IND vs ENG: ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲೂ ವಿರಾಟ್ ಆಡುವುದು ಡೌಟ್! ಟೆಸ್ಟ್ ಸ್ಪೆಷಲಿಸ್ಟ್‌ಗೆ ಅವಕಾಶ ಸಿಗುವ ಸಾಧ್ಯತೆ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದುವರೆಗೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಈಗ ಶೀಘ್ರದಲ್ಲೇ ಆಯ್ಕೆದಾರರು ಉಳಿದ ಮೂರು ಟೆಸ್ಟ್‌ಗಳಿಗೆ ತಂಡವನ್ನು ಘೋಷಿಸಬಹುದು. ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್‌ಗಳಿಂದಲೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದೂರ ಉಳಿಯಬಹುದು ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ.
ಮೊದಲ ಟೆಸ್ಟ್‌ನಲ್ಲಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಗಾಯಗೊಂಡಿರುವುದು ಗಮನಾರ್ಹ. ಇದಾದ ಬಳಿಕ ಇಬ್ಬರೂ ಆಟಗಾರರು ಎರಡನೇ ಟೆಸ್ಟ್‌ನಿಂದ ಹೊರಬಿದ್ದರು. ಇನ್ನು ಉಳಿದ ಮೂರು ಟೆಸ್ಟ್‌ಗಳಿಂದಲೂ ರವೀಂದ್ರ ಜಡೇಜಾ ಹೊರಗುಳಿಯಬಹುದು ಎಂದು ನಂಬಲಾಗಿದೆ. ಆದರೆ, ಕೆಎಲ್ ರಾಹುಲ್ ಮರಳುವ ಸಾಧ್ಯತೆ ಹೆಚ್ಚಿದೆ.

ಚೇತೇಶ್ವರ ಪೂಜಾರ ಕಮ್‌ಬ್ಯಾಕ್?
ತವರಿನ ಪರಿಸ್ಥಿತಿಯಲ್ಲಿ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು, ಅವರು ಕೊನೆಯ ಮೂರು ಟೆಸ್ಟ್‌ಗಳಿಗೆ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿದೆ. ಪೂಜಾರ ಹಿಂತಿರುಗಲು ಎರಡನೇ ದೊಡ್ಡ ಕಾರಣವೆಂದರೆ ಶುಭ್‌ಮನ್ ಗಿಲ್ ಸತತವಾಗಿ ಮೂರನೇ ಸ್ಥಾನದಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬಿಗ್ ಇನ್ನಿಂಗ್ಸ್ ಆಡಬಲ್ಲ ಬ್ಯಾಟ್ಸ್‌ಮನ್ ಅವಶ್ಯಕತೆ ಭಾರತ ತಂಡಕ್ಕೆ ಇದೆ. ಪೂಜಾರ ಈ ಪಾತ್ರದಲ್ಲಿ ಸಂಪೂರ್ಣವಾಗಿ ಫಿಟ್ ಆಗುವ ಆಟಗಾರ.
ಪೂಜಾರ ಒಂದೊಮ್ಮೆ ಕ್ರೀಸ್‌ಗೆ ತಳವೂರಿ ನಿಂತಿದ್ದೇ ಆದಲ್ಲಿ ಎದುರಾಳಿ ಬೌಲರ್‌ಗಳ ನಿದ್ದೆ ಗೆಡಿಸಬಲ್ಲರು. ಅದರಲ್ಲೂ ತವರಿನ ಅಂಗಳದಲ್ಲಿ ಪೂಜಾರ ಆಟ ಅಪಾಯಕಾರಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಪೂಜಾರ ಅಂಗಳಕ್ಕೆ ಮರಳುವುದು ಅನಿವಾರ್ಯ.

ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್‌ಗಳಿಗೆ ಭಾರತದ ಸಂಭಾವ್ಯ 15 ಸದಸ್ಯರ ತಂಡ:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಸರ್ಫರಾಜ್ ಖಾನ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್. , ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ.
ಭಾರತ-ಇಂಗ್ಲೆಂಡ್ ನಡುವಿನ ಕೊನೆಯ ಮೂರು ಟೆಸ್ಟ್ ಸರಣಿಯ ವೇಳಾಪಟ್ಟಿ
- 3 ನೇ ಟೆಸ್ಟ್: ಭಾರತ vs ಇಂಗ್ಲೆಂಡ್, 15-19 ಫೆಬ್ರವರಿ, ರಾಜ್ಕೋಟ್, ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ
- 4 ನೇ ಟೆಸ್ಟ್: ಭಾರತ vs ಇಂಗ್ಲೆಂಡ್, 23-27 ಫೆಬ್ರವರಿ, ರಾಂಚಿ ಜೆಎಸ್‌ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂ
- ಐದನೇ ಟೆಸ್ಟ್: ಭಾರತ vs ಇಂಗ್ಲೆಂಡ್, ಮಾರ್ಚ್ 7-11, ಧರ್ಮಶಾಲಾ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications