ದುಲೀಪ್ ಟ್ರೋಫಿ ಫೈನಲ್: 270 ರನ್‌ಗೆ ವೆಸ್ಟ್ ಜೋನ್ ಆಲೌಟ್: ಬ್ಯಾಟಿಂಗ್ ಆರಂಭಿಸಿದ ಸೌತ್ ಜೋನ್

ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಜೋನ್ ಹಾಗೂ ಸೌತ್ ಜೋನ್ ಮುಖಾಮುಖಿಯಾಗಿದ್ದು ಟ್ರೋಫಿಗಾಗಿ ಸೆಣೆಸಾಡುತ್ತಿದೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಅಜಿಂಕ್ಯಾ ರಹಾನೆ ನೇತೃತ್ವದ ವೆಸ್ಟ್ ಜೋನ್ 270 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ನ ಆಟವನ್ನು ಮುಗಿಸಿದೆ. 96 ರನ್‌ಗಳಿಸಿ ಮೊದಲ ದಿನ ಅಜೇಯವಾಗುಳಿದು ಶತಕದ ಅಂಚಿನಲ್ಲಿದ್ದ ಹೆತ್ ಪಟೇಲ್ ಇಂದು ಕೇವಲ ಒಂದು ರನ್ ಸೇರಿಸಿ ಶತಕದ ಅಂಚಿನಲ್ಲಿ ಎಡವಿದ್ದಾರೆ.
ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಎರಡು ತಂಡಗಳು ಕೂಡ ಪೈಪೋಟಿಯ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ವೆಸ್ಟ್ ಜೋನ್ ನಾಯಕ ಅಜಿಂಕ್ಯಾ ರಹಾನೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತಾ ಪ್ರದರ್ಶನ ಆರಂಭದಿಂದ ಬರಲಿಲ್ಲ. ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ಧಾರಿಯುತ ಪ್ರದರ್ಶನ ನೀಡಿದ ಕಾರಣದಿಂದಾಗಿ ಕುಸಿತದಿಂದ ಒಂದು ಹಂತಕ್ಕೆ ಪಾರಾಯಿತಾದರೂ ಅಂತಿಮವಾಗಿ 270 ರನ್‌ಗಳಿಗೆ ಆಟ ಮುಗಿಸಿದೆ.
Live ಸ್ಕೋರ್ ಕಾರ್ಡ್ ಹೀಗಿದೆ
ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ವೆಸ್ಟ್ ಜೋನ್: ಟಾಸ್ ಗೆದ್ದ ವೆಸ್ಟ್ ಜೋನ್ ತಂಡ ಆರಂಭದಿಂದಲೇ ಹಿನ್ನಡೆ ಅನುಭವಿಸಿತು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಹೆತ್ ಪಟೇಲ್ ಇಂಥಾ ಕಠಿಣ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅತಿಥ್ ಶೇಥ್ ಹಾಗೂ ಜಯದೇವ್ ಉನಾದ್ಕಟ್ ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿರುವ ಹೆತ್ ಪಟೇಲ್ 97 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಜಯ್‌ದೇವ್ ಉನಾದ್ಕಟ್ ಉತ್ತಮವಾಗಿ ಸಾಥ್ ನೀಡಿದ್ದು 47 ರನ್‌ಗಳಿಸಿ ಅಜೇಗುಳಿದರು. ಈ ಮೂಲಕ ವೆಸ್ಟ್ ಜೋನ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಆಲೌಟ್ ಆಗಿದೆ.
5 ವಿಕೆಟ್ ಗೊಂಚಲು ಪಡೆದ ಸಾಯಿ ಕಿಶೋರ್: ಇನ್ನು ಸೌತ್ ಜೋನ್ ತಂಡದ ಪರವಾಗಿ ಸಾಯಿ ಕಿಶೋರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಇನ್ನು ಬಸಿಲ್ ತಂಪಿ ಹಾಗೂ ಚೀಪುರಪ್ಪಲ್ಲಿ ಸ್ಟೀಫನ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರೆ ಕೃಷ್ಣಪ್ಪ ಕೆ ಗೌತಮ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಇತ್ತಂಡಗಳ ಆಡುವ ಬಳಗ ಹೀಗಿದೆ
ಸೌತ್ ಝೋನ್ ಸ್ಕ್ವಾಡ್ ಹೀಗಿದೆ: ರೋಹನ್ ಕುನ್ನುಮ್ಮಲ್, ಮಯಾಂಕ್ ಅಗರ್ವಾಲ್, ಬಾಬಾ ಇಂದ್ರಜಿತ್, ಹನುಮ ವಿಹಾರಿ (ನಾಯಕ), ಮನೀಶ್ ಪಾಂಡೆ, ರಿಕಿ ಭುಯಿ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ತುಳಸಿ ತಂಪಿ, ತೆಲುಕುಪಲ್ಲಿ ರವಿತೇಜ, ಚೀಪುರಪಲ್ಲಿ ಸ್ಟೀಫನ್
ಬೆಂಚ್: ತನಯ್ ತ್ಯಾಗರಾಜನ್, ಲಕ್ಷಯ್ ಗಾರ್ಗ್, ಏಕನಾಥ್ ಕೇರ್ಕರ್, ದೇವದತ್ ಪಡಿಕ್ಕಲ್
ವೆಸ್ಟ್ ಜೋಸ್ ಸ್ಕ್ವಾಡ್ ಹೀಗಿದೆ: ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಅತಿತ್ ಶೇಠ್, ಶಮ್ಸ್ ಮುಲಾನಿ, ಹೆಟ್ ಪಟೇಲ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಜಯದೇವ್ ಉನದ್ಕತ್, ಚಿಂತನ್ ಗಜಾ
ಬೆಂಚ್: ರಾಹುಲ್ ತ್ರಿಪಾಠಿ, ಅರ್ಮಾನ್ ಜಾಫರ್, ಚಿರಾಗ್ ಜಾನಿ, ಸತ್ಯಜೀತ್ ಬಚಾವ್, ಚೇತನ್ ಸಕರಿಯಾ, ಹಾರ್ದಿಕ್ ತಮೋರ್, ಪೃಥ್ವಿ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications