ದುಲೀಪ್ ಟ್ರೋಫಿ ಫೈನಲ್: ಬೃಹತ್ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದ ವೆಸ್ಟ್ ಝೋನ್

ವೆಸ್ಟ್ ಝೋನ್ ಹಾಗೂ ಸೌತ್ ಝೋನ್ ವಿರುದ್ಧ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ನೇತೃತ್ವದ ವೆಸ್ಟ್ ಝೋನ್ ತಂಡ ಭಾರೀ ಗೆಲುವು ಸಾಧಿಸಿದೆ. ಈ ಮೂಲಕ ಪ್ರತಿಷ್ಠಿತ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಣಗ್ ಎರಡೂ ವಿಭಾಗದಲ್ಲಿಯೂ ಭರ್ಜರಿ ಪ್ರದರ್ಶನ ನೀಡಿರುವ ವೆಸ್ಟ್ ಝೋನ್ ಬೃಹತ್ ಅಂತರದ ಗೆಲುವು ಸಾಧಿಸಿ ಟ್ರೋಫಿ ಗೆದ್ದುಕೊಂಡಿದೆ.
ಸೌತ್ ಝೋನ್‌ಗೆ ಅಂತಿಮ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 529 ರನ್‌ಗಳ ಬೃಹತ್ ಗುರಿಯನ್ನು ವೆಸ್ಟ್ ಝೋನ್ ನಿಗದಿಪಡಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಹನುಮ ವಿಹಾರಿ ನೇತೃತ್ವದ ಸೌತ್ ಝೋನ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ರೋಹನ್ ಕನ್ನುಮ್ಮಲ್ ಹಾಗೂ ರವಿ ತೇಜ ಮಾತ್ರವೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಹೋರಾಡಿದರು, ಉಳಿದ ಆಟಗಾರರಿಂದ ನೀರಸ ಪ್ರದರ್ಶನ ಬಂದ ಕಾರಣ ಸೌತ್ ಝೋನ್ ಈ ಪಂದ್ಯವನ್ನು ಸುಲಭವಾಗಿ ಎದುರಾಳಿಗೆ ಬಿಟ್ಟುಕೊಟ್ಟಿದೆ.

ಮೇಲುಗೈಗೆ ಕಾರಣವಾದ ಜೈಸ್ವಾಲ್ ಆಟ
ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತದ ಮುನ್ನಡೆಯನ್ನು ಪಡೆದುಕೊಳ್ಳುವ ಮೂಲಕ ಭರವಸೆ ಮೂಡಿಸಿದ್ದ ಸೌತ್ ಝೋನ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಅಂಥಾ ಪ್ರದರ್ಶನ ನೀಡಲು ವಿಉಫಲವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಝೋನ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕವನ್ನು ಸಿಡಿಸಿ ಮಿಂಚಿದರು. ಯಶಸ್ವಿ ಜೈಸ್ವಾಲ್ ಬರೊಬ್ಬರಿ 265 ರನ್‌ಗಳನ್ನು ಗಳಿಸಿದ್ದು ಮತ್ತೋರ್ವ ಯುವ ಆಟಗಾರ ಸರ್ಫರಾಜ್ ಖಾನ್ ಕೂಡ 127 ರನ್‌ಗಳ ಕೊಡುಗೆ ನೀಡಿದರು. ಈ ಭರ್ಜರಿ ಪ್ರದರ್ಶನದಿಂದಾಗಿ ಸೌತ್ ಝೋನ್ ತಂಡ 4 ವಿಕೆಟ್ ಕಳೆದುಕೊಂಡು 585 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಹೀಗಾಗಿ ಸೌತ್ ಝೋನ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲೊ ಗೆಲ್ಲಲು 529 ರನ್‌ಗಳನ್ನು ನಿಗದಿಪಡಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ವೆಸ್ಟ್
ಇನ್ನು ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಜೋನ್ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಜೋನ್ ಪರವಾಗಿ ಹೆತ್ ಪಟೇಲ್ ಮಾತ್ರವೇ 98 ರನ್‌ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ವೆಸ್ಟ್ ಝೋನ್ ತಂಡ 270 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ್ದ ಸೌತ್ ಝೋನ್ ತಂಡ ಬಾಬಾ ಇಂದ್ರಜಿತ್ ಅವರ ಶತಕದ ಸಹಾಯದಿಂದ 327 ರನ್‌ಗಳನ್ನು ಗಳಿಸಲು ಶಕ್ತವಾಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 57 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತ್ತು ವೆಸ್ಟ್ ಝೋನ್. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ.

ಅಂತಿಮ ಮೂರು ದಿನದಾಟ ಸಂಪೂರ್ಣ ಹಿಡಿತ ಸಾಧಸಿದ ವೆಸ್ಟ್
ದುಲೀಪ್ ಟ್ರೋಫಿಯ ಮೊದಲ ಎರಡು ದಿನದಾಟದಲ್ಲಿ ಎರಡು ತಂಡಗಳು ಕೂಡ ಬಹುತೇಕ ಸಮಬಲದ ಹೋರಾಟ ಪ್ರದರ್ಶಿಸಿದ್ದವು. ಸಣ್ಣ ಹಂತದಲ್ಲಿ ಸೌತ್ ಝೋನ್ ಮೇಲುಗೈ ಸಾಧಿಸಿಸುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ಮೂರು ಹಾಗೂ ನಾಲ್ಕನೇ ದಿನದಾಟದಲ್ಲಿ ವೆಸ್ಟ್ ಝೋನ್ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಪರಿಣಾಮವಾಗಿ ಅಂತಿಮ ದಿನದಾಟದಲ್ಲಿ ಗೆಲುವಿನ ಸನಿಹಕ್ಕೆ ಬಂದಿತ್ತು ವೆಸ್ಟ್ ಝೋನ್. ಇತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಭರವಸೆಯ ಪ್ರದರ್ಶನ ನೀಡಿದ್ದ ಸೌತ್ ಝೋನ್ ನಂತರ ಆ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ನಿರಾಸೆ ಅನುಭವಿಸಿದೆ.

ಸ್ಕ್ವಾಡ್‌ಗಳು ಹೀಗಿದೆ
ಸೌತ್ ಝೋನ್ ಸ್ಕ್ವಾಡ್ ಹೀಗಿದೆ: ರೋಹನ್ ಕುನ್ನುಮ್ಮಲ್, ಮಯಾಂಕ್ ಅಗರ್ವಾಲ್, ಬಾಬಾ ಇಂದ್ರಜಿತ್, ಹನುಮ ವಿಹಾರಿ (ನಾಯಕ), ಮನೀಶ್ ಪಾಂಡೆ, ರಿಕಿ ಭುಯಿ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ತುಳಸಿ ತಂಪಿ, ತೆಲುಕುಪಲ್ಲಿ ರವಿತೇಜ, ಚೀಪುರಪಲ್ಲಿ ಸ್ಟೀಫನ್
ಬೆಂಚ್: ತನಯ್ ತ್ಯಾಗರಾಜನ್, ಲಕ್ಷಯ್ ಗಾರ್ಗ್, ಏಕನಾಥ್ ಕೇರ್ಕರ್, ದೇವದತ್ ಪಡಿಕ್ಕಲ್
ವೆಸ್ಟ್ ಜೋಸ್ ಸ್ಕ್ವಾಡ್ ಹೀಗಿದೆ: ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಅತಿತ್ ಶೇಠ್, ಶಮ್ಸ್ ಮುಲಾನಿ, ಹೆಟ್ ಪಟೇಲ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಜಯದೇವ್ ಉನದ್ಕತ್, ಚಿಂತನ್ ಗಜಾ
ಬೆಂಚ್: ರಾಹುಲ್ ತ್ರಿಪಾಠಿ, ಅರ್ಮಾನ್ ಜಾಫರ್, ಚಿರಾಗ್ ಜಾನಿ, ಸತ್ಯಜೀತ್ ಬಚಾವ್, ಚೇತನ್ ಸಕರಿಯಾ, ಹಾರ್ದಿಕ್ ತಮೋರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications