ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ಡ್ರೀಮ್ 11 ತೆಕ್ಕೆಗೆ; ಬೈಜುಸ್‌ಗೆ ಹೋಲಿಸಿದರೆ ಕಡಿಮೆ ಮೊತ್ತ
ಕುತೂಹಲಕಾರಿ ಬೆಳವಣಿಗೆಯಲ್ಲಿ, ಜನಪ್ರಿಯ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಡ್ರೀಮ್ 11 ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ಪಡೆದುಕೊಂಡಿದೆ.
ಈವೆರೆಗೆ ಕಾಣುತ್ತಿದ್ದ ಬೈಜುಸ್ ಬದಲಾಗಿ ಟೀಮ್ ಇಂಡಿಯಾದ ಹೊಸ ಜೆರ್ಸಿ ಪ್ರಾಯೋಜಕರಾಗಿ ಡ್ರೀಮ್ 11 ಇರಲಿದೆ. ಜೂನ್ 14ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡದ ಹೊಸ ಜೆರ್ಸಿ ಪ್ರಾಯೋಜಕರಿಗೆ ಟೆಂಡರ್ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

2023ರ ನವೆಂಬರ್‌ವರೆಗೆ ಬೈಜುಸ್ ಬಿಸಿಸಿಐನೊಂದಿಗೆ ನಿರ್ದಿಷ್ಟ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ, ಬೈಜುಸ್ ಮಾರ್ಚ್‌ನಲ್ಲಿ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದರು. ಅಂದಿನಿಂದ ಭಾರತವು ಜೆರ್ಸಿ ಪ್ರಾಯೋಜಕರಿಂದ ವಂಚಿತವಾಗಿತ್ತು.
ಭಾರತ ತಂಡ ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಜೆರ್ಸಿ ಪ್ರಾಯೋಜಕರಿಲ್ಲದೆ ಆಡಬೇಕಾಯಿತು.
ಬೈಜುಸ್ ಪ್ರಾಯೋಜಕತ್ವದಲ್ಲಿ ಬಿಸಿಸಿಐ ದ್ವಿಪಕ್ಷೀಯ ಸರಣಿಯಲ್ಲಿ ಪ್ರತಿ ಪಂದ್ಯಕ್ಕೆ ಸುಮಾರು 5.50 ಕೋಟಿ ರೂಪಾಯಿ ಜೆರ್ಸಿಯಲ್ಲಿ ಲೋಗೋವನ್ನು ಇರಿಸಿದ್ದರೆ, ಐಸಿಸಿ ಟೂರ್ನಿಗಳಲ್ಲಿನ ಪಂದ್ಯಗಳಲ್ಲಿ ಈ ಮೊತ್ತವು 1.70 ಕೋಟಿ ರೂ.ಗೆ ಇಳಿದಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯು ಡ್ರೀಮ್ 11ನಿಂದ ಸ್ವೀಕರಿಸುವ ಮೊತ್ತವು ಈ ಹಿಂದಿನ ಬೈಜುಸ್‌ನೊಂದಿಗಿನ ಒಪ್ಪಂದಕ್ಕೆ ಹೋಲಿಸಿದರೆ ಕಡಿಮೆಯಾಗಿರುತ್ತದೆ ಎಂದು ಹೇಳಲಾಗಿದೆ. ಡ್ರೀಮ್ 11 ಭಾರತ ತಂಡದ ಜೆರ್ಸಿ ಪ್ರಾಯೋಜಕತ್ವದ ಹಕ್ಕುಗಳನ್ನು 358 ಕೋಟಿ ರೂಪಾಯಿಗೆ ಖರೀದಿಸಲಾಗಿದೆ.
ಜೂನ್ 14ರಂದು ಬಿಡುಗಡೆಯಾಗಿದ್ದ ಬಿಸಿಸಿಐ ಹೇಳಿಕೆಯಲ್ಲಿ ಕೆಲವು ಬ್ರಾಂಡ್ ವಿಭಾಗಗಳು ಪ್ರಾಯೋಜಕತ್ವ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಿತ್ತು. "ರಿಯಲ್ ಮನಿ ಗೇಮಿಂಗ್' ನಿಷೇಧಿತ ವರ್ಗಗಳ ಪಟ್ಟಿಯಲ್ಲಿದ್ದಾಗ, "ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್' ಗೆ ವಿನಾಯಿತಿ ನೀಡಲಾಗಿದೆ.
ಕೆಲವು ವರದಿಗಳ ಪ್ರಕಾರ, ಬಿಸಿಸಿಐ ಮೂಲ ಟೆಂಡರ್ ಬೆಲೆಯನ್ನು ಕಡಿಮೆ ಮಾಡಿದರೂ, ಬ್ರ್ಯಾಂಡ್‌ಗಳ ಆಸಕ್ತಿಯ ಕೊರತೆ ಕಂಡುಬಂದಿದೆ ಎಂಬುದನ್ನು ಉದ್ಯಮ ತಜ್ಞರು ಉಲ್ಲೇಖಿಸಿದ್ದಾರೆ.
2020ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಶೀರ್ಷಿಕೆ ಪ್ರಾಯೋಜಕರಾಗಿದ್ದರಿಂದ ಡ್ರೀಮ್ 11 ವಿಭಿನ್ನ ಸಾಮರ್ಥ್ಯದಲ್ಲಿದ್ದರೂ ಬಿಸಿಸಿಐನೊಂದಿಗೆ ವ್ಯವಹಾರ ಸಂಬಂಧ ಹೊಂದಿದೆ.
ಡ್ರೀಮ್ 11 ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ಫ್ಯಾಂಟಸಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದ್ದು, ಹೆಚ್ಚು ಬೇಡಿಕೆಯಿರುವ ಪ್ರಸ್ತುತ ಭಾರತೀಯ ಕ್ರಿಕೆಟಿಗರು ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಡ್ರೀಮ್ 11ನ ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ
ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಜುಲೈ ಮೊದಲ ವಾರದಲ್ಲಿ ವೆಸ್ಟ್ ಪ್ರವಾಸ ಕೈಗೊಳ್ಳಲಿದ್ದು, ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಪ್ರವಾಸದ ವೇಳೆ ಡ್ರೀಮ್ 11 ಅನ್ನು ಭಾರತೀಯ ಜೆರ್ಸಿಯಲ್ಲಿ ಕಾಣಬಹುದಾಗಿದೆ.
ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ವೇಳಾಪಟ್ಟಿ
ಜುಲೈ 12-16: ಮೊದಲ ಟೆಸ್ಟ್ ಪಂದ್ಯ, ವಿಂಡ್ಸರ್ ಪಾರ್ಕ್, ಡೊಮಿನಿಕಾ
ಜುಲೈ 20-24: ಎರಡನೇ ಟೆಸ್ಟ್ ಪಂದ್ಯ, ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್
ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ
ಜುಲೈ 27: ಮೊದಲ ಏಕದಿನ ಪಂದ್ಯ, ಬಾರ್ಬಡೋಸ್
ಜುಲೈ 29: ಎರಡನೇ ಏಕದಿನ ಪಂದ್ಯ, ಬಾರ್ಬಡೋಸ್
ಆಗಸ್ಟ್ 01: ಮೂರನೇ ಏಕದಿನ ಪಂದ್ಯ, ಟ್ರಿನಿಡಾಡ್
ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ
ಆಗಸ್ಟ್ 3: ಮೊದಲ ಟಿ20 ಪಂದ್ಯ - ಬ್ರಿಯಾನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್
ಆಗಸ್ಟ್ 6: ಎರಡನೇ ಟಿ20 ಪಂದ್ಯ - ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
ಆಗಸ್ಟ್ 8: ಮೂರನೇ ಟಿ20 ಪಂದ್ಯ - ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
ಆಗಸ್ಟ್ 12: ನಾಲ್ಕನೇ ಟಿ20 ಪಂದ್ಯ - ಲಾಡರ್‌ಹಿಲ್‌ನ ಸ್ಟೇಡಿಯಂ, ಫ್ಲೋರಿಡಾ
ಆಗಸ್ಟ್ 13: ಐದನೇ ಟಿ20 ಪಂದ್ಯ - ಲಾಡರ್‌ಹಿಲ್‌ನ ಸ್ಟೇಡಿಯಂ, ಫ್ಲೋರಿಡಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications