Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ವಿರುದ್ಧ ಗೆದ್ದು, ಆಷಸ್ ವಶಪಡಿಸಿಕೊಂಡ ಆಸೀಸ್

ಪರ್ತ್, ಡಿಸೆಂಬರ್ 18: ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 41ರನ್ ಗಳಿಂದ ಆಸ್ಟ್ರೇಲಿಯಾ ತಂಡ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಸ್ಕೋರ್ ಕಾರ್ಡ್

ವಾಕಾ ಮೈದಾನದಲ್ಲಿ ಸ್ಮಿತ್ ಪಡೆಯ ಗೆಲುವಿನ ನಾಗಾಲೋಟಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿತ್ತು. ಆದರೆ, ಜೋಶ್ ಹೇಜಲ್ ವುಡ್ ಅವರು 48ರನ್ನಿತ್ತು 5ವಿಕೆಟ್ ಕಿತ್ತು, ಟೆಸ್ಟ್ ಕ್ರಿಕೆಟ್ ನಲ್ಲಿ 6ನೇ ಬಾರಿಗೆ ಐದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ್ದಲ್ಲದೆ, ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 218 ಸ್ಕೋರಿಗೆ ಆಲೌಟ್ ಆಗುವಂತೆ ಮಾಡಿದರು.

Dominant Australia regain the Ashes

ಬ್ರಿಸ್ಬೇನ್, ಅಡಿಲೇಡ್ ನಲ್ಲಿ ಸೋಲು ಕಂಡಿದ್ದ ಇಂಗ್ಲೆಂಡ್ ಹಣೆಬರಹ ಪರ್ತ್ ನಲ್ಲೂ ಬದಲಾಗಲಿಲ್ಲ.

ಇಂಗ್ಲೆಂಡಿನ 403 ಸ್ಕೋರಿಗೆ ಪ್ರತಿಯಾಗಿ ಆಸ್ಟ್ರೇಲಿಯಾ 662/9 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತು. ಸ್ಮಿತ್ 239 ಹಾಗೂ ಮಿಚೆಲ್ ಮಾರ್ಷ್ 181 ರನ್ ಚೆಚ್ಚಿದ್ದರು.

ಇಂಗ್ಲೆಂಡ್ ಪರ ಮಲಾನ್ ಚೊಚ್ಚಲ ಶತಕ ಬಾರಿಸಿದ್ದಲ್ಲದೆ, ಎರಡನೇ ಇನ್ನಿಂಗ್ಸ್ ನಲ್ಲಿ 54ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಆಷಸ್ ನಲ್ಲಿ ಇಂಗ್ಲೆಂಡ್ ಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಬರೆದಿದೆ. 33ನೇ ಆಷಸ್ ಸರಣಿ ಇದಾಗಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡವು ತವರು ನೆಲದಿಂದ ಹೊರಗೆ ಸತತ ಏಳನೇ ಸೋಲು ಕಂಡಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Read in English: Australia regain the Ashes
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+