For Quick Alerts
ALLOW NOTIFICATIONS  
For Daily Alerts
 

Duleep Trophy 2023: ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ; ತಂಡಗಳು, ವೇಳಾಪಟ್ಟಿ; ಎಲ್ಲಿ ಲೈವ್ ವೀಕ್ಷಣೆ

ಮುಂಬರುವ ದುಲೀಪ್ ಟ್ರೋಫಿ ಪಂದ್ಯಾವಳಿಯ ಆವೃತ್ತಿಯು ಇದೇ ಜೂನ್ 28ರಂದು ಪ್ರಾರಂಭವಾಗಲಿದ್ದು, ಜುಲೈ 12ರಂದು ನಡೆಯುವ ಫೈನಲ್ ಪಂದ್ಯದ ಮೂಲಕ ಮುಕ್ತಾಯವಾಗಲಿದೆ.

ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ, ಮಧ್ಯ ವಲಯ, ದಕ್ಷಿಣ ವಲಯ ಮತ್ತು ಈಶಾನ್ಯ ವಲಯ ಸೇರಿ ಒಟ್ಟು ಆರು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

Duleep Trophy 2023: Duleep Trophy Matches In Bengaluru; Full Teams, Schedule; Where Live Telecast

ಗಮನಾರ್ಹ ವಿಷಯವೆಂದರೆ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯ ವಲಯ ಮತ್ತು ಪೂರ್ವ ವಲಯಗಳು ಸೆಣಸಲಿದ್ದರೆ. ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ವಲಯ ತಂಡವು ಈಶಾನ್ಯ ವಲಯ ತಂಡವನ್ನು ಎದುರಿಸಲಿದೆ.

ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ತಂಡಕ್ಕೆ ಸವಾಲು ಹಾಕಲಿದೆ. ಇನ್ನು ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ ತಂಡವು ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.

ದುಲೀಪ್ ಟ್ರೋಫಿ ಪಂದ್ಯಗಳು ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನ ಮತ್ತು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಅವುಗಳ ವೇಳಾಪಟ್ಟಿ ಇಲ್ಲಿದೆ.

ಜೂನ್ 28 - ಕೇಂದ್ರ ವಲಯ vs ಪೂರ್ವ ವಲಯ, ಆಲೂರು ಕ್ರಿಕೆಟ್ ಸ್ಟೇಡಿಯಂ, ಬೆಂಗಳೂರು
ಜೂನ್ 28 - ಉತ್ತರ ವಲಯ vs ಈಶಾನ್ಯ ವಲಯ, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಜುಲೈ 5 - ಪಶ್ಚಿಮ ವಲಯ vs 1ನೇ ಕ್ವಾರ್ಟರ್ ಫೈನಲ್‌ ವಿಜೇತರು, ಆಲೂರು ಕ್ರಿಕೆಟ್ ಮೈದಾನ, ಬೆಂಗಳೂರು
ಜುಲೈ 5 - ದಕ್ಷಿಣ ವಲಯ vs 2ನೇ ಕ್ವಾರ್ಟರ್ ಫೈನಲ್‌ ವಿಜೇತರು, ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಜುಲೈ 12 (ಫೈನಲ್) - 1ನೇ ಸೆಮಿಫೈನಲ್ ವಿಜೇತ ತಂಡ vs 2ನೇ ಸೆಮಿಫೈನಲ್ ವಿಜೇತ ತಂಡ, ಎಂ ಚಿನ್ನಸ್ವಾಮಿ ಸ್ಟೇಡಿಯಂ

ದುಲೀಪ್ ಟ್ರೋಫಿ 2023ರ ನೇರಪ್ರಸಾರದ ವಿವರ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ನೇರಪ್ರಸಾರ ಅಥವಾ ಲೈವ್ ಸ್ಟ್ರೀಮ್ ಪಾಲುದಾರನನ್ನು ಇನ್ನೂ ಘೋಷಿಸಿಲ್ಲ. ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.

ದುಲೀಪ್ ಟ್ರೋಫಿ 2023ರ ಪೂರ್ಣ ತಂಡಗಳು

ಪಶ್ಚಿಮ ವಲಯ: ಪ್ರಿಯಾಂಕ್ ಪಾಂಚಾಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಪೃಥ್ವಿ ಶಾ, ಹೆಟ್ ಪಟೇಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಅರ್ಪಿತ್ ವಾಸವಾಡ, ಅತಿತ್ ಸೇಠ್, ಶಮ್ಸ್ ಮುಲಾನಿ, ಯುವರಾಜ್ ದೊಡಿಯಾ, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಚಿಂತನ್ ಗಜಾ, ಅರ್ಜನ್ ನಾಗವಾಸ್ವಾಲ್ಲಾ.

ದಕ್ಷಿಣ ವಲಯ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ಸಾಯಿ ಸುದರ್ಶನ್, ರಿಕಿ ಭುಯಿ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಕುಮಾರ್ ಸಮರ್ಥ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪ್ರದೋಶ್ ರಂಜನ್ ಪಾಲ್, ಸಾಯಿ ಕಿಶೋರ್, ವಿದ್ವತ್ ಕಾವೇರಪ್ಪ, ವಿಜಯ್‌ಕುಮಾರ್ ವೈಶಾಕ್, ಕೆವಿ ಸಸಿಕಾಂತ್, ದರ್ಶನ್ ಮಿಸಾಲ್, ತಿಲಕ್ ವರ್ಮಾ.

ಪೂರ್ವ ವಲಯ: ಅಭಿಮನ್ಯು ಈಶ್ವರನ್ (ನಾಯಕ), ಶಹಬಾಜ್ ನದೀಮ್ (ಉಪನಾಯಕ), ಸಂತಾನು ಮಿಶ್ರಾ, ಸುದೀಪ್ ಘರಾಮಿ, ರಿಯಾನ್ ಪರಾಗ್, ಎ ಮಜುಂದಾರ್, ಬಿಪಿನ್ ಸೌರಭ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕೆ ಕುಶಾಗ್ರಾ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಮುಖೇಶ್ ಕುಮಾರ್, ಆಕಾಶ್ ದೀಪ್, ಅನುಕುಲ್ ರಾಯ್, ಎಂ ಮುರಾ ಸಿಂಗ್, ಇಶಾನ್ ಪೊರೆಲ್.

ಉತ್ತರ ವಲಯ: ಮನ್‌ದೀಪ್ ಸಿಂಗ್ (ನಾಯಕ), ಪ್ರಶಾಂತ್ ಚೋಪ್ರಾ, ಧ್ರುವ್ ಶೋರೆ, ಮನನ್ ವೋಹ್ರಾ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಅಂಕಿತ್ ಕುಮಾರ್, ಎಎಸ್ ಕಲ್ಸಿ, ಹರ್ಷಿತ್ ರಾಣಾ, ಅಬಿದ್ ಮುಷ್ತಾಕ್, ಜಯಂತ್ ಯಾದವ್, ಪುಲ್ಕಿತ್ ನಾರಂಗ್, ನಿಶಾಂತ್ ಸಂಧು, ಸಿದ್ಧಾರ್ಥ್ ಕೌಲ್, ವೈಭವ್ ಅರೋರಾ, ಬಲ್ತೇಜ್ ಸಿಂಗ್.

ಕೇಂದ್ರ ವಲಯ: ಶಿವಂ ಮಾವಿ (ನಾಯಕ), ಉಪೇಂದ್ರ ಯಾದವ್ (ಉಪನಾಯಕ/ವಿಕೆಟ್‌ಕೀಪರ್), ವಿವೇಕ್ ಸಿಂಗ್, ಹಿಮಾಂಶು ಮಂತ್ರಿ, ಕುನಾಲ್ ಚಂಡೇಲಾ, ಶುಭಂ ಶರ್ಮಾ, ಅಮನದೀಪ್ ಖರೆ, ರಿಂಕು ಸಿಂಗ್, ಅಕ್ಷಯ್ ವಾಡ್ಕರ್, ಧ್ರುವ ಜುರೆಲ್, ಸೌರಭ್ ಕುಮಾರ್, ಮಾನವ್ ಸತಾರ್, ಸರನ್ಶ್ ಜೈನ್, ಅವೇಶ್ ಖಾನ್, ಯಶ್ ಠಾಕೂರ್.

ಈಶಾನ್ಯ ವಲಯ: ರಾಂಗ್‌ಸೆನ್ ಜೊನಾಥನ್ (ನಾಯಕ), ನೀಲೇಶ್ ಲಾಮಿಚಾನೆ (ಉಪನಾಯಕ), ಕಿಶನ್ ಲಿಂಗ್ಡೋಹ್, ಲ್ಯಾಂಗ್ಲೋನ್ಯಾಂಬಾ, ಎಆರ್ ಅಹ್ಲಾವತ್, ಜೋಸೆಫ್ ಲಾಲ್ತಾನ್ಖುಮಾ, ಪ್ರಫುಲ್ಲಮಣಿ (ವಿಕೆಟ್ ಕೀಪರ್), ದಿಪ್ಪು ಸಂಗ್ಮಾ, ಜೋತಿನ್ ಫೀರೋಯಿಜಮ್, ಇಮ್ಲಿವಾಟಿ ಲೆಮ್ತೂರ್, ಪಲ್ಜೋರ್ ತಮಾಂಗ್, ಕಿಶನ್ ಸಿನ್ಹಾ, ಆಕಾಶ್ ಕುಮಾರ್ ಚೌಧರಿ, ರಾಜ್‌ಕುಮಾರ್ ರೆಕ್ಸ್ ಸಿಂಗ್, ನಾಗಹೊ ಚಿಶಿ.
ಮೀಸಲು ಆಟಗಾರರು: ಲೀ ಯೋಂಗ್ ಲೆಪ್ಚಾ, ನಬಮ್ ಅಬೋ, ಡಿಕಾ ರಾಲ್ಟೆ.

Story first published: Tuesday, June 20, 2023, 18:04 [IST]
Other articles published on Jun 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+