Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs UAE Asia Cup T20: ಯುಎಇ ವಿರುದ್ಧ ಭರತಕ್ಕೆ 9 ವಿಕೆಟ್‌ ಜಯ: ಶುಭಾರಂಭ

ದುಬೈ: ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್ ಹಾಗೂ ಶಿವಂ ದುಬೆ ಅವರ ಕರಾರುವಾಕ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ "ಎ" ಗುಂಪಿನ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

58 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ ಆರಂಭಿಕರು ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಆರಂಭಿಕರಾಗಿ ಕಾಣಿಸಿಕೊಂಡ ಅಭಿಷೇಕ್ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಅಭಿಷೇಕ್ ಶರ್ಮಾ ತಾವು ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಭರವಸೆ ಮೂಡಿಸಿದರು. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 30 ರನ್ ಬಾರಿಸಿ ಔಟ್ ಆದರು.

Dominant India thrashes UAE in Asia Cup opener as Kuldeep Yadav shines

ಟೀಮ್ ಇಂಡಿಯಾದ ಪರ ಆರಂಭಿಕರಾಗಿ ಶುಭಮನ್‌ ಗಿಲ್ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 20 ರನ್‌ ಬಾರಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ ತಾವು ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದರು. ಇವರು 2 ಎಸೆತಗಳಲ್ಲಿ 7 ರನ್‌ ಬಾರಿಸಿ ಅಜೇಯರಾಗುಳಿದರು. ಟೀಮ್ ಇಂಡಿಯಾ 58 ರನ್‌ಗಳ ಗುರಿಯನ್ನು ಬೆನ್ನಟ್ಟಲು ಟೀಮ್ ಇಂಡಿಯಾಕ್ಕೆ 4.3 ಓವರ್‌ (27 ಎಸೆತ) ಸಾಕಾಯಿತು.

ರನ್‌ ಕಲೆ ಹಾಕಲು ಯುಎಇ ಪರದಾಟ

ಟೀಮ್ ಇಂಡಿಯಾ ಟಾಸ್‌ ಗೆದ್ದು ಫೀಲ್ಡಿಂಗ್ ಮಾಡಲು ಮುಂದಾಯಿತು. ಯುಎಇ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಯುಎಇ ತಂಡದ ಆರಂಭಿಕರಾದ ಅಲಿಶಾನ್‌ ಶರಾಫ್‌ ಹಾಗೂ ಮೊಹಮ್ಮದ್ ವಾಸೀಮ್ ಜೋಡಿ 3.4 ಓವರ್‌ಗಳಲ್ಲಿ 26 ಸಾಧಾರಣ ಜೊತೆಯಾಟವನ್ನು ನೀಡಿತು. ಆರಂಭಿಕ ಅಲಿಶಾನ್‌ ಜಸ್ಪ್ರೀತ್ ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು. ನಾಯಕ ಮೊಹಮ್ಮದ್‌ ವಾಸೀಮ್‌ 3 ಬೌಂಡರಿ ನೆರವಿನಿಂದ 19 ರನ್‌ ಬಾರಿಸಿದ್ದಾಗ ಕುಲ್‌ದೀಪ್ ಯಾದವ್ ತೋಡಿದ ಖೆಡ್ಡಾಗೆ ಬಲಿಯಾದರು. ಉಳಿದಂತೆ ಯುಎಇ ತಂಡದ ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟರ್‌ ಡಬಲ್‌ ಡಿಜಿಟ್ ಮುಟ್ಟಲಿಲ್ಲ. ಯುಎಇ 13.1 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲೌಟ್ ಆಯಿತು.

ಭಾರತ ತಂಡದ ಪರ ರಿಸ್ಟ್‌ ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್, ರಾಹುಲ್ ಚೋಪ್ರಾ, ನಾಯಕ ಮೊಹಮ್ಮದ್ ವಾಸೀಮ್,ಹರ್ಷಿತ್ ಕೌಶಿಕ್, ಹೈದರ್ ಅಲಿ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ಕುಲ್‌ದೀಪ್‌ 7 ರನ್‌ ನೀಡಿ 4 ವಿಕೆಟ್‌ ಪಡೆದರು. ಇನ್ನು ಆಲ್‌ರೌಂಡರ್‌ ಶಿವಂ ದುಬೆ 3 ವಿಕೆಟ್‌ ಪಡೆದರೆ, ಜಸ್ಪ್ರೀತ್ ಬುಮ್ರಾ, ಕ್ಷರ್ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದರು.

ಟೀಮ್ ಇಂಡಿಯಾ ತನ್ನ ಲೀಗ್‌ ಹಂತದ ಮುಂದಿನ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೆ.14 ರಂದು ಆಡಲಿದೆ.

Story first published: Wednesday, September 10, 2025, 21:54 [IST]
Other articles published on Sep 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+