Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿಯನ್ನು ನಿವೃತ್ತಿಯತ್ತ ತಳ್ಳಬೇಡಿ: ಇಂಗ್ಲೆಂಡ್ ಮಾಜಿ ನಾಯಕ

Dont push MS Dhoni into retirement early, says Nasser Hussain

ನವದೆಹಲಿ, ಏಪ್ರಿಲ್ 11: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯಂತ ಆಟಗಾರನನ್ನು ನಿವೃತ್ತಿಯತ್ತ ತಳ್ಳಬೇಡಿ. ಒಂದು ಪೀಳಿಗೆಯಲ್ಲಿ ಸಿಗುವ ಅಪರೂಪದ ಆಟಗಾರರಲ್ಲಿ ಒಬ್ಬರು ಧೋನಿಯಂತವರು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸೆರ್ ಹುಸೇನ್ ಹೇಳಿದ್ದಾರೆ.

39ರ ಹರೆಯದ ಎಂಎಸ್ ಧೋನಿ ಭಾರತಕ್ಕೆ ಇನ್ನೊಂದಿಷ್ಟು ಕೊಡುಗೆ ಕೊಡುವವರಿದ್ದಾರೆ ಎಂದು ನಾಸೆರ್ ಹೇಳಿಕೊಂಡಿದ್ದಾರೆ. ಧೋನಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವ ನಾಸೆರ್, ಕ್ರಿಕೆಟ್‌ ಜಗತ್ತಿನಲ್ಲಿ ಕೇಳಿಬರುತ್ತಿದ್ದ ಗೌರವಾನ್ವಿತ ಹೆಸರುಗಳಲ್ಲಿ ಒಂದು.

Dont push MS Dhoni into retirement early, says Nasser Hussain

'ಒಂದು ಸಾರಿ ಧೋನಿ ಹೋದ ಬಳಿಕ ಧೋನಿಯನ್ನು ಮತ್ತೆ ವಾಪಸ್ ಕರೆಸಿಕೊಳ್ಳಲಾಗೊಲ್ಲ. ಒಬ್ಬ ಆಟಗಾರನಿರುತ್ತಾನೆ. ಆತನಿದ್ದಾಗ ಸುತ್ತಲಿನವರೆಲ್ಲ ಆತನನ್ನು ಮೆಚ್ಚುಕೊಳ್ಳುತ್ತಾರೆ. ಯಾಕೆಂದರೆ ಆತ ಒಂದು ತಲೆಮಾರಿನ ಆಟಗಾರ,' ಎಂದು ನಾಸಿರ್ ಹೇಳಿದರು.

'ಹೀಗಾಗಿ ಧೋನಿಯನ್ನು ಇಷ್ಟುಬೇಗ ನಿವೃತ್ತಿಯತ್ತ ತಳ್ಳಬೇಡಿ. ಧೋನಿಯ ಮನಸ್ಥಿತಿ ಧೋನಿಗಷ್ಟೇ ಗೊತ್ತು. ಕೊನೆಯಲ್ಲಿ ಆಯ್ಕೆದಾರರು ಆಯ್ಕೆ ಮಾಡುತ್ತಾರೆ ಮತ್ತು ಆಯ್ಕೆಯಾಗದ ಆಟಗಾರರು ಹಾಗೇ ಉಳಿದುಬಿಡುತ್ತಾರೆ,' ಎಂದು ನಾಸಿರ್ ವಿವರಿಸಿದರು. 52ರ ಹುಸೇನ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಈ ವಿಚಾರ ಹಂಚಿಕೊಂಡರು.

Story first published: Saturday, April 11, 2020, 16:40 [IST]
Other articles published on Apr 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+