IPL 2025: ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಪಾಕಿಸ್ತಾನ ಕ್ರಿಕೆಟಿಗ ಯಾರು ಗೊತ್ತೇ?
ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಕಳೆದ ದಶಕದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಒಂದೇ ಒಂದು ದ್ವಿಪಕ್ಷೀಯ ಪಂದ್ಯವನ್ನು ನಡೆದಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ ನಂತರ ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತು. ಭಾರತವು 2026 ರ ಟಿ20 ವಿಶ್ವಕಪ್ ಆಯೋಜಿಸುತ್ತಿದ್ದು, ಪಾಕಿಸ್ತಾನವು ತಟಸ್ಥ ಸ್ಥಳದಲ್ಲಿ ಆಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2008 ರಲ್ಲಿ ಪ್ರಾರಂಭವಾದಾಗ ಪಾಕಿಸ್ತಾನ ಸೇರಿದಂತೆ ವಿಶ್ವ ಕ್ರಿಕೆಟ್‌ನ ತಂಡಗಳ ಆಟಗಾರರನ್ನು ಐಪಿಎಲ್ ಸ್ವಾಗತಿಸಿತು. ಪಾಕಿಸ್ತಾನ ಆಟಗಾರರಿಗೆ ಐಪಿಎಲ್ ಉದ್ಘಾಟನಾ ಸೀಸನ್‌ನಲ್ಲಿ ಆಡಲು ಅವಕಾಶ ನೀಡಲಾಯಿತು. ಆದರೆ ಮುಂಬೈನಲ್ಲಿ ನಡೆದ ಬಾಂಬ್ ದಾಳಿಯ ನಂತರ ಪಾಕಿಸ್ತಾನ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಲಾಯಿತು. ಪಾಕಿಸ್ತಾನ ಕ್ರಿಕೆಟ್‌ನ ಕೆಲವು ಸ್ಟಾರ್ ಆಟಗಾರರಾದ ಶೋಯೆಬ್ ಮಲಿಕ್, ಶೋಯೆಬ್ ಅಖ್ತರ್, ಮಿಸ್ಬಾ-ಉಲ್-ಹಕ್, ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್, ಸಲ್ಮಾನ್ ಬಟ್, ಉಮರ್ ಗುಲ್ ಮತ್ತು ಸೊಹೈಲ್ ತನ್ವೀರ್ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು.

ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಪಾಕಿಸ್ತಾನದ ಕೆಲವು ಆಟಗಾರರು ಆಡಿದ್ದರೂ, ಎಡಗೈ ವೇಗದ ಬೌಲರ್ ಸೊಹೈಲ್ ತನ್ವೀರ್ ಎಲ್ಲರ ಚಿತ್ತ ಕದ್ದಿದ್ದರು. ಸೊಹೈಲ್ ತನ್ವೀರ್ ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ರಾಜಸ್ಥಾನ ರಾಯಲ್ಸ್ ಪರ ಕಾಣಿಸಿಕೊಂಡಿದ್ದ ಸೊಹೈಲ್ ತನ್ವೀರ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದ ಮೊದಲ ಮತ್ತು ಏಕೈಕ ಪಾಕಿಸ್ತಾನಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪರ್ಪಲ್ ಕ್ಯಾಪ್ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡಲಾಗುತ್ತದೆ. ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತನ್ವೀರ್ ಕೇವಲ 11 ಪಂದ್ಯಗಳಲ್ಲಿ 12.09 ಸರಾಸರಿ ಮತ್ತು 6.46 ರ ಎಕಾನಮಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ವೇಳೆ ಒಂದು ಬಾರಿ 5 ವಿಕೆಟ್ ಪಡೆದಿದ್ದರೆ, ಮತ್ತೊಂದು ಬಾರಿ 4 ವಿಕೆಟ್ ಅನ್ನು ಕಬಳಿಸಿದ್ದರು. ಸುಮಾರು 11 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅವರ (14/6) ಅತ್ಯುತ್ತಮ ಸ್ಪೆಲ್ ಆಗಿತ್ತು. 2019ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಅಲ್ಜಾರಿ ಜೋಸೆಫ್ (12/6) ತನ್ವೀರ್ ದಾಖಲೆಯನ್ನು ಮುರಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications