ರೋಹಿತ್ ಶರ್ಮಾ ನಾಯಕತ್ವ ಹಾಡಿ ಹೊಗಳಿದ ಕನ್ನಡಿಗ ರಾಹುಲ್ ದ್ರಾವಿಡ್
ಟೀಮ್ ಇಂಡಿಯಾ ಕಳೆದ ವರ್ಷ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಈ ವೇಳೆ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಜೋಡಿಯನ್ನು ಯಶಸ್ವಿ ಜೋಡಿ ಎಂದು ಕರೆಯಲಾಗುತ್ತದೆ. ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಅಶ್ವಿನ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ರೋಹಿತ್ ಶರ್ಮಾ ಅವರ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಅಶ್ವಿನ್ ನಡೆಸುವ ಕುಟ್ಟಿ ಸ್ಟೋರೀಸ್‌ನಲ್ಲಿ ಈ ಬಾರಿ ರಾಹುಲ್ ದ್ರಾವಿಡ್ ಅವರು ಕಾಣಿಸಿಕೊಂಡರು. ಈ ವೇಳ ಅಶ್ವಿನ್, ರಾಹುಲ್ ದ್ರಾವಿಡ್ ಅವರಿಗೆ ಹಲವು ವಿಷಯಗಳನ್ನು ಕೇಳಿ ಕಾಲು ಎಳೆಯುವ ಕೆಲಸ ಮಾಡಿದರು. ಅಲ್ಲದೆ ಇದೇ ಕಾರ್ಯಕ್ರಮದಲ್ಲಿ ರಾಹುಲ್, ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಹಾಡಿ ಹೊಗಳಿದ್ದಾರೆ. ರೋಹಿತ್ ಶರ್ಮಾ ಅವರೊಂದಿಗಿನ ಕೆಲಸದ ಅನುಭವದ ಬಗ್ಗೆ ಮಾತನಾಡಿದ್ದಾರೆ.

ರೋಹಿತ್ ಶರ್ಮಾ ತಂಡಕ್ಕಾಗಿ ಬದುಕುವ ಆಟಗಾರ. ಅವರು ನಾಯಕತ್ವದ ಮೊದಲ ದಿನದಿಂದಲೂ ಅವರ ಚಿಂತನೆ ಸ್ಪಷ್ಟವಾಗಿತ್ತು. ಯಾವ ದಿಕ್ಕಿನಲ್ಲಿ ತಂಡವನ್ನು ಮುನ್ನಡೆಸಬೇಕು ಎಂಬುದರ ಬ್ಲ್ಯೂ ಪ್ರಿಂಟ್ ಅವರ ಬಳಿ ಇತ್ತು. ಅವರಿಲ್ಲಿರುವ ಸ್ಪಷ್ಟತೆಯಿಂದ ಅವರ ಜೊತೆ ಕೆಲಸ ಮಾಡುವುದು ಕಷ್ಟವಾಗಲಿಲ್ಲ. ಅಲ್ಲದೆ ಡ್ರೆಸ್ಸಿಂಗ್ ರೂಮ್‌ನ ವಾತಾವರಣವನ್ನು ಉತ್ತಮವಾಗಿಟ್ಟುಕೊಳ್ಳಲು ರೋಹಿತ್ ಶ್ರಮಿಸಿದ್ದರು ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಅಲ್ಲದೆ ಕೋಚ್‌ನ ಕಾರ್ಯ, ನಾಯಕನನ್ನು ಬೆಂಬಲಿಸುವುದಾಗಿದೆ ಎಂದಿದ್ದಾರೆ.
ರೋಹಿತ್ ಒಬ್ಬ ಅನುಭವಿ ಆಟಗರ. ರೋಹಿತ್ ಅವರಿಗೆ ಅವರ ಅನುಭವ ದೊಡ್ಡ ಶಕ್ತಿ. ದೊಡ್ಡ ಪಂದ್ಯಗಳಲ್ಲಿ ರೋಹಿತ್ ತಮ್ಮ ಅನುಭದ ಸಹಾಯದಿಂದ ಶಾಂತವಾಗಿರಿಸಿಕೊಳ್ಳುತ್ತಾರೆ. ತಂಡದ ವಾತಾವರಣ ಮುಕ್ತವಾಗಿರಬೇಕು. ಯಾವುದೇ ಒತ್ತಡ ಅನುಭವಿಸದ ರೀತಿಯಲ್ಲಿರಬೇಕು ಎಂದು ರೋಹಿತ್ ನಿರ್ಧರಿಸಿದ್ದರು ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ತಿಳಿಸಿದ್ದಾರೆ.

ಯಶಸ್ವಿ ಜೊಡಿ
ರೋಹಿತ್ ಶರ್ಮಾ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಜೋಡಿಯನ್ನು ಟೀಮ್ ಇಂಡಿಯಾದ ಯಶಸ್ವಿ ಜೋಡಿ ಎಂದು ಪರಿಗಣಿಸಲಾಗುತ್ತದೆ. ಈ ಜೋಡಿ ಮೈದಾನದಲ್ಲಿ ಕಮಾಲ್ ಮಾಡಿದೆ. 2023 ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್ ತಲುಪಿದ ಈ ಜೋಡಿ ಸಾಧನೆ ಮಾಡಿತ್ತು. ಅಲ್ಲದೆ 2024ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಹೀಗಾಗಿ ಈ ಜೋಡಿಯನ್ನು ಟೀಮ್ ಇಡಿಯಾದ ಯಶಸ್ವಿ ಜೋಡಿ ಎಂದು ಪರಿಗಣಿಸಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದರು. ಅಲ್ಲದೆ ರಾಹುಲ್ ದ್ರಾವಿಡ್ ಕೋಚ್ ಸ್ಥಾನಕ್ಕೆ ಗುಡ್ ಬಾಯ್ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications