ದುಲೀಪ್ ಟ್ರೋಫಿ 2019: ಸಂಪೂರ್ಣ ವೇಳಾಪಟ್ಟಿ, ತಂಡಗಳ ಮಾಹಿತಿ

ನವದೆಹಲಿ, ಆಗಸ್ಟ್ 14: ದುಲೀಪ್ ಟ್ರೋಫಿ 58ನೇ ಆವೃತ್ತಿ ಇದೇ ಆಗಸ್ಟ್ 17ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 8ರಂದು ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ. ಇಂಡಿಯಾ ಬ್ಲೂ ತಂಡವನ್ನು ಯುವ ಬ್ಯಾಟ್ಸ್ಮನ್ ಶುಭ್‌ಮಾನ್ ಗಿಲ್ ಮುನ್ನಡೆಸಲಿದ್ದಾರೆ.
ನಾಲ್ಕು ದಿನಗಳ ಪಂದ್ಯದ ಮಾದರಿಯ ಈ ಟೂರ್ನಿ ಇಂಡಿಯಾ ಬ್ಲೂ, ಇಂಡಿಯಾ ರೆಡ್ ಮತ್ತು ಇಂಡಿಯಾ ಗ್ರೀನ್ ತಂಡಗಳ ಮಧ್ಯೆ ನಡೆಯಲಿದೆ. ಇಂಡಿಯಾ ಗ್ರೀನ್‌ಗೆ ಫೈಝ್ ಫಝಲ್, ಇಂಡಿಯಾ ರೆಡ್‌ಗೆ ಪ್ರಿಯಾಂಕ್ ಪಾಂಚಲ್ ನಾಯಕರಾಗಿರಲಿದ್ದಾರೆ.
ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ತಂಡಗಳು, ವೇಳಾಪಟ್ಟಿ ಕೆಳಗಿದೆ.

ಇಂಡಿಯಾ ಬ್ಲೂ
ಶುಬ್‌ಮಾನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ರಿಕಿ ಭುಯಿ, ಅನ್‌ಮೋಲ್‌ಪ್ರೀತ್ ಸಿಂಗ್, ಅಂಕೀತ್ ಬಾವ್ನೆ, ಸ್ನೆಲ್ ಪಟೇಲ್ (ವಿಕೆ), ಶ್ರೇಯಸ್ ಗೋಪಾಲ್, ಸೌರಭ್ ಕುಮಾರ್, ಜಲಜ್ ಸಕ್ಸೇನಾ, ತುಷಾರ್ ದೇಶಪಾಂಡೆ, ಬೆಸಿಲ್ ತಂಪಿ, ಅಂಕಿತ್ ಚೌಧರಿ, ದಿವೇಶ್ ಪಠಾಣಿಯಾ, ಅಶುತೋಷ್ ಅಮರ್.

ಇಂಡಿಯಾ ಗ್ರೀನ್
ಫೈಜ್ ಫಜಲ್ (ನಾಯಕ), ಅಕ್ಷತ್ ರೆಡ್ಡಿ, ಧ್ರುವ್ ಶೋರೆ, ಸಿದ್ಧೇಶ್ ಲಾಡ್, ಪ್ರಿಯಮ್ ಗರ್ಗ್, ಅಕ್ಷದೀಪ್ ನಾಥ್, ರಾಹುಲ್ ಚಾಹರ್, ಧರ್ಮೇಂದ್ರಸಿಂಹ ಜಡೇಜಾ, ಜಯಂತ್ ಯಾದವ್, ಅಂಕಿತ್ ರಾಜಪೂತ್, ಇಶಾನ್ ಪೊರೆಲ್, ತನ್ವೀರ್-ಉಲ್-ಹಕ್, ಅಕ್ಷಯ್ ವಾಡ್ಕರ್ (ವಿಕೆ), ರಾಜೇಶ್ ಮೊಹಂತಿ, ಮಿಲಿಂದ್ ಕುಮಾರ್.

ಇಂಡಿಯಾ ರೆಡ್
ಪ್ರಿಯಾಂಕ್ ಪಾಂಚಲ್ (ನಾಯಕ), ಅಭಿಮನ್ಯು ಈಶ್ವರನ್, ಆಕ್ಸರ್ ಪಟೇಲ್, ಕರುಣ್ ನಾಯರ್, ಇಶಾನ್ ಕಿಶನ್ (ವಿಕೆ), ಹಪ್ರೀತ್ ಸಿಂಗ್ ಭಾಟಿಯಾ, ಮಹಿಪಾಲ್ ಲೋಮ್ರರ್, ಆದಿತ್ಯ ಸರ್ವಾತೆ, ಅಕ್ಷಯ್ ವಾಖರೆ, ವರುಣ್ ಆ್ಯರನ್, ರೋನಿತ್ ಮೋರ್, ಜಯದೇವ್ ಉನಾದ್ಕತ್, ಸಂದೇಪ್ ವಾರಿಯರ್, ಅಂಕಿತ್ ಕಲ್ಸಿ.

ಪಂದ್ಯಗಳ ವೇಳಾಪಟ್ಟಿ
1. ಆಗಸ್ಟ್ 17-20, ಇಂಡಿಯಾ ಬ್ಲೂ Vs ಇಂಡಿಯಾ ಗ್ರೀನ್
2. ಆಗಸ್ಟ್ 23-26, ಇಂಡಿಯಾ ರೆಡ್ vs ಇಂಡಿಯಾ ಬ್ಲೂ
3. ಆಗಸ್ಟ್ 29-ಸೆಪ್ಟೆಂಬರ್ 1, ಇಂಡಿಯಾ ರೆಡ್ vs ಇಂಡಿಯಾ ಗ್ರೀನ್
4. ಸೆಪ್ಟೆಂಬರ್ 4-8, ಫೈನಲ್, TBD vs TBD
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications