'ಧೋನಿಯೊಂದಿಗೆ ಹೋಲಿಸಬೇಡಿ, ಅನುಷ್ಕಾ ನನಗೆ ಪ್ರೇರಣೆ'
ಕೋಲ್ಕತ್ತಾ, ಜೂ. 05: ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಬಾಂಗ್ಲಾದೇಶದಲ್ಲಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿರುವ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟ್ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಭಾರತ ಸಾಕಷ್ಟು ಪಂದ್ಯಗಳನ್ನು ಗೆದ್ದಿದೆ. ಅವರ ನಾಯಕತ್ವದಲ್ಲಿ ನಾನು ಅಪಾರ ಅನುಭವ ಪಡೆದುಕೊಂಡಿದ್ದೇನೆ. ಈಗ ಪೂರ್ಣ ಪ್ರಮಾಣದ ನಾಯಕನಾಗಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಏಕದಿನ ಕ್ರಿಕೆಟ್ ನಲ್ಲಿ ಕ್ಷಿಪ್ರ ಗತಿಗಯ ರನ್ ಸರದಾರ ಹೇಳಿದ್ದಾರೆ.[ಯುವಿ 'ಭಾಭಿ'ಯನ್ನು ಬಾಚಿ ತಬ್ಬಿಕೊಂಡ ವಿರಾಟ್ ಕೊಹ್ಲಿ!]

ಇದು ನನಗೆ ಸಿಕ್ಕಿರುವ ಉತ್ತಮ ಅವಕಾಶ. ನನ್ನ ನಿಜವಾದ ನಾಯಕತ್ವ ಪರೀಕ್ಷೆ ಇಲ್ಲಿಂದ ಆರಂಭವಾಗುತ್ತದೆ. ಬಾಂಗ್ಲಾ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ ಹೇಳಿದ್ದಾರೆ.[ಬೆರಳಲ್ಲಿ ಬೆರಳಿಟ್ಟು ಹೆಜ್ಜೆ ಹಾಕಿದ ಮೀರಾ-ಮಾಧವ]
ನನ್ನ ಸಾಧನೆಗೆ ಅನುಷ್ಕಾ ಪ್ರೇರಣೆ
ನನ್ನ ಹಾಗೂ ಅನುಷ್ಕಾಶರ್ಮಾ ಬಗ್ಗೆ ಕೆಲ ಸಲ್ಲದ ಅಭಿಪ್ರಾಯಗಳು ವ್ಯಕ್ತವಾಗಿದ್ದರೂ ಸಹ ನನ್ನ ಸಾಧನೆಯಲ್ಲಿ ಆಕೆಯ ಪಾತ್ರವೂ ಇದೆ. ಅನೇಕ ಸಂದರ್ಭಗಳಲ್ಲಿ ನನಗೆ ಆಕೆ ಭಾವನಾತ್ಮಕವಾಗಿ ಶಕ್ತಿ ತುಂಬಿದ್ದಾಳೆ ಎಂದು ತನ್ನ ಪ್ರೇಯಸಿಯ ಬಗ್ಗೆ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications