2023ರ ಐಸಿಸಿ ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಆಘಾತಕಾರಿ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ಸೆಮಿಫೈನಲ್ ತಲುಪುವ ಹಾದಿ ಬಹುತೇಕ ಕ್ಷೀಣಿಸಿದೆ.
ಹಾಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ನಾಲ್ಕನೇ ಸೋಲಿನ ನಂತರ ಕಳಪೆ ಅಭಿಯಾನ ಮುಂದುವರೆಸಿದ ಇಂಗ್ಲೆಂಡ್, ತನ್ನ ಪ್ರಶಸ್ತಿ ರಕ್ಷಣೆಯಲ್ಲಿ ಏಕೆ ಎಡವುತ್ತಿದ್ದೇವೆ ಎಂಬುದಕ್ಕೆ ತನ್ನ ಬಳಿ ಸ್ಪಷ್ಟ ಉತ್ತರವಿಲ್ಲ ಎಂದು ನಾಯಕ ಜೋಸ್ ಬಟ್ಲರ್ ಹೇಳಿದ್ದಾರೆ.

ಜಾನಿ ಬೇರ್‌ಸ್ಟೋವ್ 30 ರನ್ ಗಳಿಸುವ ಮೂಲಕ ಉತ್ತಮ ಆರಂಭದ ಹೊರತಾಗಿಯೂ ಬೆಂಗಳೂರಿನಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕ್ರಮಾಂಕ ಕುಸಿಯಿತು. ಬೆನ್ ಸ್ಟೋಕ್ಸ್ 43 ರನ್ ಗಳಿಸಿದ್ದು ಬಿಟ್ಟರೆ, ಬೇರೆ ಯಾವುದೇ ಆಂಗ್ಲ ಬ್ಯಾಟ್ಸ್‌ಮನ್‌ಗಳು ಗಮನಾರ್ಹ ಕೊಡುಗೆ ನೀಡಲಿಲ್ಲ.
ಶ್ರೀಲಂಕಾ ಪರ ಲಹಿರು ಕುಮಾರ ಮೂರು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ 33.2 ಓವರ್‌ಗಳಲ್ಲಿ ಒಟ್ಟು 156 ರನ್‌ಗಳಿಗೆ ಸರ್ವಪತನ ಕಂಡಿತು.
ಇದಕ್ಕುತ್ತರವಾಗಿ, ಶ್ರೀಲಂಕಾ ತನ್ನ ಆರಂಭಿಕ ಹಿನ್ನಡೆಯೊಂದಿಗೆ ಪ್ರಾರಂಭಿಸಿತು. ತಂಡದ ಮೊತ್ತ 23 ರನ್‌ಗಳಾಗಿದ್ದಾಗ ಕುಸಲ್ ಪೆರೆರಾ ಮತ್ತು ನಾಯಕ ಕುಸಾಲ್ ಮೆಂಡಿಸ್ ಅವರ ವಿಕೆಟ್ ಕಳೆದುಕೊಂಡಿತು.

ನಂತರ ಜೊತೆಯಾದ ಸದೀರ ಸಮರವಿಕ್ರಮ ಮತ್ತು ಪಾಥುಮ್ ನಿಸ್ಸಾಂಕ ತಲಾ ಅರ್ಧಶತಕಗಳನ್ನು ಗಳಿಸಿದರು ಮತ್ತು ಬಲವಾದ ಜೊತೆಯಾಟವನ್ನು ನಿರ್ಮಿಸಿದರು. ಈ ಜೋಡಿಯು ಮುರಿಯದ 3ನೇ ವಿಕೆಟ್‌ಗೆ 137 ರನ್‌ಗಳ ಜೊತೆಯಾಟ ಶ್ರೀಲಂಕಾ ತಂಡವನ್ನು 146 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಸುಲಭ ಗೆಲುವಿಗೆ ಕಾರಣವಾಯಿತು.
ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರು ತಮ್ಮ ತಂಡ ಅತ್ಯುತ್ತಮ ಪ್ರದರ್ಶನವನ್ನು ಬಹಳ ಹಿಂದೆಯೇ ಕಳೆದುಕೊಂಡಿದೆ. ಇದು ತನಗೆ ಮತ್ತು ತಂಡಕ್ಕೆ ತುಂಬಾ ನಿರಾಶೆಯಾಗಿದೆ ಎಂದು ಹೇಳಿದರು.
"ಇದು ವಿಸ್ಮಯಕಾರಿಯಾಗಿ ಸೋಲು ಮತ್ತು ನಿರಾಶಾದಾಯಕ ಪಂದ್ಯಾವಳಿಯಾಗಿದೆ. ನಾವು ನಮ್ಮ ಅತ್ಯುತ್ತಮ ಪ್ರದರ್ಶನದ ಕೊರತೆ ಹೊಂದಿದ್ದೇವೆ, ಅದರಿಂದ ಬಹಳ ದೂರದಲ್ಲಿದ್ದೇವೆ. ನಾಯಕನಾಗಿ ಉತ್ತಮ ಪ್ರದರ್ಶನ ನೀಡದಿದ್ದಕ್ಕಾಗಿ ನನ್ನ ಮತ್ತು ಎಲ್ಲಾ ಆಟಗಾರರಿಂದ ನಾನು ನಿರಾಶೆಗೊಂಡಿದ್ದೇನೆ," ಎಂದು ಜೋಸ್ ಬಟ್ಲರ್ ಒಪ್ಪಿಕೊಂಡರು.
ತಮ್ಮ ತಂಡದ ಕಳಪೆ ವಿಶ್ವಕಪ್ ಅಭಿಯಾನದ ಹಿಂದಿನ ಕಾರಣದ ಬಗ್ಗೆ ಕೇಳಿದಾಗ, ಜೋಸ್ ಬಟ್ಲರ್ ಅವರು ಈ ಸಮಯದಲ್ಲಿ ಸ್ಪಷ್ಟ ಉತ್ತರವಿಲ್ಲ ಎಂದು ಹೇಳಿದರು. ತಂಡದ ನಾಯಕನಾಗಿ ತಾನೂ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ ಎಂದು ತಿಳಿಸಿದರು.
"ಇದು ನಾವು ಉತ್ತರಿಸಲು ಪ್ರಯತ್ನಿಸುತ್ತಿರುವ ಪ್ರಶ್ನೆಯಾಗಿದೆ. ಸದ್ಯಕ್ಕೆ ಯಾವುದೇ ಸ್ಪಷ್ಟ ಉತ್ತರವಿಲ್ಲ. ನಾವು ಸ್ಪಷ್ಟವಾಗಿ ಮಾಡದೆ ಇರುವ ಒಂದು ಅತ್ಯುತ್ತಮ ಸಲಹೆ ಇದ್ದರೆ ನಾವು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತೇವೆ".
"ಆಟಗಾರರ ಪ್ರಯತ್ನಗಳನ್ನು ನಾನು ತಪ್ಪಾಗಿ ಹೇಳಲಾರೆ, ನಾವು ನಮ್ಮ ಅತ್ಯುತ್ತಮವಾದದ್ದಕ್ಕಿಂತ ಬಹಳ ದೂರದಲ್ಲಿ ಆಡುತ್ತಿದ್ದೇವೆ. ಇದು ನನ್ನಿಂದಲೇ ಪ್ರಾರಂಭವಾಗುತ್ತದೆ. ನಾಯಕನಾಗಿ ನಾನು ಮುಂಭಾಗದಿಂದ ಮುನ್ನಡೆಸಬೇಕು ಮತ್ತು ಉತ್ತಮವಾಗಿ ಆಡಲು ನೀವು ಬಯಸುತ್ತೀರಿ. ನನ್ನ ಅತ್ಯುತ್ತಮ ಸಾಧನೆಗೆ ನಾನು ಬಹಳ ಹಿಂದೆ ಇದ್ದೇನೆ," ಎಂದು ಜೋಸ್ ಬಟ್ಲರ್ ತಮನ್ನು ತಾವೇ ಟೀಕಿಸಿಕೊಂಡರು.
ಇಂಗ್ಲೆಂಡ್ ಸಾಕಷ್ಟು ಪ್ರತಿಭೆಗಳನ್ನು ಹೊಂದಿದ್ದರೂ, ತಂಡವು ಕಳಪೆ ಪ್ರದರ್ಶನವನ್ನು ನೋಡುವುದು ನಿರಾಶಾದಾಯಕವಾಗಿದೆ ಮತ್ತು ಆಯ್ಕೆಯು ಅವರಿಗೆ ಸಮಸ್ಯೆಯಾಗಿಲ್ಲ ಎಂದು ಜೋಸ್ ಬಟ್ಲರ್ ಹೇಳಿದರು.
"ತಂಡದಲ್ಲಿ ಬಹಳಷ್ಟು ಅನುಭವಿ ಕ್ರಿಕೆಟಿಗರು, ಕಠಿಣ ಕ್ರಿಕೆಟಿಗರು ಇದ್ದಾರೆ. ಅವರು ಬಹಳಷ್ಟು ಅನುಭವಿಸಿದ್ದಾರೆ, ಅವರು ಆತ್ಮವಿಶ್ವಾಸದ ಜನರು. ನೀವು ರಾತ್ರೋರಾತ್ರಿ ಕೆಟ್ಟ ಆಟಗಾರ ಅಥವಾ ಕೆಟ್ಟ ತಂಡವಾಗುವುದಿಲ್ಲ, ಆದರೆ, ಇದು ದೊಡ್ಡ ಹತಾಶೆಯಾಗಿದೆ. ಇನ್ನುಳಿದ ಪಂದ್ಯಗಳಲ್ಲಿ ತಂಡವು ಉತ್ತಮ ಕ್ರಿಕೆಟ್ ಆಡಲು ಮರಳಬೇಕೆಂದು ಬಯಸುವುದಾಗಿ," ಎಂದು ಹೇಳಿ ಜೋಸ್ ಬಟ್ಲರ್ ಮಾತು ಮುಗಿಸಿದರು.