Duleep Trophy 2024: ಎಂಎಸ್ ಧೋನಿಯಂತೆ ಫ್ಲೈಯಿಂಗ್ ಕ್ಯಾಚ್ ಹಿಡಿದ ಧ್ರುವ್ ಜುರೆಲ್; ವಿಡಿಯೋ ವೈರಲ್
ದುಲೀಪ್ ಟ್ರೋಫಿ 2024ರ ಟೂರ್ನಿಯ ಮೊದಲ ಪಂದ್ಯ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಎ ತಂಡದ ಯುವ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಎಲ್ಲರ ಗಮನ ಸೆಳೆದಿದ್ದಾರೆ.
ಮೈದಾನದಲ್ಲಿ ಧ್ರುವ್ ಜುರೆಲ್ ತಮ್ಮ ಮಿಂಚಿನ ವಿಕೆಟ್‌ಕೀಪಿಂಗ್ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನಪಿಸಿದ್ದಾರೆ. ಧ್ರುವ್ ಜುರೆಲ್ ಹಿಡಿದ ಕ್ಯಾಚ್ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಚಿರತೆಯಂತೆ ವೇಗ
ಭಾರತ ಬಿ ತಂಡದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಭಾರತ ಎ ತಂಡದ ವೇಗದ ಬೌಲರ್ ಅವೇಶ್ ಖಾನ್ ಬೌಲಿಂಗ್ ಮಾಡಲು ಬಂದರು. ಅವೇಶ್ ಖಾನ್ ಅವರು 13ನೇ ಓವರ್‌ನ ಕೊನೆಯ ಎಸೆತದಲ್ಲಿ ಭಾರತ ಬಿ ತಂಡದ ನಾಯಕ ಅಭಿಮನ್ಯು ಈಶ್ವರನ್ ಅವರನ್ನು ಬಲೆಗೆ ಬೀಳಿಸಿದರು.
ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅವೇಶ್ ಖಾನ್ ಅವರ ಕೊನೆಯ ಎಸೆತದಲ್ಲಿ ಚೆಂಡು ಆಫ್ ಸ್ಟಂಪ್‌ನ ಹೊರಗೆ ಹೋಗುತ್ತಿತ್ತು. ಈ ವೇಳೆ ಡ್ರೈವ್ ಶಾಟ್ ಆಡಲು ಅಭಿಮನ್ಯು ಮುಂದಾದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ತಗುಲಿ ಸ್ಲಿಪ್‌ಗೆ ಹೋಯಿತು. ತಕ್ಷಣ ಚಿರತೆಯಂತೆ ಹಾರಿದ ಧ್ರುವ್ ಜುರೆಲ್ ಫ್ಲೈಯಿಂಗ್ ಕ್ಯಾಚ್ ಹಿಡಿದು ಅಭಿಮನ್ಯು ಈಶ್ವರನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಅಭಿಮನ್ಯು 42 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು.
ಧ್ರುವ್ ಜುರೆಲ್ ಹಿಡಿದ ಫ್ಲೈಯಿಂಗ್ ಕ್ಯಾಚ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಅವರನ್ನು ಎಂಎಸ್ ಧೋನಿಗೆ ಹೋಲಿಸುತ್ತಿದ್ದಾರೆ. ಈ ಹಿಂದೆ ಐಪಿಎಲ್ ಮತ್ತು ಟೀಮ್ ಇಂಡಿಯಾ ಪರ ವಿಕೆಟ್‌ಕೀಪಿಂಗ್ ಮಾಡುವ ಸಂದರ್ಭದಲ್ಲಿ ಧೋನಿ ಅವರು ಕೂಡ ಇಂತಹ ಹಲವು ಫ್ಲೈಯಿಂಗ್ ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಜುರೆಲ್ ಅದೃಷ್ಟ ಬದಲಾಗುತ್ತಾ?
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಧ್ರುವ್ ಜುರೆಲ್ ಅವರನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಆಯ್ಕೆ ಮಾಡುವ ಸಾಧ್ಯತೆಯಿದೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಧ್ರುವ ಜುರೆಲ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಶಕ್ತಿ ಆಗಬಲ್ಲರು.
ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸುವ ಮೂಲಕ ಧ್ರುವ್ ಜುರೆಲ್ ಭಾರತವನ್ನು ಸೋಲಿನ ಸುಳಿಯಿಂದ ಹೊರ ತಂದಿದ್ದರು. ಅವರು ಕ್ರೀಸ್‌ಗೆ ಬಂದಾಗ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಇದಾದ ನಂತರ ಧ್ರುವ್ ಜುರೆಲ್ 149 ಎಸೆತಗಳಲ್ಲಿ 90 ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications