ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಧಮಾಕಾ
ಬಿಸಿಸಿಐ 2026-27ರ ದೇಶೀಯ ಋತುವಿನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ( ಬಿಸಿಸಿಐ) ಬಿಡುಗಡೆ ಮಾಡಿದೆ. ಈ ದೇಶೀಯ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳಿಗೆ 17 ನಗರಗಳು ಆತಿಥ್ಯ ನೀಡಲಿವೆ. ಈ ವರ್ಷ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಫುಲ್ ಮನೋರಂಜನೆ ನೀಡಲಿದೆ. ಈ ವೇಳೆ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತಕ್ಕೆ ಪ್ರವಾಸ ಬೆಳೆಸಲಿವೆ.
ವೆಸ್ಟ್ ಇಂಡೀಸ್‌ನ ಭಾರತ ಪ್ರವಾಸದೊಂದಿಗೆ ಭಾರತೀಯ ತಂಡದ ದೇಶೀಯ ಋತುವು ಆರಂಭವಾಗಲಿದೆ. ಈ ವೇಳೆ 3 ಪಂದ್ಯಗಳ ಏಕದಿನ ಸರಣಿ, ಬಳಿಕ 5 ಟಿ20 ಪಂದ್ಯಗಳನ್ನು ಆಡಲಿದೆ. ಏಕದಿನ ಪಂದ್ಯಗಳಿಗೆ ತಿರುವನಂತಪುರ, ಗುವಾಹಟಿ ಮತ್ತು ಚಂಡೀಗಢದಲ್ಲಿ ಪಂದ್ಯ ನಡೆಯಲಿದೆ. ಟಿ 20 ಪಂದ್ಯಗಳು ಲಕ್ನೋ, ರಾಂಚಿ, ಇಂದೋರ್, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಡಿಸೆಂಬರ್ 2026 ರಲ್ಲಿ ಶ್ರೀಲಂಕಾ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ಪಂದ್ಯಗಳು ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ರಾಜ್‌ಕೋಟ್, ಕಟಕ್ ಮತ್ತು ಪುಣೆಯಲ್ಲಿ ಟಿ20 ಪಂದ್ಯ ನಡೆಯಲಿದೆ.

ಭಾರತ ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಈ ಸರಣಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಜನವರಿ 2027 ರಲ್ಲಿ, ಜಿಂಬಾಬ್ವೆ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಲಿದೆ.
ಬೆಂಗಳೂರಿನಲ್ಲಿ ಎರಡು ಪಂದ್ಯ
ಕಾಲ್ತುಳಿತ ಬಳಿಕ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಹಲವು ಮಾರ್ಗಸೂಚಿಗಳ ಪಾಲನೆಯ ಬಳಿಕ ಬೆಂಗಳೂರಿನಲ್ಲಿ ಐಪಿಎಲ್ ನಡೆಯಲಿದೆ. ಈಗ ಅಂತಾರಾಷ್ಟ್ರೀಯ ಪಂದ್ಯಗಳು ಸಹ ಬೆಂಗಳೂರಿನತ್ತ ಮುಖ ಮಾಡಿವೆ.
RCB vs SRH: ಮೊದಲ ಪಂದ್ಯಕ್ಕೆ ಹೇಗಿರಲಿದೆ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್?
ವೆಸ್ಟ್ ಇಂಡೀಸ್ ಭಾರತ ಪ್ರವಾಸ
ಸೆಪ್ಟೆಂಬರ್ 27: 1 ಏಕದಿನ ಪಂದ್ಯ: ತಿರುವನಂತಪುರ
ಸೆಪ್ಟೆಂಬರ್ 30: 2ನೇ ಏಕದಿನ ಪಂದ್ಯ: ಗುವಾಹಟಿ
ಅಕ್ಟೋಬರ್ 3: 3ನೇ ಏಕದಿನ ಪಂದ್ಯ: ನ್ಯೂ ಚಂಡೀಗಢ
ಅಕ್ಟೋಬರ್ 6: 1 ಟಿ20: ಲಕ್ನೋ
ಅಕ್ಟೋಬರ್ 9: 2ನೇ ಟಿ20: ರಾಂಚಿ
ಅಕ್ಟೋಬರ್ 11: 3ನೇ ಟಿ20: ಇಂದೋರ್
ಅಕ್ಟೋಬರ್ 14: 4ನೇ ಟಿ20: ಹೈದರಾಬಾದ್
ಅಕ್ಟೋಬರ್ 17: 5ನೇ ಟಿ20: ಬೆಂಗಳೂರು

ಶ್ರೀಲಂಕಾ ಭಾರತ ಪ್ರವಾಸ
ಡಿಸೆಂಬರ್ 13: 1 ಏಕದಿನ ಪಂದ್ಯ: ದೆಹಲಿ
ಡಿಸೆಂಬರ್ 16: 2ನೇ ಏಕದಿನ ಪಂದ್ಯ: ಬೆಂಗಳೂರು
ಡಿಸೆಂಬರ್ 19: 3ನೇ ಏಕದಿನ ಪಂದ್ಯ: ಅಹಮದಾಬಾದ್
ಡಿಸೆಂಬರ್ 22: 1 ಟಿ20: ರಾಜ್‌ಕೋಟ್
ಡಿಸೆಂಬರ್ 24: 2ನೇ ಟಿ20: ಕಟಕ್
ಡಿಸೆಂಬರ್ 27: 3ನೇ ಟಿ20: ಪುಣೆ
ಜಿಂಬಾಬ್ವೆ ಭಾರತ ಪ್ರವಾಸ
ಜನವರಿ 3, 2027: 1 ಏಕದಿನ: ಕೋಲ್ಕತ್ತಾ
ಜನವರಿ 6, 2027: 2ನೇ ಏಕದಿನ: ಹೈದರಾಬಾದ್
ಜನವರಿ 9, 2027: 3ನೇ ಏಕದಿನ: ಮುಂಬೈ
ಆಸ್ಟ್ರೇಲಿಯಾ ಭಾರತ ಪ್ರವಾಸ
ಜನವರಿ 21-25, 2027: 1 ಟೆಸ್ಟ್: ನಾಗ್ಪುರ
ಜನವರಿ 29-ಫೆಬ್ರವರಿ 2, 2027: 2ನೇ ಟೆಸ್ಟ್: ಚೆನ್ನೈ
ಫೆಬ್ರವರಿ 11-15: 3ನೇ ಟೆಸ್ಟ್: ಗುವಾಹಟಿ
ಫೆಬ್ರವರಿ 19-23, 2027: 4ನೇ ಟೆಸ್ಟ್: ರಾಂಚಿ
ಫೆಬ್ರವರಿ 27-ಮಾರ್ಚ್ 3: 5ನೇ ಟೆಸ್ಟ್: ಅಹಮದಾಬಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications