ICC: ಅಧ್ಯಕ್ಷ ಪಟ್ಟಕ್ಕೇರಿದ ಐವರು ಭಾರತೀಯರು ಯಾರು ಗೊತ್ತೇ?
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಸಾಕಷ್ಟು ಸಾಧನೆ ಮಾಡಿದೆ. 2019ರಲ್ಲಿ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಭಾರತೀಯ ಕ್ರಿಕೆಟ್ ಹೊಸ ರೂಪ ಪಡೆದುಕೊಂಡಿದೆ.
ಈಗ ಜಯ್ ಶಾ ಕ್ರಿಕೆಟ್‌ನ ಬಾಸ್ ಆಗಲು ಹೊರಟಿದ್ದಾರೆ ಅಂದರೆ ಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಐಸಿಸಿ ಅಧ್ಯಕ್ಷರಾದ ಐದನೇ ಭಾರತೀಯರಾಗಿದ್ದಾರೆ. ಇಲ್ಲಿವರೆಗೆ ಐಸಿಸಿ ಅಧ್ಯಕ್ಷ ಪಟ್ಟಕ್ಕೇರಿದ ಐವರು ಭಾರರತೀಯರ ಬಗ್ಗೆ ಇಲ್ಲಿದೆ ಮಾಹಿತಿ.

ಐಸಿಸಿ ಅಧ್ಯಕ್ಷರಾಗಿದ್ದ ಭಾರತೀಯರು
1) ಜಗಮೋಹನ್ ದಾಲ್ಮಿಯಾ
ಜಗಮೋಹನ್ ದಾಲ್ಮಿಯಾ ಐಸಿಸಿ ಅಧ್ಯಕ್ಷರಾದ ಮೊದಲ ಭಾರತೀಯ. ಅವರು 1997 ರಿಂದ 2000 ರವರೆಗೆ ಸೇವೆ ಸಲ್ಲಿಸಿದ್ದಾರೆ. 1996ರ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜನೆ ಮಾಡಲು ದಾಲ್ಮಿಯಾ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರು. ಅವರ ಅಧಿಕಾರಾವಧಿಯಲ್ಲಿ ಐಸಿಸಿ ಹೊಸ ಆಯಾಮಗಳನ್ನು ಸಾಧಿಸಿತ್ತು.
2) ಶರದ್ ಪವಾರ್
ಐಸಿಸಿ ಅಧ್ಯಕ್ಷರಾದ ಎರಡನೇ ಭಾರತೀಯ ಶರದ್ ಪವಾರ್. ಅವರು 2010 ರಿಂದ 2012 ರವರೆಗೆ ಐಸಿಸಿ ಬಾಸ್ ಆಗ ಕಾರ್ಯನಿರ್ವಹಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ವಿಶ್ವದಾದ್ಯಂತ ಕ್ರಿಕೆಟ್‌ನ ಮೂಲಸೌಕರ್ಯವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಇದಲ್ಲದೆ, ಮಹಾರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು
3) ನಾರಾಯಣಸ್ವಾಮಿ ಶ್ರೀನಿವಾಸನ್
ನಾರಾಯಣಸ್ವಾಮಿ ಶ್ರೀನಿವಾಸನ್ ಐಸಿಸಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೂರನೇ ಭಾರತೀಯ. ಅವರ ಅಧಿಕಾರಾವಧಿ 2014 ರವರೆಗೆ ಮಾತ್ರ ಇತ್ತು. ಆದರೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಿಗ್ ತ್ರೀ ಮಾದರಿಯನ್ನು ಪ್ರಾರಂಭಿಸಿದ್ದರು.
ಶ್ರೀನಿವಾಸನ್ ಅವರು ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದರು. ಬಿಸಿಸಿಐ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ಅವರು 2014 ರಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು.
4) ಶಶಾಂಕ್ ಮನೋಹರ್
ಐಸಿಸಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಾಲ್ಕನೇ ಭಾರತೀಯ ಎಂದರೆ ಶಶಾಂಕ್ ಮನೋಹರ್. ತಮ್ಮ 5 ವರ್ಷಗಳ ಅಧಿಕಾರಾವಧಿವನ್ನು ಯಶಸ್ವಿಯಾಗಿ ಪೂರೈಸಿದ್ದರು. ಅವರು 2015 ರಿಂದ 2020 ರವರೆಗೆ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಿಕೆಟ್‌ನಲ್ಲಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications