Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ತಂಡದಲ್ಲಿ ಮತ್ತೆ ಸ್ಥಾನಗಳಿಸುವ ವಿಶ್ವಾಸ ವ್ಯಕ್ತಪಡಿಸಿದ ಅಜಿಂಕ್ಯ ರಹಾನೆ

‘Don’t Know When Opportunity Will Come But I’m Ready’: Ajinkya Rahane

ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಏಕದಿನ ತಂಡದಲ್ಲಿ ಮತ್ತೆ ಸ್ಥಾನಗಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆಯುವ ವಿಸ್ವಾಸವಿದೆ ಎಂದು ರಹಾನೆ ಕ್ರಿಕ್ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದಲ್ಲಿ ಕಳೆದ ಹಲವು ಸಮಯಗಳಿಂದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ರಹಾನೆ ಕೊನೆಯ ಬಾರಿಗೆ 2018 ರ ಫೆಬ್ರವರಿಯಲ್ಲಿ ಏಕದಿನ ಪಂದ್ಯ ಆಡಿದ್ದರು. ಹೀಗಾಗಿ ಮತ್ತೆ ತಂಡದಲ್ಲಿ ಸ್ಥಾನವನ್ನು ಪಡೆಯುವ ವಿಶ್ವಾಸವಿದೆಯೆಂದು ರಹಾನೆ ಹೇಳಿಕೊಂಡಿದ್ದಾರೆ.

ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿದ ರಹಾನೆ ತಾನು ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್‌ಗೆ ಇಳಿಯಲಿ ಸಿದ್ಧ ಎಂಬುದಾಗಿ ಹೇಳಿದ್ದಾರೆ. ಆರಂಭಿಕ ಅಥವಾ ನಂಬರ್ 4ರ ಸ್ಥಾನದಲ್ಲಾದರು ಸರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಆದರೆ ಅವಕಾಶ ಯಾವಾಗ ದೊರೆಯಲಿದೆ ಎಂದು ಗೊತ್ತಿಲ್ಲ. ಆದರೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಮಾನಸಿಕವಾಗಿ ಸಿದ್ಧ ಎಂದು ರಹಾನೆ ಹೇಳಿದ್ದಾರೆ.

ಇನ್ನು ಇದೇ ಸಂದರ್ಶನದಲ್ಲಿ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಪ ನಾಯಕನಾಗಿ ತನ್ನ ಜವಾಬ್ಧಾರಿಯನ್ನು ಹೇಳಿದ್ದಾರೆ. ಆಟದ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಸಂದರ್ಭಕ್ಕೆ ತಕ್ಕನಾಗಿ ಸಲಹೆಗಳನ್ನು ಕೇಳಿದಾಗ ಅದಕ್ಕೆ ಪೂರಕ ಉತ್ತರಗಳನ್ನು ಸಿದ್ದಪಡಿಸಿಕೊಂಡಿರಬೇಕು ಎಂದಿದ್ದಾರೆ. ನಾಯಕನ ಹಿಂಬದಿಯ ಆಸನದಲ್ಲಿದ್ದು ಜವಾಬ್ಧಾರಿಯನ್ನು ನಿರ್ವಹಿಸುವುದೇ ಉಪನಾಯಕನ ಕರ್ತವ್ಯ ಎಂದಿದ್ದಾರೆ ರಹಾನೆ.

ಕೆಲವು ಸಂದರ್ಭದಗಳಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ಸಮರ್ಪಕ ಫಲಿತಾಂಶ ಬರದಿರಬಹುದು. ಆಗ ನನ್ನ ಚಿಂತನೆಯನ್ನು ನಾಯಕ ವಿರಾಟ್ ಕೊಹ್ಲಿಯ ಜೊತೆಗೆ ಹಂಚಿಕೊಳ್ಳುತ್ತೇನೆ. ಕೆಲ ಸಂದರ್ಭಗಳಲ್ಲಿ ಅದು ಕೆಲಸ ಮಾಡುವ ಸಾಧ್ಯತೆಯಿರುತ್ತದೆ ಎಂದು ಅಜಿಂಕ್ಯ ರಹಾನೆ ಕ್ರಿಕ್ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Story first published: Tuesday, July 14, 2020, 9:42 [IST]
Other articles published on Jul 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+