Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಗೆದ್ದ ಡ್ರೀಮ್ 11: ಎಷ್ಟು ಮೊತ್ತಕ್ಕೆ ಗೊತ್ತಾ?

Dream11 wins IPL 2020 title sponsorship for Rs 222 crores: IPL Chairman Brijesh Patel

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಯಾರ ಹೆಗಲಿಗೆ ಬೀಳಲಿದೆ ಎಂಬುದಕ್ಕೆ ಉತ್ತರ ದೊರೆತಿದೆ. ಎಲ್ಲಾ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಗೆದ್ದುಕೊಳ್ಲುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ ಚೇರ್‌ಮೆನ್ ಬ್ರಿಜೇಶ್ ಪಟೇಲ್ ಈ ಬಗ್ಗೆ ಖಚಿತಪಡಿಸಿದ್ದಾರೆ.

ವಿವೋ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿಯಬೇಕಾದ ಸಂದರ್ಭ ಬಂದ ಕಾರಣ ಹೊಸ ಪ್ರಾಯೊಜಕರನ್ನು ಹುಡುಕಬೇಕಾದ ಅನಿವಾರ್ಯತೆ ಬಿಸಿಸಿಐಗೆ ಬಂದಿತ್ತು. ಅದಕ್ಕಾಗಿ ಬಿಡ್ ಆಹ್ವಾನಿಸಿದ್ದ ಬಿಸಿಸಿಐಗೆ ಸಾಕಷ್ಟು ಕಂಪನಿಗಳು ಮುಂದೆ ಬಂದಿತ್ತು. ಎಲ್ಲರನ್ನೂ ಹಿಂದಿಕ್ಕಿರುವ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವ ಗೆದ್ದುಕೊಂಡಿದೆ.

ಡ್ರೀಮ್ 11 ತೆಕ್ಕೆಗೆ ಶಿರ್ಷಿಕೆ ಪ್ರಾಯೋಜಕತ್ವ

ಡ್ರೀಮ್ 11 ತೆಕ್ಕೆಗೆ ಶಿರ್ಷಿಕೆ ಪ್ರಾಯೋಜಕತ್ವ

ಡ್ರೀಮ್ 11 ಈ ಬಾರಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ದೊಡ್ಡ ಮೊತ್ತವನ್ನು ಹೂಡಿದೆ. 222 ಕೋಟಿ ರೂಪಾಯಿ ಮೊತ್ತಕ್ಕೆ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಮೂಲಕ ಪ್ರಮುಖ ಕಂಪನಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ಅಂದುಕೊಂಡ ಮೊತ್ತ ಪಡೆದ ಬಿಸಿಸಿಐ

ಅಂದುಕೊಂಡ ಮೊತ್ತ ಪಡೆದ ಬಿಸಿಸಿಐ

ಹಾಗೆ ನೋಡಿದರೆ ವಿವೋ ಕಂಪನಿ ಶೀರ್ಷಿಕೆ ಪ್ರಾಯೋಜಕತ್ವಕ್ಕೆ 440 ಕೋಟಿಯ ವಾರ್ಷಿಕ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಟೂರ್ನಿ ಆರಂಭಕ್ಕೆ 45 ದಿನಗಳಿರುವಾಗ ಅನಿವಾರ್ಯವಾಗಿ ಟೂರ್ನಿಯಿಂದ ವಿವೋ ಹೊರಗುಳಿಯುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಆ ಮೌಲ್ಯದ ಅರ್ಧದಷ್ಟು ಮೊತ್ತ ಲಭಿಸಿದರೂ ಬಿಸಿಸಿಐ ಪಾಲಿಗೆ ಲಾಭ ಎಂಬ ವಿಮರ್ಶೆಗಳು ನಡೆದಿತ್ತು. ಅಂದುಕೊಂಡಂತೆಯೇ ಆ ಮೊತ್ತವನ್ನು ಬಿಸಿಸಿಐ ಡ್ರೀಮ್ 11 ಮೂಲಕ ಪಡೆದುಕೊಂಡಿದೆ.

ವಿವೋ ವಿರುದ್ಧ ಅಭಿಯಾನ

ವಿವೋ ವಿರುದ್ಧ ಅಭಿಯಾನ

ಗಡಿಯಲ್ಲಿ ಭಾರತ ಹಾಗೂ ಚೀನಾ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಎರಡು ದೇಶಗಳ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಈ ಪರಿಸ್ಥಿತಿಯಿಂದ ಭಾರತದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ಅಭಿಯಾನ ನಡೆದಿತ್ತು. ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್‌ಗೆ ಚೀನಾ ಮೂಲದ ಐಪಿಎಲ್ ಪ್ರಾಯೋಜಕತ್ವ ಇದ್ದ ಕಾರಣ ಸಾಮಾಜಿಕ ಜಾಲತಾಣದಲ್ಲಿ ವಿವೋ ಹಾಗೂ ಐಪಿಎಲ್ ವಿರುದ್ಧ ಅಭಿಯಾನ ಆರಂಭವಾಯಿತು. ಹೀಗಾಗಿ ಅನಿವಾರ್ಯವಾಗಿ ವಿವೋ ಐಪಿಎಲ್‌ನಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೀಮ್ 11

ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೀಮ್ 11

ಇನ್ನು ಡ್ರೀಮ್ 11ಗೆ ಈ ಪ್ರಾಯೋಜಕತ್ವ ಪಡೆದುಕೊಳ್ಳಲು ಸಾಕಷ್ಟು ಬಲಿಷ್ಠ ಕಂಪನಿಗಳು ಪ್ರತಿಸ್ಪರ್ಧಿಗಳಾಗಿತ್ತು. ದೇಶದ ದಿಗ್ಗಜ ಕಂಪನಿ ಎನಿಸಿಕೊಂಡಿರುವ ಟಾಟಾ ಸನ್ಸ್ ಈ ರೇಸ್‌ನಲ್ಲಿ ಮುಂದಿತ್ತು. ಜೊತೆಗೆ ಆನ್‌ಲೈನ್ ಎಜುಕೇಶನ್ ವೇದಿಕೆಗಳಾದ ಬೈಜು'ಸ್ ಹಾಗೂ ಅನಕಾಡೆಮಿ ಕೂಡ ಪೈಪೋಟಿಯನ್ನು ನಡೆಸಿತ್ತು. ಆದರೆ ಎಲ್ಲರನ್ನೂ ಹಿಂದಿಕ್ಕಿರುವ ಡ್ರೀಮ್ 11 ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Story first published: Tuesday, August 18, 2020, 15:59 [IST]
Other articles published on Aug 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+