For Quick Alerts
ALLOW NOTIFICATIONS  
For Daily Alerts
 

ಡ್ರೀಮ್ 11ಗೂ ಚೀನಾ ನಂಟು? : ಐಪಿಎಲ್ ಹೊಸ ಶೀರ್ಷಿಕೆ ಪ್ರಾಯೋಜಕರ ಸಂಪೂರ್ಣ ಮಾಹಿತಿ

Dream 11- Ipl 2020 Title Sponsorship Deal, china link, controversy Explained In Kannada

ಚೀನಾ ಮೂಲದ ಮೊಬೈಲ್ ಕಂಪನಿ ಎಂಬ ಕಾರಣಕ್ಕೆ ಭಾರತೀಯ ನೆಟ್ಟಿಗರಿಂದ ವಿರೋಧ ವ್ಯಕ್ತವಾದ ಕಾರಣ ಐಪಿಎಲ್‌ನ ಮೂಲ ಶೀರ್ಷಿಕೆ ಪ್ರಾಯೊಜಕರಾದ ವಿವೋ ಜೊತೆಗಿನ ಒಪ್ಪಂದನ್ನು ಅಮಾನತುಗೊಳಿಸಿ ಹೊಸ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ನಿನ್ನೆಯಷ್ಟೇ ಐಪಿಎಲ್ 2020ರ ಹೊಸ ಶೀರ್ಷಿಕೆ ಪ್ರಾಯೋಜಕತ್ವ ಡ್ರೀಮ್ 11 ಪಾಲಾಗಿರುವುದನ್ನು ಈ ಬಗ್ಗೆ ಐಪಿಎಲ್ ಚೇರ್‌ಮನ್ ಬ್ರಿಜೇಷ್ ಪಟೇಲ್ ಅಧಿಕೃತವಾಗಿ ಘೋಷಿಸಿದ್ದರು.

ಆದರೆ ಈಗ ಡ್ರೀಮ್ 11ಗೂ ಚೀನಾ ಜೊತೆಗೆ ನಂಟು ಇರುವುದು ಬೆಳಕಿಗೆ ಬರುತ್ತಲೇ ಮತ್ತೆ ಚರ್ಚೆ ಆರಂಭವಾಗಿದೆ. ಈ ಕುರಿತಾಗಿ ಸ್ವತಃ ಬಿಸಿಸಿಐ ಸಮಜಾಯಿಷಿಯನ್ನೂ ನೀಡಿದೆ. ಆದರೆ ಚೀನಾದೊಂದಿಗೆ ನಂಟು ಹೊಂದಿರುವ ಕಂಪನಿಯನ್ನೇ ಮತ್ತೆ ಆಯ್ಕೆ ಮಾಡಿಕೊಂಡಿರುವುದು ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ.

ಹಾಗಾದರೆ ಡ್ರೀಮ್ 11 ಕಂಪನಿಯ ಮೂಲ ಯಾವುದು? ಚೀನಾ ನಂಟು ಎಷ್ಟರ ಮಟ್ಟಿಗಿದೆ. ಈ ಪ್ರಾಯೋಜಕತ್ವ ವಿರೋಧಿಸುವುದರಲ್ಲಿ ಅರ್ಥವಿದೆಯಾ? ಎಲ್ಲದಕ್ಕೂ ಉತ್ತರ ಈ ವರದಿಯಲ್ಲಿದೆ ಮುಂದೆ ಓದಿ..

ಡ್ರೀಮ್ 11: ಸಂಸ್ಥೆಯ ಮಾಹಿತಿ

ಡ್ರೀಮ್ 11: ಸಂಸ್ಥೆಯ ಮಾಹಿತಿ

ಡ್ರೀಮ್ 11 ಚೀನಾ ಮೂಲದ ಸಂಸ್ಥೆಯಾ? ಈ ಪ್ರಶ್ನೆಗೆ ಉತ್ತರ ಖಂಡಿತಾ ಅಲ್ಲ. ಆನ್‌ಲೈನ್ ಗೇಮಿಂಗ್‌ನಲ್ಲಿ ಫ್ಯಾಂಟಸಿ ಗೇಮ್‌ನಲ್ಲಿ ಆಸಕ್ತರಾದವರಿಗೆ ಡ್ರೀಮ್ 11 ಸಾಕಷ್ಟು ಚಿರಪರಿಚಿತ ಹೆಸರು. 736 ಕೋಟಿ ಮೌಲ್ಯದ ಕಂಪನಿ ಇದಾಗಿದೆ. ಹರ್ಷ್ ಜೈನ್ ಹಾಗೂ ಭವಿತ್ ಸೇತ್ ಎಂಬ ಇಬ್ಬರು ಯುವ ಉದ್ಯಮಿಗಳು 2012ರಲ್ಲಿ ಇದನ್ನು ಆರಂಭಿಸುವ ಮೂಲಕ ಭಾರತದಲ್ಲಿ ಫ್ಯಾಂಟಸಿ ಸ್ಪೋರ್ಟ್ಸ್‌ಗೆ ಬುನಾದಿ ಹಾಕಿಕೊಟ್ಟರು. 2019ರಲ್ಲಿ ಈ ಕಂಪನಿ 'ಯುನಿಕಾರ್ನ್ ಕ್ಲಬ್‌'ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಗೇಮಿಂಗ್ ಕಂಪನಿ ಎನಿಸಿಕೊಂಡಿತು.

ಡ್ರೀಮ್11ನ ಹೂಡಿಕೆದಾರರು

ಡ್ರೀಮ್11ನ ಹೂಡಿಕೆದಾರರು

ಈ ವಿಭಾಗವೇ ಈಗ ವಿವಾದದಕ್ಕೆ ಕಾರಣವಾಗಿರುವ ಪ್ರಮುಖ ವಿಚಾರವಾಗಿದೆ. ಡ್ರೀಮ್ 11 ಹಲವಾರು ಹೂಡಿಕೆದಾರರನ್ನು ಹೊಂದಿದೆ. ಸ್ಟೆಡ್ ವ್ಯೂ, ಕರಾರಿ ಕ್ಯಾಪಿಟಲ್, ಥಿಂಕ್ ಇನ್ವೆಸ್ಟ್‌ಮೆಂಟ್, ಮಲ್ಟಿಪಲ್ಸ್ ಈಕ್ವಿಟಿ ಹಾಗೂ ಟೆನ್ಸೆಂಟ್. ಇದರಲ್ಲಿ ಟೆನ್ಸೆಂಟ್ ಚೀನಾ ಮೂಲದ ಕಂಪನಿಯಾಗುರುವುದೇ ಈ ವಿವಾದದ ಕೇಂದ್ರಬಿಂದುವಾಗಿದೆ. ಆದರೆ ಚೀನಾ ಮೂಲದ ಟೆನ್ಸೆಂಟ್ ಕಂಪನಿಯ ಕೂಡಿಕೆ ಈ ಕಂಪನಿಯಲ್ಲಿ ಅಲ್ಪ ಪ್ರಮಾಣದ್ದಾಗಿದೆ. ಚೀನಾದ ಶೆನ್‌ಝೆನ್ ಮೂಲದ ಟೆನ್ಸೆಮಟ್ ಕಂಪನಿ ವಿಶ್ವದ ಅತಿ ದೊಡ್ಡ ಗೇಮಿಂಗ್ ಕಂಪನಿ ಎನಿಸಿಕೊಂಡಿದೆ. ಆದರೆ ಇದರ ಕೂಡಿದೆ 10 ಶೇಕಡಾದಷ್ಟು ಮಾತ್ರವೇ ಇದೆ.

ಡ್ರೀಮ್ 11 ವಿವಾದ

ಡ್ರೀಮ್ 11 ವಿವಾದ

2017 ರಲ್ಲಿ ಡ್ರೀಮ್ 11 ರ ಕಾನೂನುಬದ್ಧತೆಯನ್ನು ಹೈಕೋರ್ಟ್‌ನಲ್ಲಿ ಮತ್ತು ನಂತರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ವಿವಾದವೊಂದು ಭುಗಿಲೆದ್ದಿತು. ಇದು ಬೆಟ್ಟಿಂಗ್ ಅನ್ನು ಉತ್ತೇಜಿಸುತ್ತಿದೆ ಎಂದು ಆರೋ ಮಾಡಲಾಗಿತ್ತು. ಆದರೆ ನ್ಯಾಯಾಲಯ ಡ್ರೀಮ್ 11 ಕಾರ್ಯಾಚರಣೆ ಕೌಶಲ್ಯ, ಜ್ಞಾನ ಮತ್ತು ಗಮನವನ್ನು ಕೇಂದ್ರೀಕರಿಸಿದೆ ಎಂದು ಪರಿಗಣಿಸಿ ದೇಶದಲ್ಲಿ ಅದರ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿತ್ತು.

ಡ್ರೀಮ್ 11ರ ರಾಯಭಾರಿಗಳು:

ಡ್ರೀಮ್ 11ರ ರಾಯಭಾರಿಗಳು:

ಎಂಎಸ್ ಧೋನಿ ಡ್ರೀಮ್ 11ನ ಪ್ರಮುಖ ರಾಯಭಾರಿಯಾಗಿದ್ದಾರೆ. ಐಸಿಸಿ ವಿಶ್ವಕಪ್ 2019 ರ ನಂತರ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್, ಫಾಫ್ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡಾ, ಆಂಡ್ರೆ ರಸ್ಸೆಲ್, ಜೇಸನ್ ಹೋಲ್ಡರ್ ಮತ್ತು ಕೇನ್ ವಿಲಿಯಮ್ಸನ್ ಅವರೊಂದಿಗೆ ಡ್ರೀಮ್11 ಒಪ್ಪಂದ ಮಾಡಿಕೊಂಡಿದೆ.

ಡ್ರೀಮ್ 11 ಪ್ರಾಯೋಜಕತ್ವದ ಇತರೆ ಲೀಗ್‌ಗಳು

ಡ್ರೀಮ್ 11 ಪ್ರಾಯೋಜಕತ್ವದ ಇತರೆ ಲೀಗ್‌ಗಳು

ಡ್ರೀಮ್ 11 ಪ್ರಪಂಚದಾದ್ಯಂತದ ಹಲವಾರು ಉನ್ನತ ಮಟ್ಟದ ಲೀಗ್‌ಗಳೊಂದಿಗೆ ಸಂಬಂಧ ಹೊಂದಿದೆ. ಅವುಗಳೆಂದರೆ ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಡಿಯನ್ ಸೂಪರ್ ಲೀಗ್, ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ (ಎನ್‌ಬಿಎ), ಪ್ರೊ ಕಬಡ್ಡಿ ಲೀಗ್. ಇದರ ಹೊರತಾಗಿ ಅವರು ಐಸಿಸಿ, ಬಿಬಿಎಲ್, ಡಬ್ಲ್ಯುಬಿಬಿಎಲ್ ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌ನೊಂದಿಗೆ ಕೂಡ ಸಂಬಂಧ ಹೊಂದಿದೆ.

ಡ್ರೀಮ್ 11 ಐಪಿಎಲ್ ಪ್ರಾಯೋಜಕತ್ವ ವಶಪಡಿಸಿಕೊಂಡಿದ್ದು ಹೇಗೆ?

ಡ್ರೀಮ್ 11 ಐಪಿಎಲ್ ಪ್ರಾಯೋಜಕತ್ವ ವಶಪಡಿಸಿಕೊಂಡಿದ್ದು ಹೇಗೆ?

ವಿವೋ ಐಪಿಎಲ್‌ನಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬಂದ ಕಾರಣ ಹೊಸ ಪ್ರಾಯೋಜಕರನ್ನು ಹುಡುಕಬೇಕಾದ ಅನಿವಾರ್ಯತೆ ಬಿಸಿಸಿಐಗೆ ಬಿತ್ತು. ಇದಕ್ಕಾಗಿ ಈಗಾಗಲೇ ಆನ್‌ಲೈನ್ ಕಲಿಕೆಯ ವೇದಿಕೆಯಾದ ಅನಾಕಾಡೆಮಿಯ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರಾದ ಬೈಜಸ್ ಅವರೊಂದಿಗೆ ಡ್ರೀಮ್ 11 ಈ ಸ್ಪರ್ಧಾ ಕಣಕ್ಕೆ ಇಳಿಯಿತು. ಯೋಗ ಗುರು ಬಾಬಾ ರಾಮದೇವ್ ಅವರ ಒಡೆತನದ ಪತಂಜಲಿ ಮತ್ತು ಟಾಟಾ ಸನ್ಸ್ ಆಸಕ್ತಿ ವಹಿಸಿತ್ತಾದರೂ ಅಂತಿಮ ಸ್ಪರ್ಧೆಗೆ ಪ್ರವೇಶಿಸಲಿಲ್ಲ. ಬೈಜು'ಸ್201 ಕೋಟಿ ಬಿಡ್ ಮಾಡಲು ಆಸಕ್ತವಾಗಿದ್ದರೆ 'ಅನಾಕಾಡೆಮಿ' 171 ಕೋಟಿ ರೂ. ಮೊತ್ತ ಬಿಡ್ ಮಾಡಲು ಮುಂದಾಗಿತ್ತು. ಆದರೆ ಡ್ರೀಮ್ 11 222 ಕೋಟಿ ರೂ ಬಿಡ್ ಮಾಡುವ ಮೂಲಕ ತನ್ನ ಹೆಸರನ್ನು ಅಂತಿಮಗೊಳಿಸಿತು.

Story first published: Wednesday, August 19, 2020, 15:08 [IST]
Other articles published on Aug 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+