ಡಿಪಿ ವರ್ಲ್ಡ್ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೀರ್ಘಾವಧಿಯ ಒಪ್ಪಂದ

ಐಪಿಎಲ್‌ನ ಬೆಂಗಳೂರು ಮೂಲದ ಖ್ಯಾತ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಾಗತಿಕವಾಗಿ ಸ್ಮಾರ್ಟ್ ಲಾಜಿಸ್ಟಿಕ್ ಸಲೂಶನ್ಸ್ ಅನ್ನು ಪೂರೈಕೆ ಮಾಡುತ್ತಿರುವ ಪ್ರಮುಖ ಕಂಪನಿಯಾಗಿರು ಡಿಪಿ ವರ್ಲ್ಡ್ ಜೊತೆಗೆ ದೀರ್ಘಾವಧಿಯ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಆರ್‌ಸಿಬಿ ತಂಡಕ್ಕೆ ಡಿಪಿ ಜಾಗತಿಕ ಲಾಜಿಸ್ಟಿಕ್ ಪಾಲುದಾರ ಸಂಸ್ಥೆಯಾಗಲಿದೆ.

ಆರ್ ಸಿಬಿ ಮತ್ತು ಡಿಪಿ ಜಾಗತಿಕ ಪಾಲುದಾರಿಕೆಯನ್ನು ಮೌಲ್ಯಗಳ ಪರಸ್ಪರ ಹಂಚಿಕೆ ಆಧಾರದ ಮೇಲೆ ಮಾಡಿಕೊಳ್ಳಲಾಗಿದೆ. ಎರಡೂ ಸಂಸ್ಥೆಗಳು ನಾಯಕತ್ವ, ಉತ್ಸಾಹ ಮತ್ತು ಉತ್ಕೃಷ್ಠತೆಯ ಸಂಸ್ಕೃತಿಯನ್ನು ಹೊಂದಿರುವ ಬೋಲ್ಡ್ ಮತ್ತು ಶಕ್ತಿಶಾಲಿ ಸಂಸ್ಥೆಗಳಾಗಿವೆ.

ಜಿಯೋ ಧನ್ ಧನಾ ಧನ್: ಉಚಿತವಾಗಿ ಐಪಿಎಲ್‌ ಲೈವ್ ನೋಡಿ

ಈ ಪಾಲುದಾರಿಕೆ ಅಡಿಯಲ್ಲಿ ಡಿಪಿ ವರ್ಲ್ಡ್ ತನ್ನ ಜಾಗತಿಕ ಲಾಜಿಸ್ಟಿಕ್ಸ್ ಪರಿಣಿತಿಯನ್ನು ಆರ್‌ಸಿಬಿಯ ಲಾಜಿಸ್ಟಿಕ್ ಅಗತ್ಯತೆಗಳನ್ನು ಪೂರೈಸಲು ಬಳಸಿಕೊಳ್ಳಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಬಿಸಿಸಿಐ ಟಿ20 ಟೂರ್ನಿ ಯುಎಇಗೆ ಸ್ಥಳಾಂತರವಾಗಿರುವ ಹಿನ್ನೆಲೆಯಲ್ಲಿ ಆಟಗಾರರ ಪ್ರಯಾಣ, ಟ್ರೈನಿಂಗ್ ಗೇರ್, ಮ್ಯಾಚ್ ಕಿಟ್ ಗಳನ್ನು ಯಾವುದೇ ತೊಡಕು ಇಲ್ಲದೇ ಭಾರತದಿಂದ ದುಬೈಗೆ ಸಾಗಿಸಲು ಪೂರಕವಾಗಿ ಈ ಒಪ್ಪಂದ ಮಹತ್ವದ್ದಾಗಿದೆ.

ಡಿಪಿ ವಲ್ಡ್ ಈವರೆಗೆ ಗಾಲ್ಫ್ ಮತ್ತು ಫಾರ್ಮುಲಾ 1 ಜೊತೆಗೆ ಪಾಲುದಾರಿಕೆಯನ್ನು ಹೊಂದಿತ್ತು. ಈಗ ಈ ಪಾಲುದಾರಿಕೆಯಲ್ಲಿ ಕ್ರಿಕೆಟ್‌ಅನ್ನು ಕೂಡ ಸೇರ್ಪಡಿಸಿಗೊಳಿಸಿಕೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರೀಡಾ ಪಾಲುದಾರಿಕೆಗಳ ಪೋರ್ಟ್ ಫೋಲಿಯೋ ವಿಸ್ತರಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಿಪಿ ವರ್ಲ್ಡ್ ಯೂರೋಪಿಯನ್ ಟೂರ್ ಮತ್ತು ಡಿಪಿ ವರ್ಲ್ಡ್ ಟೂರ್ ಚಾಂಪಿಯನ್‌ಶಿಪ್‌ನ ಟೈಟಲ್ ಸ್ಪಾನ್ಸರ್ ಕೂಡ ಆಗಿದೆ.

ಐಪಿಎಲ್ 2020: ಈ ಬಾರಿಯ ಐಪಿಎಲ್ ಬಿಗ್‌ಬಾಸ್ ಮನೆಯಿದ್ದಂತೆ ಎಂದ ಶಿಖರ್ ಧವನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧ್ಯಕ್ಷ ಸಂಜೀವ್ ಚುರಿವಾಲ ಅವರು ಮಾತನಾಡಿ, ಡಿಪಿ ವರ್ಲ್ಡ್ ನೊಂದಿಗೆ ಸಹಭಾಗಿತ್ವವನ್ನು ಹೊಂದಲು ನಮಗೆ ಸಂತಸವೆನಿಸುತ್ತಿದೆ. ಲಾಜಿಸ್ಟಿಕ್ ನಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಡಿಪಿ ವರ್ಲ್ಡ್ ನಾವು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಡಲು ಸಿದ್ಧರಾಗಿರುವ ಈ ಸಂದರ್ಭದಲ್ಲಿ ನಮ್ಮ ಲಾಜಿಸ್ಟಿಕ್ಸ್ ಅಗತ್ಯತೆಗಳನ್ನು ಪೂರೈಸುವಲ್ಲಿ ತನ್ನ ಅನುಭವಗಳನ್ನು ಮತ್ತು ಮೌಲ್ಯವನ್ನು ನೀಡಲಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, September 16, 2020, 11:26 [IST]
Other articles published on Sep 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X