For Quick Alerts
ALLOW NOTIFICATIONS  
For Daily Alerts
 

Unbreakable record: ಒಂದೇ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಅಪಾಯಕಾರಿ ಬೌಲರ್!

ಈವರಗೆ ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳು ಸೃಷ್ಟಿ ಆಗಿದೆ. ಕಾಲ ಕ್ರಮೇಣ ಹಲವು ದಾಖಲೆಗಳು ಮುರಿಯಲ್ಪಟಿವೆ. ಆದರೆ 112 ವರ್ಷಗಳ ಕಾಲ ಮುರಿಯಲು ಅಸಾಧ್ಯವಾಗದ ದಾಖಲೆಯೊಂದು ಇಂದಿಗೂ ಅಜರಾಮರವಾಗಿ ಉಳಿದಿದೆ.

ಇದು ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆಯಾಗಿದೆ. ಈ ಸಾಧನೆಯನ್ನು 1912ರಲ್ಲಿ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್ ಅವರು ಮಾಡಿದ್ದಾರೆ. ಜಿಮ್ಮಿ ಮ್ಯಾಥ್ಯೂಸ್ ಈ ಸಾಧನೆ ಮಾಡಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Do you know who is the first bowler to take double hat-trick wickets in the world

ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ನಡುಕ

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಿಮ್ಮಿ ಮ್ಯಾಥ್ಯೂಸ್ ತಮ್ಮ ಮಾಂತ್ರಿಕ ಸ್ಪಿನ್ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಅವರ ಬೌಲಿಂಗ್ ದಾಳಿಯನ್ನು ಎದುರಿಸಲು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಭಯಬೀತಾಗಿದ್ದರು.

ಈ ಪಂದ್ಯದಲ್ಲಿ ಮ್ಯಾಥ್ಯೂಸ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಹ್ಯಾಟ್ರಿಕ್‌ ವಿಕೆಟ್‌ಗಳನ್ನು ಕಬಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಆರ್ ಬ್ಯೂಮಾಂಟ್, ಎಸ್‌ಜೆ ಪೆಗ್ಲರ್ ಮತ್ತು ಟಿಎ ವಾರ್ಡ್‌ರನ್ನು ಔಟ್ ಮಾಡಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್‌ಡಬ್ಲ್ಯೂ ಟೇಲರ್, ಆರ್‌ಒ ಶ್ವಾರ್ಟ್ಜ್ ಮತ್ತು ಟಿಎ ವಾರ್ಡ್‌ ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಈ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದರು.

ಫೀಲ್ಡರ್‌ಗಳಿಲ್ಲದೆ ಬ್ಯಾಟರ್‌ಗಳು ಔಟ್

ಮತ್ತೊಂದು ವಿಶೇಷವೆನೆಂದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಹ್ಯಾಟ್ರಿಕ್ ಮಾತ್ರವಲ್ಲ, ಮ್ಯಾಥ್ಯೂಸ್ ಅವರು ಪಡೆದ ವಿಕೆಟ್‌ಗಳಲ್ಲಿ ಫೀಲ್ಡರ್ ಕೊಡುಗೆ ಇರಲಿಲ್ಲ. ಅವರು 2 ಬ್ಯಾಟರ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದರೆ, ಇಬ್ಬರನ್ನು ಎಲ್‌ಬಿಡಬ್ಲ್ಯೂ ಬಲೆ ಬೀಳಿಸಿದ್ದರು.

ಅಲ್ಲದೆ ಸ್ವತಃ 2 ಕ್ಯಾಚ್‌ಗಳನ್ನು ಹಿಡಿದು ಈ ಸಾಧನೆ ಮಾಡಿದ್ದರು. ಈ ಮಾರಕ ಬೌಲಿಂಗ್ ಹೊರತಾಗಿಯೂ, ಅವರ ವೃತ್ತಿಜೀವನವು ಅತ್ಯಂತ ಕಡಿಮೆ ಸಮಯದಲ್ಲಿ ಅಂತ್ಯವಾಯಿತು.

ಮ್ಯಾಥ್ಯೂಸ್ ಅವರ ಕ್ರಿಕೆಟ್ ಜೀವನವು ದೀರ್ಘಕಾಲದವರೆಗೆ ಮುಂದುವರೆಯಲಿಲ್ಲ. ಅವರು ಆಸ್ಟ್ರೇಲಿಯಾ ವಿರುದ್ಧ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 1912 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು.

ಜಿಮ್ಮಿ ಮ್ಯಾಥ್ಯೂಸ್ 1943 ರಲ್ಲಿ ನಿಧನರಾದರು. ಆದರೆ ಅವರು ಸೃಷ್ಟಿಸಿದ ಈ ದಾಖಲೆ ಇನ್ನೂ ಕ್ರಿಕೆಟ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಇಂದಿಗೂ ಈ ದಾಖಲೆಯನ್ನು ಯಾವುದೇ ಬೌಲರ್ ಮುರಿಯುವುದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿಯೂ ಇದು ಅಸಾಧ್ಯ.

Story first published: Sunday, August 25, 2024, 22:18 [IST]
Other articles published on Aug 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+