ಅಂಡರ್ 19 ತ್ರಿಕೋನ್ ಸರಣಿಗೆ ವೈಭವ್‌ಗೆ ಇಲ್ಲ ಸ್ಥಾನ: ದ್ರಾವಿಡ್ ಮಗನಿಗೆ ಅವಕಾಶ
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಂಡರ್ 19 ತ್ರಿಕೋನ ಸರಣಿಗಾಗಿ ಭಾರತ A U19 ಮತ್ತು ಭಾರತ B U19 ತಂಡಗಳನ್ನು ಪ್ರಕಟಿಸಿದೆ. ಈ ಸರಣಿಯು ನವೆಂಬರ್ 17 ರಿಂದ 30 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಟೂರ್ನಿಗೆ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಆತಿಥ್ಯ ವಹಿಸಲಿದೆ. ಅಂದಹಾಗೆ ಈ ಸರಣಿಯಲ್ಲಿ ಸ್ಫೋಟಕ ಬ್ಯಾಟರ್‌ಗೆ ಎರಡೂ ತಂಡಗಳಲ್ಲಿ ಒಂದರಲ್ಲೂ ಸ್ಥಾನ ಇಲ್ಲ. ಆದರೆ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಅನ್ವೇ ದ್ರಾವಿಡ್‌ಗೆ ಸ್ಥಾನ ಲಭಿಸಿದೆ.
ಭಾರತ ಎ ಅಂಡರ್ 19 ತಂಡವನ್ನು ವಿಹಾನ್ ಮಲ್ಹೋತ್ರಾ ಮುನ್ನಡೆಸಿದರೆ, ಬಿ ತಂಡವನ್ನು ಆರನ್ ಜಾರ್ಜ್ ಮುನ್ನಡೆಸಲಿದ್ದಾರೆ. ವೈಭವ್ ಸೂರ್ಯವಂಶಿ ACC ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಆಯ್ಕೆಯಾದ ಭಾರತ A ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಇವರು ತ್ರಿಕೋನ ಸರಣಿಯಲ್ಲಿ ಭಾಗವಹಿಸುವ ತಂಡದಲ್ಲಿ ಸ್ಥಾನ ಪಡೆದಿಲ್ಲ.

ACC ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2025 ಕತಾರ್‌ನ ದೋಹಾದಲ್ಲಿ ನವೆಂಬರ್ 14 ರಿಂದ 23 ರವರೆಗೆ ನಡೆಯಲಿದ್ದು, ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಅನ್ವೇ ದ್ರಾವಿಡ್ ಅವರಿಗೆ ಈ ಸರಣಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರಿಗೆ ಭಾರತ "ಬಿ" ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸೇರಿಸಿಕೊಳ್ಳಲಾಗಿದೆ.
ಭಾರತ U19 A ತಂಡ: ವಿಹಾನ್ ಮಲ್ಹೋತ್ರಾ (ನಾಯಕ), ಅಭಿಜ್ಞಾನ್ ಕುಂದು (ಉಪನಾಯಕ ಮತ್ತು ವಿಕೆಟ್ ಕೀಪರ್), ವಾಫಿ ಕಚ್ಚಿ, ವಂಶ್ ಆಚಾರ್ಯ, ವಿನೀತ್ ವಿ.ಕೆ, ಲಕ್ಷ್ಯ ರಾಯಚಂದಾನಿ, ಎ. ರಾಪೋಲ್ (ವಿಕೆಟ್ ಕೀಪರ್), ಕನಿಷ್ಕ್ ಚೌಹಾಣ್, ಖಿಲಾನ್ ಎ ಪಟೇಲ್, ಅಸ್ಮೊಲ್‌ಮದ್ ಸಿಂಗ್, ಮೊಹಮ್ಮದ್ ಏನಾಂ, ಹೇನಿಲ್ ಪಟೇಲ್, ಅಶುತೋಷ್ ಮಹಿದಾ, ಆದಿತ್ಯ ರಾವತ್, ಮೊಹಮ್ಮದ್ ಮಲಿಕ್
ಭಾರತ U19 B ತಂಡ: ಆರನ್ ಜಾರ್ಜ್ (ನಾಯಕ), ವೇದಾಂತ್ ತ್ರಿವೇದಿ (ಉಪನಾಯಕ), ಯುವರಾಜ್ ಗೋಹಿಲ್, ಮೌಲ್ಯರಾಜ್ ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಅನ್ವೇ ದ್ರಾವಿಡ್ (ವಿಕೆಟ್ ಕೀಪರ್), ಆರ್‌ಎಸ್ ಅಂಬರೀಶ್, ಬಿ.ಕೆ. ಕಿಶೋರ್, ನಮನ್ ಪುಷ್ಪಕ್, ಹೇಮಚೂಡೇಶನ್ ಜೆ, ಉದ್ಧವ್ ಮೋಹನ್, ಇಶಾನ್ ಸೂದ್, ಡಿ.ದೀಪೇಶ್, ರೋಹಿತ್ ಕುಮಾರ್ ದಾಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications