ವೀಕ್ಷಕರಿಲ್ಲದೆ ಕ್ರಿಕೆಟ್ ನಡೆಸುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ

ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳೂ ಸ್ಥಗಿತವಾಗಿದೆ. ಈ ಮಧ್ಯೆ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳನ್ನು ಪ್ರೇಕ್ಷಕರಿಲ್ಲದೆ ನಡೆಸಬೇಕು, ಈ ಮೂಲಕ ಕ್ರೀಡಾ ಚಟುವಟಿಕೆ ನಡೆಸಲು ಅನುವು ಮಾಡಿಕೊಡಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆರಂಭಿಸುವ ಬಗ್ಗೆ ಸಂಪೂರ್ಣವಾಗಿ ಒಪ್ಪಿಗೆಯನ್ನು ಸೂಚಿಸಿಲ್ಲ. ಆದರೆ ಈ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿ ಹಾಕಿಯೂ ಇಲ್ಲ. ಅಭಿಮಾನಿಗಳೇ ಇಲ್ಲದೆ ಕ್ರಿಕೆಟ್ ಆಡುವುದು ಅಭಿಮಾನಿಗಳ ಜೊತೆಗಿನ ಕ್ರಿಕೆಟ್ ಆಟದ ಅನುಭವದಂತಿರುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕ್ರಿಕೆಟ್ ಪುನರಾರಂಭವಾಗಬೇಕಾದರೆ ಮುಚ್ಚಿದ ಕ್ರೀಡಾಂಗಣದಲ್ಲಿ ಅಂದರೆ ಪ್ರೇಕ್ಷಕರಿಲ್ಲದೆ ಆಡುವುದೊಂದೇ ದಾರಿ ಎಂಬಂತಾ ಸ್ಥಿತಿಯಿದೆ. ಇದಕ್ಕೆ ವಿರಾಟ್ ಕೊಹ್ಲಿ, "ಸದ್ಯ ಅದೊಂದು ಸಣ್ಣ ಅವಕಾಶವಿದೆ. ಇದು ಸಾಧ್ಯವಾಗುವುದಾದರೆ ಅದನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ನನಗೆ ಪ್ರಾಮಾಣಿಕವಾಗಿ ಏನೂ ತಿಳಿಯುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಯಾಕೆಂದರೆ ನಾವೆಲ್ಲಾ ಯಾವಾಗಲೂ ಆಡುವುದು ಸಾಕಷ್ಟು ಕ್ರಿಕೆಟ್ ಮೇಲೆ ಅಭಿಮಾನ ಹೊಂದಿರುವ ಪ್ರೇಕ್ಷಕರ ಮಧ್ಯೆ, ಪ್ರೇಕ್ಷಕರಿಲ್ಲದೆ ಸ್ಪರ್ಧೆ ಮತ್ತಷ್ಟು ತೀವ್ರವಾಗಿರಬಹುದು ಆದರೆ ಅಭಿಮಾನಿಗಳು ಆಟಗಾರರೊಂದಿಗೆ ಸ್ಪಂದಿಸುವ ರೀತಿ ಮತ್ತು ಸ್ಟೇಡಿಯಮ್ ಪೂರ್ತಿಯಿದ್ದಾಗಿನ ಆಟದ ಒತ್ತಡಗಳು ಮತ್ತು ಆಗಿನ ಭಾವನೆಗಳನ್ನು ಮರುಸೃಷ್ಟಿಸಲು ಕಷ್ಟವಾಗಲಿದ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಒಂದು ವೇಳೆ ಅಭಿಮಾನಿಗಳು ಇಲ್ಲದೆ ನಡೆಯುವುದಾದರೂ ಕೆಲ ಮ್ಯಾಜಿಕಲ್ ಸಂಗತಿಗಳು ನಡೆಯಲು ಸಾಧ್ಯವಾಗಲಾರದು ಎನಿಸುತ್ತದೆ, ಕೆಲ ಮ್ಯಾಜಿಕಲ್ ಕ್ಷಣಗಳು ಆ ಅಭಿಮಾನಿಗಳ ಸಮೂಹದ ವಾತಾವರಣದ ಕಾರಣದಿಂದಾಗಿ ಸೃಷ್ಠಿಯಾಗಿರುತ್ತದೆ. ಯಾವ ರೀತಿಯಲ್ಲಿ ಆಡಬೇಕೆಂದು ನಿರ್ಧಾರವಾಗುತ್ತದೋ ಹಾಗೆ ನಾವು ಆಡಲು ಸಿದ್ಧರಿದ್ದೇವೆ ಆದರೆ ಕೆಲ ಮ್ಯಾಜಿಕಲ್ ಕ್ಷಣಗಳು ಇದರಿಂದ ಕಳೆದುಕೊಳ್ಳಬೇಕಾಗುತ್ತದೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications