DPL 2026 Auction: ವಿರಾಟ್ ಕೊಹ್ಲಿ ಅಣ್ಣನ ಮಗ ಸೆಹ್ವಾಗ್ ಮಕ್ಕಳಿಗೆ ಲಾಟರಿ
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ದೇಶದ ಆಯಾ ರಾಜ್ಯಗಳು ಸಹ ಇದೇ ಮಾದರಿಯಲ್ಲಿ ಟಿ20 ಕ್ರಿಕೆಟ್ ಟೂರ್ನಿಯನ್ನು ಆಡಿಸುತ್ತಿವೆ. ಇದರಂತೆ ಕರ್ನಾಟಕದಲ್ಲೂ ಈಗ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ನಡೆಯುತ್ತಿದೆ. ಅದರಂತೆ ದೆಹಲಿಯಲ್ಲೂ ಟಿ20 ಕ್ರಿಕೆಟ್ ಆಯೋಜಿಸಲಾಗುತ್ತಿದೆ. ಈ ಕ್ರಿಕೆಟ್ ಟೂರ್ನಿಗಾಗಿ ಜುಲೈ 1 ರಂದು ಆಟಗಾರರ ಹರಾಜು ನಡೆಯಿತು. ಈ ಹರಾಜಿನಲ್ಲಿ ಸ್ಟಾರ್ ಆಟಗಾರರ ವೀರೇಂದ್ರ ಸೆಹ್ವಾಗ್ ಅವರ ಮಕ್ಕಳು ಹಾಗೂ ವಿರಾಟ್ ಕೊಹ್ಲಿ ಅವರ ಅಣ್ಣನ ಮಗ ಆರ್ಯನ್ ಸಹ ಮಾಲೀಕರ ಚಿತ್ತ ಕದ್ದಿಯುವಲ್ಲಿ ಸಫಲರಾಗಿದ್ದಾರೆ.
ದೆಹಲಿ ಪ್ರೀಮಿಯರ್ ಲೀಗ್ 2026 ಹರಾಜು ಜುಲೈ 1 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಿತು. ಹರಾಜಿನ ಅಂಗಳದಲ್ಲಿ 600ಕ್ಕೂ ಹೆಚ್ಚು ಆಟಗಾರರು ಮಾಲೀಕರ ದೃಷ್ಟಿ ನೆಟ್ಟಿದ್ದರು. ಈ ಹರಾಜಿನಲ್ಲಿ ತೇಜಸ್ವಿ ದಹಿಯಾ ಮತ್ತು ಹಿಮ್ಮತ್ ಸಿಂಗ್ ಅವರಂತಹ ಆಟಗಾರರನ್ನು ಕೊಳ್ಳಲು ಮಾಲೀಕರು ಹಣದ ಸುರಿಮಳೆಗೈದರು. ಇದೇ ಹರಾಜಿನಲ್ಲಿ ವಿರಾಟ್ ಕೊಹ್ಲಿ ಅವರ ಅಣ್ಣನ ಮಗ ಆರ್ಯವೀರ್ ಸಹ ಬಿಕರಿಯಾಗುವಲ್ಲಿ ಸಫಲರಾಗಿದ್ದಾರೆ.

ಸಿ ಕ್ಯಾಟಗರಿಯ ಮೂಲಕ ಹರಾಜು ಅಂಗಳ ಪ್ರವೇಶಿಸಿದ ಆರ್ಯವೀರ್ ಮೂಲ ಬೆಲೆ 1 ಲಕ್ಷ ಆಗಿತ್ತು. ಡಿಪಿಎಲ್‌ನ ಎರಡನೇ ಸೀಸನ್‌ನಲ್ಲಿ ಆಡುತ್ತಿದ್ದ ವಿರಾಟ್ ಕೊಹ್ಲಿ ಅವರ ಅಣ್ಣನ ಮಗ ಆರ್ಯವೀರ್ ಕೊಹ್ಲಿಯನ್ನು ಸೆಂಟ್ರಲ್ ದೆಹಲಿ ಕಿಂಗ್ಸ್ ಫ್ರಾಂಚೈಸಿ ₹1.20 ಲಕ್ಷಕ್ಕೆ ಖರೀದಿಸಿತು. ಈ ಮೊದಲು ಆರ್ಯವೀರ್ ಕೊಹ್ಲಿ ಅವರು ದೆಹಲಿ ಸೂಪರ್‌ಸ್ಟಾರ್ಸ್ ತಂಡದ ಭಾಗವಾಗಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಇವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಲಭಿಸಲಿಲ್ಲ. ಈ ಬಾರಿ ಮೊದಲ ಬಾರಿಗೆ ಕಣಕ್ಕೆ ಇಳಿಯುವ ಆಸೆಯನ್ನು ಆರ್ಯವೀರ್ ಹೊಂದಿದ್ದಾರೆ. ಇವರು ಲೆಗ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ.
ಸೆಹ್ವಾಗ್ ಮಕ್ಕಳಿಗೂ ಲಾಟರಿ
ಇನ್ನು ಇದೇ ಹರಾಜಿನ ಅಂಗಳದಲ್ಲಿ ವೀರೇಂದ್ರ ಸೆಹ್ವಾಗ್ ಅವರ ಮಗ ಆರ್ಯವೀರ್ ಸೆಹ್ವಾಗ್ ಅವರನ್ನು ವೆಸ್ಟ್ ದೆಹಲಿ ಲಯನ್ಸ್ ತಂಡ 3 ಲಕ್ಷ ನೀಡಿ ಖರೀದಿಸಿದೆ. ಆರ್ಯವೀರ್ ತಂದೆಯಂತೆ ಸ್ಫೋಟಕ ಬ್ಯಾಟಿಂಗ್ ಮಾಡಲು ಹೆಸರುವಾಸಿ.
ಸೆಹ್ವಾಗ್ ಅವರ ಇನ್ನೊಬ್ಬ ಮಗ 16 ವರ್ಷದ ವೇದಾಂತ್ ಸೆಹ್ವಾಗ್ ಹರಾಜು ಪಟ್ಟಿಯಲ್ಲಿದ್ದರು. ತಂದೆ ಮತ್ತು ಅಣ್ಣನಿಗಿಂತ ಭಿನ್ನವಾಗಿ, ವೇದಾಂತ್ ಒಬ್ಬ ಆಫ್-ಸ್ಪಿನ್ ಆಲ್-ರೌಂಡರ್. ಕಳೆದ ಸೀಸನ್‌ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡದಲ್ಲಿದ್ದ ಇವರು, ಈ ಸೀಸನ್‌ನಲ್ಲಿ 1 ಲಕ್ಷದ ಮೂಲ ಬೆಲೆಗೆ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವನ್ನು ಸೇರಿದ್ದಾರೆ.
ಹೆಚ್ಚಿನ ಮೊತ್ತಕ್ಕೆ ಸೇಲ್ ಆದ ಆಟಗಾರರು
- ತೇಜಸ್ವಿ ದಹಿಯಾ - ರೂ 40 ಲಕ್ಷ - ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಜ್ (ಆರ್‌ಟಿಎಂ)
- ಹಿಮ್ಮತ್ ಸಿಂಗ್ - ರೂ 38 ಲಕ್ಷ - ನವದೆಹಲಿ ಟೈಗರ್ಸ್ (ಆರ್‌ಟಿಎಂ)
- ಅನುಜ್ ರಾವತ್ - ರೂ 27 ಲಕ್ಷ - ಹಳೆ ದೆಹಲಿ 6
- ಸಾರ್ಥಕ್ ರಂಜನ್ - ರೂ 17 ಲಕ್ಷ - ಉತ್ತರ ದೆಹಲಿ ಸ್ಟ್ರೈಕರ್ಸ್ (ಆರ್‌ಟಿಎಂ)
- ಕುಲದೀಪ್ ಯಾದವ್ - ರೂ 10 ಲಕ್ಷ - ಸೆಂಟ್ರಲ್ ದೆಹಲಿ ಕಿಂಗ್ಸ್
- ಸುಯಾಶ್ ಶರ್ಮಾ - 10 ಲಕ್ಷ ರೂ - ಪಶ್ಚಿಮ ದೆಹಲಿ ಲಯನ್ಸ್
- ನವದೀಪ್ ಸೈನಿ - ರೂ 10 ಲಕ್ಷ - ಔಟರ್ ಡೆಲ್ಲಿ ವಾರಿಯರ್ಸ್
- ಸಿಮರ್ಜೀತ್ ಸಿಂಗ್ - 10 ಲಕ್ಷ ರೂ - ಪೂರ್ವ ದೆಹಲಿ ರೈಡರ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

