DPL 2025: ಪ್ರಿಯಾಂಶ್ ಆರ್ಯಾ ಸಿಡಿಲಬ್ಬರದ ಶತಕ: 7 ಬೌಂಡರಿ, 9 ಸಿಕ್ಸರ್
ಐಪಿಎಲ್‌ನಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ, ದೆಹಲಿ ಪ್ರೀಮಿಯರ್ ಲೀಗ್‌ನಲ್ಲೂ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ. ಶುಕ್ರವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡಿಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯಾ ಎದುರಾಳಿ ಬೌಲರ್‌ಗಳ ಮೈಚಳಿ ಬಿಡಿಸಿದರು. ಈ ಮೂಲಕ ಟೂರ್ನಿಯಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಶುಕ್ರವಾರ ಔಟರ್ ದೆಹಲಿ ವಾರಿಯರ್ಸ್ ಹಾಗೂ ಇಸ್ಟ್ ದೆಹಲಿ ರೈಡರ್ಸ್ ನಡುವಣ ಪಂದ್ಯದಲ್ಲಿ ಟಾಸ್ ಇಸ್ಟ್ ದೆಹಲಿ ತಂಡದ ಪಾಲಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಔಟರ್ ದೆಹಲಿ ವಾರಿಯರ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್‌ಗೆ ಸನತ್ ಸಾಂಗ್ವಾನ್ (10) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಪ್ರಿಯಾಂಶ್ ಜೊತೆಗೂಡಿದ ಕರನ್ ಗರ್ಗ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.

ಮೊದಲ ವಿಕೆಟ್ 11 ರನ್‌ಗಳಿಗೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡ ಔಟರ್ ದೆಹಲಿ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ಕರನ್ ಗರ್ಗ್ ಜೋಡಿ ಎರಡನೇ ವಿಕೆಟ್‌ಗೆ 46 ಎಸೆತಗಳಲ್ಲಿ 92 ರನ್ ಸಿಡಿಸಿ ಅಬ್ಬರಿಸಿತು. ಕರನ್ ಗರ್ಗ್ 24 ಎಸೆತದಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿ ಅಬ್ಬರಿಸಿದರು. ಉಳಿದಂತೆ ಕೇಶವ್ ದಬಾಸ್ (17), ಹರ್ಷಾ ತ್ಯಾಗಿ (16), ಶಿವಂ ಶರ್ಮಾ (16) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಆರಂಭಿಕರಾದ ಪ್ರಿಯಾಂಶ್ ಆರ್ಯ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 56 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ಸಹಾಯದಿಂದ 111 ರನ್ ಬಾರಿಸಿ ಆರ್ಭಟಿಸಿದರು. ಇವರು 198.21 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಅಂತಿಮವಾಗಿ ಔಟರ್ ದೆಹಲಿ ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 231 ರನ್ ಸೇರಿಸಿತು.

ಪಂದ್ಯ ಫಲಿತಾಂಶ
232 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಸ್ಟ್ ದೆಹಲಿ ರೈಡರ್ಸ್ ತಂಡದ ಆರಂಭಿಕ ಸುಜತ್ ಸಿಂಗ್ (0) ಹಾರ್ದಿಕ್ ಶರ್ಮಾ (4), ಕಾವ್ಯಾ ಗುಪ್ತಾ (16) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್‌ಗೆ ಅರ್ಪಿತ್ ರಾಣಾ ಹಾಗೂ ಅನುಜ್ ರಾವಾತ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಅನುಜ್ ರಾವತ್ 2 ಬೌಂಡರಿ, 9 ಸಿಕ್ಸರ್ ಸಹಾಯದಿಂದ 84 ರನ್ ಬಾರಿಸಿ ಔಟ್ ಆದರು. ಅರ್ಪಿತ್ ರಾಣಾ 8 ಬೌಂಡರಿ, 4 ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ರಾವತ್ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 32 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications