Duleep Trophy 2023 Final: ಪಶ್ಚಿಮ ವಲಯ vs ದಕ್ಷಿಣ ವಲಯ ಟಾಸ್ ವರದಿ, ಆಡುವ 11ರ ಬಳಗ
ಬುಧವಾರ, ಜುಲೈ 12ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಪಶ್ಚಿಮ ವಲಯ ತಂಡವನ್ನು ಎದುರಿಸುತ್ತಿದೆ.
ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಮೊದಲು ಬೌಲಿಂಗ್ ಮಾಡುವುದನ್ನು ಆಯ್ಕೆಮಾಡಿಕೊಂಡರು. ಹೀಗಾಗಿ ಹನುಮ ವಿಹಾರಿ ನಾಯಕತ್ವದ ದಕ್ಷಿಣ ವಲಯ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

ಐದು ದಿನಗಳ ಫೈನಲ್ ಪಂದ್ಯದಲ್ಲಿ ಭಾರತೀಯ ದೇಶೀಯ ಕ್ರಿಕೆಟ್‌ನ ಎರಡು ಪ್ರಮುಖ ವಲಯಗಳು ದುಲೀಪ್ ಟ್ರೋಫಿ ಪ್ರಶಸ್ತಿಗಾಗಿ ಸೆಣಸಾಡುತ್ತಿವೆ.
ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯ ತಂಡವು ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕೇಂದ್ರ ವಲಯದ ವಿರುದ್ಧ ಗೆಲುವು ಸಾಧಿಸಿತು. ಇನ್ನು ದಕ್ಷಿಣ ವಲಯ ತಂಡವು ರೋಚಕ ಹಣಾಹಣಿಯಲ್ಲಿ ಉತ್ತರ ವಲಯದ ವಿರುದ್ಧ 2 ವಿಕೆಟ್‌ಗಳ ಜಯ ದಾಖಲಿಸಿ ಫೈನಲ್ ತಲುಪಿತು.
ಸದ್ಯ ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ವಲಯ ತಂಡ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದೆ. ಆರ್ ಸಮರ್ಥ್ 7 ರನ್ ಗಳಿಸಿ ಔಟಾಗಿದ್ದರೆ, ಮಯಾಂಕ್ ಅಗರ್ವಾಲ್ 23 ರನ್ ಮತ್ತು ತಿಲಕ್ ವರ್ಮಾ 2 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
2023ರ ದುಲೀಪ್ ಟ್ರೋಫಿ ಫೈನಲ್ ಪಂದ್ಯ ವೀಕ್ಷಣೆ ಎಲ್ಲಿ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಲೀಪ್ ಟ್ರೋಫಿ 2023ರ ಫೈನಲ್ ಪಂದ್ಯವನ್ನು ಅಧಿಕೃತ BCCI ಅಪ್ಲಿಕೇಶನ್ ಮತ್ತು ವೆಬ್‌ಸೈಟ್ (BCCI.TV) ಮೂಲಕ ಲೈವ್-ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು ಎಂದು ತಿಳಿಸಿದೆ. ಈ ಪಂದ್ಯವು ಯಾವುದೇ ಟಿವಿ ಚಾನೆಲ್‌ಗಳಲ್ಲಿ ನೇರಪ್ರಸಾರ ಇರುವುದಿಲ್ಲ.
2023ರ ದುಲೀಪ್ ಟ್ರೋಫಿ ಫೈನಲ್: ಪಶ್ಚಿಮ vs ದಕ್ಷಿಣ ಆಡುವ 11ರ ಬಳಗ
ಪಶ್ಚಿಮ ವಲಯ: ಪಶ್ಚಿಮ ವಲಯ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಅತಿತ್ ಶೇಠ್, ಧರ್ಮೇಂದ್ರಸಿನ್ಹ್ ಜಡೇಜಾ, ಚಿಂತನ್ ಗಜಾ, ಅರ್ಜನ್ ನಾಗವಾಸ್ವಾಲ್ಲಾ, ಶಮ್ಸ್ ಸಾಕಾ ಮುಲಾನಿ.
ದಕ್ಷಿಣ ವಲಯ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್, ರಿಕಿ ಭುಯಿ (ವಿಕೆಟ್ ಕೀಪರ್), ತಿಲಕ್ ವರ್ಮ, ವಾಷಿಂಗ್ಟನ್ ಸುಂದರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸಚಿನ್ ಬೇಬಿ, ವಿಜಯ್‌ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಿ ಕೌಶಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications