For Quick Alerts
ALLOW NOTIFICATIONS  
For Daily Alerts
 

ದುಲೀಪ್ ಟ್ರೋಫಿ ಫೈನಲ್: ಸೌತ್ ಜೋನ್ ಬೌಲಿಂಗ್ ದಾಳಿಗೆ ಅಡ್ಡಿಯಾದ ಹೆತ್ ಪಟೇಲ್

Duleep Trophy final 2022: South Zone vs West Zone, Day 1 Highlights

ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಎರಡು ತಂಡಗಳು ಕೂಡ ಪೈಪೋಟಿಯ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ವೆಸ್ಟ್ ಜೋನ್ ನಾಯಕ ಅಜಿಂಕ್ಯಾ ರಹಾನೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತಾ ಪ್ರದರ್ಶನ ಆರಂಭದಿಂದ ಬರಲಿಲ್ಲ. ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ಧಾರಿಯುತ ಪ್ರದರ್ಶನ ನೀಡಿದ ಕಾರಣದಿಂದಾಗಿ ಕುಸಿತದಿಂದ ಒಂದು ಹಂತಕ್ಕೆ ಪಾರಾಗಿದೆ.

ಆರಂಭದಲ್ಲಿ ಕುಸಿದ ವೆಸ್ಟ್ ಜೋನ್: ಟಾಸ್ ಗೆದ್ದರೂ ವೆಸ್ಟ್ ಜೋನ್ ತಂಡ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿತು. ಭರವಸೆಯ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್ ಹಾಗೂ ನಾಯಕ ಅಜಿಂಕ್ಯಾ ರಹಾನೆ ತಂಡದ ಮೊತ್ತ ಕೇವಲ 16 ರನ್ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡಿದ್ದರು. ನಂತರ ಸರ್ಫರಾಜ್ ಖಾನ್ ಹಾಗೂ ಶ್ರೇಯಸ್ ಐಯ್ಯರ್ ಸಣ್ಣ ಜೊತೆಯಾಟ ನಿಡುವ ಮೂಲಕ ಚೇತರಿಕೆಯ ಪ್ರಯತ್ನ ನಡೆಸಿದರಾದರೂ ವಿಕೆಟ್ ಕಳೆದುಕೊಲ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತು.

ಸಾಧಾರಣ ಮೊತ್ತ ಗಳಿಸಿದ ವೆಸ್ಟ್ ಜೋನ್

ಸಾಧಾರಣ ಮೊತ್ತ ಗಳಿಸಿದ ವೆಸ್ಟ್ ಜೋನ್

ಬಳಿಕ ಯುವ ಆಟಗಾರ ಸರ್ಫರಾಜ್ ಖಾನ್ ಕೂಡ 34 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಆದರೆ ವಿಕೆಟ್ ಕೀಪರ್ ಬ್ಯಾಟರ್ ಹೆತ್ ಪಟೇಲ್ ಇಂಥಾ ಕಠಿಣ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅತಿಥ್ ಶೇಥ್ ಹಾಗೂ ಜಯದೇವ್ ಉನಾದ್ಕಟ್ ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿರುವ ಹೆತ್ ಪಟೇಲ್ 96 ರನ್‌ಗಳಿಸಿ ಅಜೇಯವಾಗುಳಿಯುವ ಮೂಲಕ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಈ ಮೂಲಕ ಶತಕದ ಅಂಚಿನಲ್ಲಿದ್ದಾರೆ. ಮತ್ತೊಂದು ತುದಿಯಲ್ಲಿ ಜಯ್‌ದೇವ್ ಉನಾದ್ಕಟ್ ಉತ್ತಮವಾಗಿ ಸಾಥ್ ನೀಡುತ್ತಿದ್ದು 39 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ವೆಸ್ಟ್ ಜೋನ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 250 ರನ್‌ಗಳಿಸಿದ್ದು 8 ವಿಕೆಟ್ ಕಳೆದುಕೊಂಡಿದೆ.

ಮಿಂಚಿದ ಸಾಯಿ ಕಿಶೋರ್

ಮಿಂಚಿದ ಸಾಯಿ ಕಿಶೋರ್

ಇನ್ನು ಸೌತ್ ಜೋನ್ ತಂಡದ ಪರವಾಗಿ ಸಾಯಿ ಕಿಶೋರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಮೂರು ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಬಸಿಲ್ ತಂಪಿ ಹಾಗೂ ಚೀಪುರಪ್ಪಲ್ಲಿ ಸ್ಟೀಫನ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರೆ ಕೃಷ್ಣಪ್ಪ ಕೆ ಗೌತಮ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಇತ್ತಂಡಗಳ ಆಡುವ ಬಳಗ ಹೀಗಿದೆ

ಇತ್ತಂಡಗಳ ಆಡುವ ಬಳಗ ಹೀಗಿದೆ

ಸೌತ್ ಝೋನ್ ಸ್ಕ್ವಾಡ್ ಹೀಗಿದೆ: ರೋಹನ್ ಕುನ್ನುಮ್ಮಲ್, ಮಯಾಂಕ್ ಅಗರ್ವಾಲ್, ಬಾಬಾ ಇಂದ್ರಜಿತ್, ಹನುಮ ವಿಹಾರಿ (ನಾಯಕ), ಮನೀಶ್ ಪಾಂಡೆ, ರಿಕಿ ಭುಯಿ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ತುಳಸಿ ತಂಪಿ, ತೆಲುಕುಪಲ್ಲಿ ರವಿತೇಜ, ಚೀಪುರಪಲ್ಲಿ ಸ್ಟೀಫನ್
ಬೆಂಚ್: ತನಯ್ ತ್ಯಾಗರಾಜನ್, ಲಕ್ಷಯ್ ಗಾರ್ಗ್, ಏಕನಾಥ್ ಕೇರ್ಕರ್, ದೇವದತ್ ಪಡಿಕ್ಕಲ್

ವೆಸ್ಟ್ ಜೋಸ್ ಸ್ಕ್ವಾಡ್ ಹೀಗಿದೆ: ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಅತಿತ್ ಶೇಠ್, ಶಮ್ಸ್ ಮುಲಾನಿ, ಹೆಟ್ ಪಟೇಲ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಜಯದೇವ್ ಉನದ್ಕತ್, ಚಿಂತನ್ ಗಜಾ
ಬೆಂಚ್: ರಾಹುಲ್ ತ್ರಿಪಾಠಿ, ಅರ್ಮಾನ್ ಜಾಫರ್, ಚಿರಾಗ್ ಜಾನಿ, ಸತ್ಯಜೀತ್ ಬಚಾವ್, ಚೇತನ್ ಸಕರಿಯಾ, ಹಾರ್ದಿಕ್ ತಮೋರ್, ಪೃಥ್ವಿ ಶಾ

Story first published: Wednesday, September 21, 2022, 20:19 [IST]
Other articles published on Sep 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+