Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG Test: ಇಂಗ್ಲೆಂಡ್‌ಗೆ ಜಯದ "ರೂಟ್‌" ತೋರಿಸಿದ ಬೆನ್‌ ಡಕೆಟ್‌

ಭರವಸೆಯ ಬ್ಯಾಟರ್‌ ಬೆನ್‌ ಡಕೆಟ್‌ (149 ರನ್‌) ಹಾಗೂ ಜೋ ರೂಟ್‌ ಬಾರಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಭಾರತ ಆಂಡರ್ಸನ್‌-ತೆಂಡೂಲ್ಕರ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್‌ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.

ಮಂಗಳವಾರ ಕೊನೆಯ ದಿನದಾಟವನ್ನು ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 21 ರನ್‌ಗಳಿಂದ ಆಟ ಮುಂದುವರೆಸಿತು. ಆರಂಭಿಕರು ತಂಡಕ್ಕೆ ಭರ್ಜರಿ ಬುನಾದಿಯನ್ನು ಹಾಕಿಕೊಟ್ಟರು. ಈ ವೇಳೆ ಆರಂಭಿಕರಾದ ಬೆನ್ ಡಕೆಟ್‌, ಜಾಕ್‌ ಕ್ರಾಲಿ ತಂಡ ಡ್ರೆಸ್ಸಿಂಗ್ ರೂಮ್‌ನಲ್ಲಿ ಹಾಕಿಕೊಂಡ ಯೋಜನೆಯಂತೆ ಈ ಜೋಡಿ ಬ್ಯಾಟ್ ಮಾಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಸ್‌ಗಳು ವಿಫಲರಾದರು. ಮೊದಲ ವಿಕೆಟ್‌ಗೆ ಈ ಜೋಡಿ 42.2 ಓವರ್‌ಗಳಲ್ಲಿ 188 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕರಾದ ಜಾಕ್‌ ಕ್ರಾಲಿ 7 ಬೌಂಡರಿ ನೆರವಿನಿಂದ 65 ರನ್‌ ಸೇರಿಸಿ ಔಟ್ ಆದರು.

Duckett Dominates Root Anchors as England Clinches First Test Against India

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಓಲಿ ಪೋಪ್ 2 ಬೌಂಡರಿ ನೆರವಿನಿಂದ 8 ರನ್‌ ಸಿಡಿಸಿ ಪ್ರಸಿದ್ಧ್‌ಗೆ ವಿಕೆಟ್‌ ಒಪ್ಪಿಸಿದರು. ಆರಂಭಿಕರಾದ ಬೆನ್‌ ಡಕೆಟ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 21 ಬೌಂಡರಿ, 1 ಸಿಕ್ಸರ್ ಸಹಾಯದಿಂದ 149 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಹ್ಯಾರಿ ಬ್ರೂಕ್‌ ತಾವು ಎದುರಿಸಿದ ಮೊದಲ ಎಸೆತದಲ್ಲಿ ಶಾರ್ದೂಲ್‌ಗೆ ವಿಕೆಟ್‌ ಒಪ್ಪಿಸಿದರು.

ರೂಟ್‌ ಸಮಯೋಚಿತ ಆಟ

ಐದನೇ ವಿಕೆಟ್‌ಗೆ ಬೆನ್ ಸ್ಟೋಕ್ಸ್‌ ಹಾಗೂ ಜೋ ರೂಟ್‌ ಜೋಡಿ ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಗೆ ಟೀಮ್ ಇಂಡಿಯಾ ಬೌಲರ್ಸ್‌ಗಳು ಸತತ ಸವಾಲನ್ನು ಎಸೆದರು. ಈ ವೇಳೆ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದರು. ಐದನೇ ವಿಕೆಟ್‌ಗೆ ಈ ಜೋಡಿ 77 ಎಸೆತಗಳಲ್ಲಿ 49 ರನ್‌ ಸಿಡಿಸಿತು. ಈ ವೇಳೆ ಬೆನ್ ಸ್ಟೋಕ್ಸ್‌ ಇಲ್ಲದ ರಿವರ್ಸ್‌ ಸ್ವೀಪ್‌ ಮಾಡಲು ಹೋಗಿ ರವೀಂದ್ರ ಜಡೇಜಾ ಎಸೆತದಲ್ಲಿ ಗಿಲ್‌ಗೆ ಕ್ಯಾಚ್‌ ನೀಡಿದರು.

Duckett Dominates Root Anchors as England Clinches First Test Against India

ಅನುಭವಿ ಬ್ಯಾಟರ್‌ ಜೋ ರೂಟ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಮ್ಮ ತವರಿನ ಅಂಗಳದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು ಟೀಮ್ ಇಂಡಿಯಾದ ಬೌಲರ್‌ಗಳನ್ನು ಕಾಡಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು.

ಕ್ಯಾಚ್‌ ಡ್ರಾಪ್‌

ಮೊದಲ ಇನಿಂಗ್ಸ್‌ನಲ್ಲೂ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈ ಚೆಲ್ಲಿದೆ. 28.5 ಓವರ್‌ನಲ್ಲಿ ಜಸ್ಪ್ರೀತ್‌ ಬುಮ್ರಾ ತಮ್ಮದೇ ಬೌಲಿಂಗ್‌ನಲ್ಲಿ ಜಾಕ್‌ ಕ್ರಾಲಿ 48 ರನ್‌ ಆಗಿದ್ದಾಗ ಕ್ಯಾಚ್ ಬಿಟ್ಟರು. ಇನ್ನು ಬೆನ್‌ ಡಕೆಟ್‌ 97 ರನ್‌ನಲ್ಲಿದ್ದಾಗ ಯಶಸ್ವಿ ಜೈಸ್ವಾಲ್‌ ಡೀಪ್‌ ಬ್ಯಾಕ್‌ವರ್ಡ್‌ ಸ್ಕ್ವೇರ್‌ ಲೆಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಎಸೆಯದಲ್ಲಿ ಕ್ಯಾಚ್‌ ಬಿಟ್ಟರು.

Story first published: Tuesday, June 24, 2025, 23:08 [IST]
Other articles published on Jun 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+