ವಿಶ್ವಶ್ರೇಷ್ಠ ಟಿ20 ಬ್ಯಾಟ್ಸ್‌ಮನ್‌ನನ್ನು ತಂಡದಿಂಡ ಹೊರಗಿಡುವುದು ಯೋಚಿಸಲು ಅಸಾಧ್ಯ: ಎಂಎಸ್‌ಕೆ ಪ್ರಸಾದ್

ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಕೆಎಲ್ ರಾಹುಲ್ ಅವರನ್ನು ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಪ್ರಶಂಸಿಸಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದು ಆಡುವ ಬಳಗದಲ್ಲಿ ಅವರನ್ನು ಹೊರಗಿಡುವುದನ್ನು ಯೋಚಿಸುವುದು ಅಸಾಧ್ಯ ಎಂದಿದ್ದಾರೆ ಎಂಎಸ್‌ಕೆ ಪ್ರಸಾದ್.
"ಟಿ20 ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಕೆಎಲ್ ರಾಹುಲ್ ಅವರನ್ನು ನಾನು ಬಲವಾಗಿ ನಂಬುತ್ತೇನೆ. ಇದು ಕೇವಲ ಅವರ ಫಾರ್ಮ್‌ನ ಕಾರಣಕ್ಕೆ ನಾನು ಹೇಳುತ್ತಿಲ್ಲ. ಅವರು ವಿಭಿನ್ನ ಹಂತಗಳಲ್ಲಿ ಸ್ಥಿರವಾದ ಆಕ್ರಮಣಶೀಲತೆಯೊಂದಿಗೆ ಮತ್ತು ಹೊಸ ಸೊಸ ಹೊಡೆತಗಳ ಮೂಲಕ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾರೆ. ನನ್ನ ಪ್ರಕಾರ ಅವರು ಕಳೆದ ಕೆಲ ವರ್ಷಗಳಿಂದ ಭಾರತ ಕಂಡುಕೊಂಡ ಆತ್ಯುತ್ತಮ ಆಟಗಾರ ಹಾಗೂ ಮುಂದಿನ ದೊಡ್ಡ ಸಂಗತಿ ಆತ" ಎಂದು ಎಂಎಸ್‌ಕೆ ಪ್ರಸಾದ್ ಹೇಳಿಕೆಯನ್ನು ನೀಡಿದ್ದಾರೆ.

ಹೊರಗಿಡಲು ಹೇಗೆ ಸಾಧ್ಯ!
"ವಿಶ್ವದ ಅತ್ಯುತ್ತಮ ಹಾಗೂ ಅತ್ಯುತ್ಸಾಹದ ಆಟಗಾರನನ್ನು ನೀವು ಹೇಗೆ ಆಡುವ ಬಳಗದಿಂದ ಹೊರಗಿಡಲು ಸಾಧ್ಯ. ಟಿ20 ಮಾದರಿಯ ಅಗ್ರಕ್ರಮಾಂಕದಲ್ಲಿ ಆತ ಅತ್ಯುತ್ತಮ ಆಟಗಾರ ಎಂದು ನಾನು ಹೇಳುತ್ತೇನೆ. ಸೂರ್ಯಕುಮಾರ್ ಯಾದವ್ ಕಾಯಬೇಕಾಬಹುದು. ಅವರ ಅವಕಾಶ ಮುಂದೆ ಬರಲಿದೆ. ರಾಹುಲ್ ಕೂಡ ಸುದೀರ್ಘ ಕಾಲ ಕಾದಿದ್ದಾರೆ" ಎಂದಿದ್ದಾರೆ ಎಂಎಸ್‌ಕೆ ಪ್ರಸಾದ್.

ಇಶಾನ್- ಸೂರ್ಯಕುಮಾರ್‌ಗೆ ಅವಕಾಶಗಳು ದೊರೆಯಬಹುದು
"ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರನ್ನು ಭಾರತ ತಂಡ ಮೊದಲ ಮೂರು ತಂಡಗಳ ನಂತರ ಪ್ರಯತ್ನಿಸಬಹುದು. ರೊಟೇಶನ್ ಪದ್ದತಿಯನ್ನು ಪಾಲಿಸಿ ನಾಯಕ ವಿರಾಟ್ ಕೊಹ್ಲಿ ಅಥವಾ ಉಪನಾಯಕ ರೋಹಿತ್ ಶರ್ಮಾಗೆ ಅಂತಿಮ ಎರಡು ಪಂದ್ಯಗಳಲ್ಲಿ ವಿಶ್ರಾಂತಿಯನ್ನು ನೀಡಿ ಈ ಆಟಗಾರರಿಗೆ ಅವಕಾಶವನ್ನು ನೀಡಬಹುದು" ಎಂದಿದ್ದಾರೆ.

ಟೆಸ್ಟ್‌ಗಿಂತ ಉತ್ತಮ ಪ್ರದರ್ಶನ ನೀಡಲಿದೆ
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಈ ಸರಣಿಯಲ್ಲೊ ಭಾರತ ಟೆಸ್ಟ್ ಸರಣಿಗಿಂತ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರೆ. ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ 3-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications