೆನ್.

2001 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಾಥನ್ ಬ್ರಾಕೆನ್ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದರು. 2007ರಲ್ಲಿ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಅವರು 2009 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.
ಆರ್‌ಸಿಬಿ ಬಿಗ್ ಆಫರ್
46 ವರ್ಷದ ಬ್ರಾಕೆನ್ 2008ರಲ್ಲಿ ಸತತವಾಗಿ ಗಾಯಗೊಂಡು ತಂಡದಿಂದ ದೂರ ಉಳಿದಿದ್ದರು. ಇದರಿಂದಾಗಿ ಅವರು ದೀರ್ಘಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಪರಿಣಾಮ 2009ರಲ್ಲಿ ನಿವೃತ್ತಿ ಘೋಷಿಸಿದ್ದರು. ಮೊಣಕಾಲಿನ ಗಾಯದಿಂದಾಗಿ 2011 ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತರಾದ ಬ್ರಾಕನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 1.3 ಕೋಟಿಗೆ ಖರೀದಿಸಿತು. ಆದರೆ ಅವರು ಆಡಲು ನಿರಾಕರಿಸಿದ್ದರು. ಅಂದು ಆರ್‌ಸಿಬಿ ಅವರನ್ನು ತಮ್ಮ ತಂಡದ ಪ್ರಮುಖ ವೇಗದ ಬೌಲರ್ ಆಗಿ ಮಾಡಲು ಬಯಸಿತ್ತು.
ಏನ್ ಮಾಡ್ತಾ ಇದ್ದಾರೆ?
13 ವರ್ಷಗಳ ಹಿಂದೆ ಆರ್‌ಸಿಬಿ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದ ಬ್ರಾಕೆನ್ ಇಂದು ಸಿಡ್ನಿಯ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೈದಾನದಲ್ಲಿ ಅವರ ಔಟ್‌ಗೋಯಿಂಗ್ ಬಾಲ್‌ಗಳು ಯಾವಾಗಲೂ ಬ್ಯಾಟರ್‌ಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದವು. ಬ್ರಾಕೆನ್ ನಿರಂತರವಾಗಿ ಗಾಯಗೊಳ್ಳದಿದ್ದರೆ, ಅವರನ್ನು ಆಸ್ಟ್ರೇಲಿಯಾದ ಅಗ್ರ ಬೌಲರ್‌ಗಳಲ್ಲಿ ಪಟ್ಟಿಗೆ ಸೇರಿಸಬಹುದಾಗಿತ್ತು. ಅವರಿಗೆ ಇನ್ನೂ ಯಾವುದೇ ಕೋಚಿಂಗ್ ಆಫರ್ ಕೂಡ ಬಂದಿಲ್ಲ. ಈ ಕಾರಣಕ್ಕಾಗಿ ಅವರು ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಬ್ರಾಕನ್ ಈಗ ಉದ್ಯೋಗ ಮಾಡುತ್ತಾ ತಮ್ಮ ಸುಂದರ ಜೀವನ ನಡೆಸುತ್ತಿದ್ದಾರೆ.
ಸೆಹ್ವಾಗ್ vs ಬ್ರಾಕನ್
ವಿಶ್ವ ಕ್ರಿಕೆಟ್‌ನಲ್ಲಿ ಬ್ರಾಕನ್ ಮತ್ತು ಸೆಹ್ವಾಗ್ ನಡುವಿನ ಪೈಪೋಟಿ ಸಾಕಷ್ಟು ಫೇಮಸ್ ಆಗಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಬೌಲರ್ ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರನಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದರು. ಬ್ರಾಕನ್ 16 ಇನ್ನಿಂಗ್ಸ್‌ಗಳಲ್ಲಿ ಸೆಹ್ವಾಗ್ ಅವರನ್ನು 7 ಬಾರಿ ಔಟ್ ಮಾಡಿದ್ದರು. ಬ್ರಾಕನ್ ಅವರ 233 ಎಸೆತಗಳನ್ನು ಎದುರಿಸಿ ಸೆಹ್ವಾಗ್ 148 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications