Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2024: ಕ್ರಿಕೆಟ್‌ ಜೀವನದ ಕನಸು ನನಸಾಗಿದೆ: ಡೇರಿಲ್ ಮಿಚೆಲ್

ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಲವು ಸ್ಟಾರ್ ಆಟಗಾರರನ್ನು ಖರೀದಿಸಿದೆ. ಇದರಲ್ಲಿ ಎದ್ದು ಕಾಣುವ ಹೆಸರು ನ್ಯೂಜಿಲೆಂಡ್ ನ ಡೇರಿಲ್ ಮಿಚೆಲ್. ಅವರನ್ನು ಬೃಹತ್ ಮೊತ್ತ ಪಾವತಿಸಿ ತಂಡಕ್ಕೆ ಸೇರಿಸಿಕೊಂಡಿದೆ. ಮಿಚೆಲ್ ಮೂಲ ಬೆಲೆಗಿಂತ 14 ಪಟ್ಟು ಹೆಚ್ಚು ಪಡೆದಿದ್ದಾರೆ.

ಶಾರ್ದೂಲ್ ಠಾಕೂರ್ ಮತ್ತು ರಚಿನ್ ರವೀಂದ್ರ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡುವ ಕನಸನ್ನು ಮಿಚೆಲ್ ಹೊಂದಿದ್ದು, ಚೆನ್ನೈ ಇದೀಗ ಅವರ ಕನಸನ್ನು ನನಸಾಗಿಸಿದೆ. ಮಿಚೆಲ್ ಮುಂದಿನ ಋತುವಿನಲ್ಲಿ ಧೋನಿ ನಾಯಕತ್ವದಲ್ಲಿ ಆಡಲಿದ್ದಾರೆ.

Dream Come True: Daryl Mitchell

ಡ್ಯಾರಿಲ್ ಮಿಚೆಲ್ ತಮ್ಮ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಖಾತೆಗೆ 52 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. ಮಿಚೆಲ್ ಹರಾಜಿನಲ್ಲಿ ಮಾರಾಟವಾದ ನಂತರ, ಪೋಸ್ಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿಗೆ ಧನ್ಯವಾದ ತಿಳಿಸಿದ್ದಾರೆ.

2011ರ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಟಿವಿಯಲ್ಲಿ ನೋಡಿದಾಗಿನಿಂದ ಅವರ ನಾಯಕತ್ವದಲ್ಲಿ ಆಡುವುದು ನನ್ನ ಕನಸಾಗಿತ್ತು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಕನಸಾಗಿತ್ತು. ಇನ್ನು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

Dream Come True: Daryl Mitchell

ನ್ಯೂಜಿಲೆಂಡ್ ಆಲ್ ರೌಂಡರ್ ಮಿಚೆಲ್ ಮೂಲ ಬೆಲೆ 1 ಕೋಟಿ ರೂ. ಆದರೆ ಚೆನ್ನೈ ಅವರನ್ನು 14 ಕೋಟಿಗೆ ಖರೀದಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಮಿಚೆಲ್ ಮೇಲೆ ಮೊದಲ ಬಿಡ್ ಮಾಡಿತು. ಇದಾದ ನಂತರ ಪಂಜಾಬ್ ಕಿಂಗ್ಸ್ ಕೂಡ ಆಖಾಡಕ್ಕೆ ಎಂಟ್ರಿ ನೀಡೀತು. ಈ ಇಬ್ಬರ ನಡುವೆ 11.75 ಕೋಟಿ ರೂ. ವರೆಗೂ ಬಿಡ್ ನಡೆಯಿತು. ಇದರ ನಂತರ ಸಿಎಸ್‌ಕೆ ಬೆಲೆಗಳನ್ನು ಹೆಚ್ಚಿಸಲು ಪ್ರಾರಂಭಿಸಿತು. ಅಂತಿಮವಾಗಿ ಧೋನಿ ಸಾರಥ್ಯದ ಚೆನ್ನೈ ಗೆದ್ದಿತು.

ಡ್ಯಾರಿಲ್ ಮಿಚೆಲ್ 56 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1069 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮಾದರಿಯಲ್ಲಿ 8 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಮಿಚೆಲ್ 39 ಏಕದಿನ ಪಂದ್ಯಗಳಲ್ಲಿ 1577 ರನ್ ಗಳಿಸಿದ್ದು, 13 ವಿಕೆಟ್ ಕೂಡ ಕಬಳಿಸಿದ್ದಾರೆ.

Story first published: Tuesday, December 19, 2023, 20:53 [IST]
Other articles published on Dec 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+