Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲ ಏಕದಿನ: ಫಾ ಡು ಪ್ಲೆಸಿಸ್ ಶತಕ, ಶ್ರೀಲಂಕಾ ಸದೆಬಡಿದ ದಕ್ಷಿಣ ಆಫ್ರಿಕಾ

Du Plessis shines as South Africa beat Sri Lanka by eight wickets in first ODI

ಜೋಹಾನ್ಸ್‌ಬರ್ಗ್, ಮಾರ್ಚ್ 4: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಶ್ರೀಲಂಕಾ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 3) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ ಸೋಲನುಭವಿಸಿದೆ. ನಾಯಕ ಫಾ ಡು ಪ್ಲೆಸಿಸ್ ಆಕರ್ಷಕ ಶತಕ, ಲುಂಗಿ ಎನ್‌ಗಿಡಿ ಮತ್ತು ಇಮ್ರಾನ್ ತಾಹೀರ್ ಮಾರಕ ಬೌಲಿಂಗ್ ಆಫ್ರಿಕಾ ಗೆಲುವಿಗೆ ಕಾರಣವಾಯ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ, ಕುಸಾಲ್ ಪೆರೆರಾ 33, ಒಶದಾ ಫೆರ್ನಾಂಡೋ 49, ಕುಸಾಲ್ ಮೆಂಡಿಸ್ 60, ಧನಂಜಯ ಡಿ ಸಿಲ್ವಾ 39 ರನ್ ಕೊಡುಗೆಯೊಂದಿಗೆ 47 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 231 ರನ್ ಪೇರಿಸಿತ್ತು.

ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 81, ಪ್ಲೆಸಿಸ್ ಅಜೇಯ 112, ರಾಸ್ಸೀ ವಾನ್ ಡೆರ್ ಡಸೆನ್ 32 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ದಕ್ಷಿಣ ಆಫ್ರಿಕಾ ತಂಡ 38.5 ಓವರ್‌ಗೆ 2 ವಿಕೆಟ್ ಕಳೆದು 232 ರನ್ ಬಾರಿಸಿತು.

ಶ್ರೀಲಂಕಾ ಇನ್ನಿಂಗ್ಸ್‌ ವೇಳೆ ಆಫ್ರಿಕಾ ಬೌಲರ್ ಲುಂಗಿ ಎನ್‌ಗಿಡಿ ಮತ್ತು ಇಮ್ರಾನ್ ತಾಹೀರ್ ತಲಾ 3 ವಿಕೆಟ್ ಕೆಡವಿ ಮಿಂಚಿದರು. ಫಾ ಡು ಪ್ಲೆಸಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0ಯ ಮುನ್ನಡೆಯಲ್ಲಿದೆ.

Story first published: Monday, March 4, 2019, 13:10 [IST]
Other articles published on Mar 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+