For Quick Alerts
ALLOW NOTIFICATIONS  
For Daily Alerts
 

RCB ಪರ 64108974 ರೂ. ಬಾಜಿ ಕಟ್ಟಿದ ಅಭಿಮಾನಿ

ಆರ್‌ಸಿಬಿ ಅಭಿಮಾನಿಗಳ 17 ವರ್ಷಗಳ ಹರಿಕೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ಬಳಿಕ ಟ್ರೋಫಿ ಎತ್ತುವ ಹತ್ತಿರದಲ್ಲಿ ನಿಂತಿದೆ. ಆರ್‌ಸಿಬಿ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಈ ಫೈನಲ್‌ ತಲುಪಿದ ಸಾಧನೆಯನ್ನು ಮಾಡಿದೆ. ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ ಎಂಟ್ರಿ ಪಡೆದಿದೆ ಎಂದ್ರೆ ಕೇಳಬೇಕೆ ಬಾಜಿ ಹವಾ ಜೋರಾಗಿರುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಕ್ರಿಕೆಟ್‌ ಅಭಿಮಾನಿಗಳನ್ನು ಹೊಂದಿರುವ ತಂಡ ಎಂಬ ಖ್ಯಾತಿಗೆ ಪಾತ್ರರವಾಗಿರುವ ಆರ್‌ಸಿಬಿ ಪರ ಇಂದು ಅಭಿಮಾನಿಗಳು ಕೋಟ್ಯಾಂತರ ರೂಪಾಯಿ ಬಾಜಿ ಕಟ್ಟುತ್ತಿದ್ದಾರೆ.

ಆರ್‌ಸಿಬಿ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಪರೀಕ್ಷೆಯನ್ನು ನಡೆಸಲಿದೆ. ನಾಲ್ಕನೇ ಬಾರಿ ಆರ್‌ಸಿಬಿ ಟ್ರೋಫಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಇನ್ನು ಆರ್‌ಸಿಬಿ 9 ವರ್ಷಗಳ ಬಳಿಕ ಫೈನಲ್‌ ತಲುಪಿದರೆ, ಪಂಜಾಬ್‌ ಕಿಂಗ್ಸ್ 14 ವರ್ಷಗಳ ಬಳಿಕ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಪಂಜಾಬ್‌ ಹಾಗೂ ಆರ್‌ಸಿಬಿ ನಡುವಣ ಫೈಟ್‌ಗೆ ಬೆಟ್ಟಿಂಗ್ ಜೋರಾಗಿ ನಡೆದಿದೆ. ವಿದೇಶಿ ರ್ಯಾಪರ್‌ ಒಬ್ಬರು ಆರ್‌ಸಿಬಿ ಪರ ಕಟ್ಟಿರುವ ಬೆಟ್ಟಿಂಗ್ ಈಗ ಭಾರೀ ಸುದ್ದಿ ಮಾಡ್ತಾ ಇದೆ.

Drake Bets 6 4 Crores on RCB to Win IPL 2025 Final

ಆರ್‌ಸಿಬಿ ಮೈದಾನಕ್ಕೆ ಇಳಿಯುವಾಗಲೂ ಸಹ "ಈ ಸಲ ಕಪ್‌ ನಮ್ದೇ" ಎಂಬ ಘೋಷವಾಕ್ಯವನ್ನು ಅಭಿಮಾನಿಗಳು ಕೂಗುತ್ತಲೇ ಇರುತ್ತಾರೆ. ಈಗ ಈ ಘೋಷವಾಕ್ಯವೇ ಟ್ರೆಂಡ್ ಆಗ್ತಾ ಇದೆ. ಕೆನಡಾದ ರ‍್ಯಾಪರ್ ಡ್ರೇಕ್ ಆರ್‌ಸಿಬಿಯನ್ನು ಬೆಂಬಲಿಸಿದ್ದಾರೆ. ಡ್ರೇಕ್ ಆರ್‌ಸಿಬಿ ಪರ ಕೋಟ್ಯಾಂತರ ರೂಪಾಯಿಗಳ ಬೆಟ್ಟಿಂಗ್ ಕಟ್ಟಿದ್ದಾರೆ. ಈ ಬಗ್ಗೆ ಇವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟು ಬೆಟ್ಟ ಕಟ್ಟಿದ್ದು ಯಾರು?

ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್ ಪಂದ್ಯಕ್ಕೂ ಮುನ್ ಡ್ರೇಕ್ ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಐಪಿಎಲ್‌ 2025ರ ಟ್ರೋಫಿಯನ್ನು ಆರ್‌ಸಿಬಿ ಗೆಲ್ಲಲಿದೆ ಎಂದು ಬೆಟ್ಟ ಮಾಡಿದ್ದಾರೆ. ಡ್ರೇಕ್‌ ಆರ್‌ಸಿಬಿ ಪರ 75,000 ಯುಎಸ್ ಡಾಲರ್ ಅಂದರೆ 64108974 ರೂ. ಬೆಟ್ ಕಟ್ಟಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಅಷ್ಟೇ ಅಲ್ಲದೆ 'ಇ ಸಲಾ ಕಪ್ ನಮ್ದೆ' ಎಂದು ಬರೆದಿದ್ದಾರೆ. ಇವರ ಈ ಪೋಸ್ಟ್‌ ಈಗ ಭಾರತದಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಅಭಿಮಾನಿಗಳು ತರಹೇವಾರಿ ಕಮೆಂಟ್‌ ಮಾಡಿ ರ್ಯಾಪರ್‌ಗೆ ಸಪೋರ್ಟ್‌ ಮಾಡಿದ್ದಾರೆ.

ಫೈನಲ್‌ ಫೈಟ್‌

ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ, ಆರ್‌ಸಿಬಿ ಮತ್ತು ಪಂಜಾಬ್ ಒಟ್ಟು 36 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಎರಡೂ ತಂಡಗಳು 18 ಬಾರಿ ಪಂದ್ಯಗಳನ್ನು ಗೆದ್ದಿದೆ. ಪ್ರಸಕ್ತ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, ಪಂಜಾಬ್ ಕಿಂಗ್ಸ್‌ ಮೊದಲ ಸ್ಥಾನ ಪಡೆದಿತ್ತು. ಈ ವೇಳೆ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ ಗೆದ್ದರೆ, ಪಂಜಾಬ್‌ ಎರಡನೇ ಕ್ವಾಲಿಫೈಯರ್‌ ಗೆದ್ದು ಫೈನಲ್‌ಗೆ ಪ್ರವೇಶಿಸಿದೆ. ಹೀಗಾಗಿ 18 ವರ್ಷಗಳ ತಪಸ್ಸು ಯಾರದ್ದು ಕೊನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Tuesday, June 3, 2025, 15:32 [IST]
Other articles published on Jun 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+