Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಆರ್‌ಎಸ್‌ನಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಐಸಿಸಿ

DRS controversy: Umpires Call will remain, rules ICC

ಅಬುಧಾಬಿ: ಡಿಸಿಶನ್ ರಿವ್ಯೂ ಸಿಸ್ಟಮ್‌ (ಡಿಆರ್‌ಎಸ್)ನ ಭಾಗವಾಗಿದ್ದ ಅಂಪೈರ್ಸ್ ಕಾಲ್ ಅನ್ನು ಮುಂದುವರೆಸಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿರ್ಧರಿಸಿದೆ. ಆದರೆ ಡಿಆರ್‌ಎಸ್ ನಿರ್ಧಾರದ ವೇಳೆ ಸಣ್ಣ ಬದಲಾವಣೆ ಮಾಡಿಕೊಳ್ಳಲು ಐಸಿಸಿ ತೀರ್ಮಾನ ಕೈಗೊಂಡಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರವಾಸ ಸರಣಿಗಳ ವೇಳೆ ಮುಖ್ಯವಾಗಿ ಅಂಪೈರ್ಸ್ ಕಾಲ್, ಡಿಆರ್‌ಎಸ್‌ಗೆ ಸಂಬಂಧಿಸಿ ಚರ್ಚೆಗಳು ಶುರುವಾಗಿತ್ತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ಸ್ ಕಾಲ್ ನಿಯಮವನ್ನು 'ಗೊಂದಲಮಯ' ಎಂದು ಕರೆದಿದ್ದು ಇದಕ್ಕೆ ಕಾರಣವಾಗಿತ್ತು.

ಐಸಿಸಿ ಕ್ರಿಕೆಟ್ ಕಮಿಟಿ ಮುಖ್ಯಸ್ಥ, ಭಾರತದ ಮಾಜಿ ನಾಯಕ-ಕನ್ನಡಿಗ ಅನಿಲ್ ಕುಂಬ್ಳೆ ಮುಂದಾಳತ್ವದಲ್ಲಿ ಬುಧವಾರ ಐಸಿಸಿ ಸಭೆ ನಡೆದಿದೆ. ಈ ಸಭೆಯಲ್ಲಿ ಡಿಆರ್‌ಎಸ್‌ಗೆ ಸಂಬಂಧಿಸಿ ಮಹತ್ವದ ತೀರ್ಮಾನಗಳನ್ನು, ಬದಲಾವಣೆಗಳನ್ನು ತಿಳಿಸಲಾಗಿದೆ. ಸಭೆಯಲ್ಲಿ ಅಂಪೈರ್ಸ್ ಕಾಲ್ ಮುಂದುವರೆಸಲು ಮತ್ತು ಸ್ಟಂಪ್‌ನ ಎತ್ತರ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಅಂದರೆ, ಅಂಪೈರ್ಸ್ ಕಾಲ್ ಎಂದಿನಂತೆ ಮುಂದುವರೆಯಲಿದೆ. ಲೆಗ್ ಬಿಫೋರ್ ವಿಕೆಟ್ (ಎಲ್‌ಬಿಡಬ್ಲ್ಯೂ) ರಿವ್ಯೂ ವೇಳೆ ಚೆಂಡು 50 ಶೇ. ಹೆಚ್ಚು ವಿಕೆಟ್‌ಗೆ ಬಡಿದಿದ್ದರೆ, ಅದನ್ನು ಅಂಪೈರ್ ನಾಟ್ ಔಟ್ ಕೊಟ್ಟಿದ್ದರೆ ಆ ತೀರ್ಪು ರಿವರ್ಸ್ ಆಗುತ್ತದೆ ಅನ್ನೋದು ಈಗಿನವರೆಗಿನ ಎಲ್‌ಬಿಡಬ್ಲ್ಯೂ ಡಿಆರ್‌ಎಸ್ ನಿಯಮ. ಆದರೆ ಇಲ್ಲಿ ಸಣ್ಣ ಬದಲಾವಣೆಯಾಗಲಿದೆ.

ಈಗಿನವರೆಗೂ ನಾವು ಸ್ಟಂಪ್‌ ಅನ್ನೋದನ್ನು ಬೇಲ್ಸ್‌ನ ತಳ ಭಾಗದವರೆಗೆ ಮಾತ್ರ ಹೇಳುತ್ತಿದ್ದೆವು. ಆದರೆ ಇನ್ಮುಂದೆ ಸ್ಟಂಪ್‌ ಅಂದರೆ ಬೇಲ್ಸ್‌ನ ಮೇಲ್ಭಾಗವರೆಗೂ ವಿಸ್ತರಿಸಲಾಗಿದೆ. ಅಂದರೆ ಬೇಲ್ಸ್‌ನ ಮೇಲ್ಭಾಗದವರೆಗ ಸ್ಟಂಪ್ ವಿಸ್ತಾರಗೊಂಡಿದೆ. ಚೆಂಡು ಸ್ಟಂಪ್‌ಗೆ ಬಡಿದಿದ್ದನ್ನು ಪರಿಶೀಲಿಸುವಾಗ ಇದನ್ನು ಪರಿಗಣಿಸಲಾಗುತ್ತದೆ.

Story first published: Friday, April 2, 2021, 9:52 [IST]
Other articles published on Apr 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+