ದುಲೀಪ್ ಟ್ರೋಫಿ ಫೈನಲ್: ಯಶಸ್ವಿ ಜೈಸ್ವಾಲ್ ಅಮೋಘ ದ್ವಿಶತಕ; ವೆಸ್ಟ್ ಝೋನ್ ಹಿಡಿತದಲ್ಲಿ ಪಂದ್ಯ

ದುಲೀಪ್ ಟ್ರೋಫಿಯ ಫೈನಲ್ ಪಂದ್ಯ ರೋಚಕ ಘಟ್ಟವನ್ನು ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ವೆಸ್ಟ್ ಝೋನ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಅದರಲ್ಲೂ ಯುವ ಆಟರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ ಸಿಡಿಸಿದ್ದು ತಂಡ ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್‌ಗಳಿಸಿದ್ದ ವೆಸ್ಟ್ ಝೋನ್ ಬಳಿಕ ಎದುರಾಳಿ ಸೌತ್ ಝೋನ್ ತಂಡವನ್ನು 327 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಸಣ್ಣ ಹಿನ್ನಡೆಯನ್ನು ಅನುಭವಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಝೋನ್ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.
ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಝೋನ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘ ಶತಕ ದಾಖಲಿಸಿದ್ದಾರೆ. 244 ಎಸೆತಗಳನ್ನು ಎದುರಸಿರುವ ಜೈಸ್ವಾಲ್ 209 ರನ್‌ಗಳಿಸಿ ಅಜೃಯವಾಗುಳಿದಿದ್ದಾರೆ. ಈ ಮೂಲಕ ಮತ್ತಷ್ಟು ರನ್ ಕಲೆಹಾಕುವ ಸೂಚನೆ ನೀಡಿದ್ದಾರೆ. ಇನ್ನು ಶ್ರೇಯಸ್ ಐಯ್ಯರ್ ಕೂಡ 70 ರನ್‌ಗಳ ಕೊಡುಗೆ ನಿಡುವ ಮೂಲಕ ಮಿಂಚಿದ್ದಾರೆ. ಮತ್ತೋರ್ವ ಯುವ ದಾಂಡಿಗ ಸರ್ಫರಾಜ್ ಖಾನ್ 30 ರನ್‌ಗಳಿಸಿದ್ದು ನಾಲ್ಕನೇ ದಿನಕ್ಕೆ ಯಶಸ್ವಿ ಜೈಸ್ವಾಲ್ ಜೊತೆಗೆ ಕ್ರೀಸ್ ಕಾಯ್ದಿರಿಸಿದ್ದಾರೆ.

327 ರನ್‌ಗಳಿಗೆ ಅಂತ್ಯವಾಯಿತು ಸೌತ್ ಝೋನ್ ಹೋರಾಟ
ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಸೌತ್ ಝೋನ್ 327 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಅಂತ್ಯಗಳಿಸಿತು. ತಂಡದ ಪರವಾಗಿ ಬಾಬಾ ಇಂಗ್ರಜಿತ್ ಭರ್ಜರಿ ಶತಕ ಸಿಡಿಸಿ ಮಿಂಚಿದರೆ ಮನೀಶ್ ಪಾಂಡೆ ಅರ್ಧ ಶತಕ ಸಿಡಿಸಿ ಉತ್ತಮ ಕೊಡುಗೆ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ವೆಸ್ಟ್ ಜೋನ್: ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್ ಗೆದ್ದ ವೆಸ್ಟ್ ಜೋನ್ ತಂಡ ಆರಂಭದಿಂದಲೇ ಹಿನ್ನಡೆ ಅನುಭವಿಸಿತು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಹೆತ್ ಪಟೇಲ್ ಇಂಥಾ ಕಠಿಣ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅತಿಥ್ ಶೇಥ್ ಹಾಗೂ ಜಯದೇವ್ ಉನಾದ್ಕಟ್ ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿರುವ ಹೆತ್ ಪಟೇಲ್ 97 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದು ತುದಿಯಲ್ಲಿ ಜಯ್‌ದೇವ್ ಉನಾದ್ಕಟ್ ಉತ್ತಮವಾಗಿ ಸಾಥ್ ನೀಡಿದ್ದು 47 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ವೆಸ್ಟ್ ಜೋನ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಆಲೌಟ್ ಆಗಿತ್ತು.

ಇತ್ತಂಡಗಳ ಆಡುವ ಬಳಗ ಹೀಗಿದೆ
ಸೌತ್ ಝೋನ್ ಸ್ಕ್ವಾಡ್ ಹೀಗಿದೆ: ರೋಹನ್ ಕುನ್ನುಮ್ಮಲ್, ಮಯಾಂಕ್ ಅಗರ್ವಾಲ್, ಬಾಬಾ ಇಂದ್ರಜಿತ್, ಹನುಮ ವಿಹಾರಿ (ನಾಯಕ), ಮನೀಶ್ ಪಾಂಡೆ, ರಿಕಿ ಭುಯಿ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ತುಳಸಿ ತಂಪಿ, ತೆಲುಕುಪಲ್ಲಿ ರವಿತೇಜ, ಚೀಪುರಪಲ್ಲಿ ಸ್ಟೀಫನ್
ಬೆಂಚ್: ತನಯ್ ತ್ಯಾಗರಾಜನ್, ಲಕ್ಷಯ್ ಗಾರ್ಗ್, ಏಕನಾಥ್ ಕೇರ್ಕರ್, ದೇವದತ್ ಪಡಿಕ್ಕಲ್
ವೆಸ್ಟ್ ಜೋಸ್ ಸ್ಕ್ವಾಡ್ ಹೀಗಿದೆ: ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಅತಿತ್ ಶೇಠ್, ಶಮ್ಸ್ ಮುಲಾನಿ, ಹೆಟ್ ಪಟೇಲ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಜಯದೇವ್ ಉನದ್ಕತ್, ಚಿಂತನ್ ಗಜಾ
ಬೆಂಚ್: ರಾಹುಲ್ ತ್ರಿಪಾಠಿ, ಅರ್ಮಾನ್ ಜಾಫರ್, ಚಿರಾಗ್ ಜಾನಿ, ಸತ್ಯಜೀತ್ ಬಚಾವ್, ಚೇತನ್ ಸಕರಿಯಾ, ಹಾರ್ದಿಕ್ ತಮೋರ್, ಪೃಥ್ವಿ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications