ದುಲೀಪ್ ಟ್ರೋಫಿ: ಶಹಬಾಝ್ ಅಹ್ಮದ್‌ಗೆ ಬದಲಿಯಾಗಿ ದಿಢೀರ್ ಆಯ್ಕೆಯಾದ ಎಂ.ಡಿ. ಕೌನೈನ್ ಖುರೇಷಿ ಯಾರು?
ನವದೆಹಲಿ, ಆಗಸ್ಟ್ 30: ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ 2026ರ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಜೋನ್ ಮತ್ತು ಸೆಂಟ್ರಲ್ ಜೋನ್ ನಡುವಿನ ಹಣಾಹಣಿಯಲ್ಲಿ, ಶಹಬಾಝ್ ಅಹ್ಮದ್‌ರ ಬದಲಿಗೆ ಜಾರ್ಖಂಡ್‌ನ ಆಲ್-ರೌಂಡರ್ ಎಂ.ಡಿ.ಕೌನೈನ್ ಖುರೇಷಿ ಅವರನ್ನು ಸೇರಿಸಲಾಗಿದೆ. ಈ ಬದಲಾವಣೆ ಅಚ್ಚರಿ ಮೂಡಿಸಿದ್ದು, ಟೂರ್ನಿಯ ನಿರ್ಣಾಯಕ ಹಂತದಲ್ಲಿ ಖುರೇಷಿ ಅನಿರೀಕ್ಷಿತವಾಗಿ ಈಸ್ಟ್ ಜೋನ್ ತಂಡವನ್ನು ಸೇರಿಕೊಂಡಿದ್ದಾರೆ.
ಕುತೂಹಲಕಾರಿಯಾಗಿ ಶಹಬಾಝ್ ಅಹ್ಮದ್ ದುಲೀಪ್ ಟ್ರೋಫಿ 2026ರ ಸೆಮಿಫೈನಲ್‌ಗೇರುವಲ್ಲಿ ಈಸ್ಟ್ ಜೋನ್‌ಗೆ ಪ್ರಮುಖ ಪಾತ್ರ ವಹಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ನಾರ್ತ್ ಈಸ್ಟ್ ಜೋನ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಅವರು ಬ್ಯಾಟಿಂಗ್‌ನಲ್ಲಿ ಮಹತ್ವದ ಇನ್ನಿಂಗ್ಸ್ ಆಡಿದ್ದರು ಮತ್ತು ಬೌಲಿಂಗ್‌ನಲ್ಲಿ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಅವರ ಈ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಈಸ್ಟ್ ಜೋನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಎಂ.ಡಿ. ಕೌನೈನ್ ಖುರೇಷಿ ಯಾರು?
ಎಂ.ಡಿ.ಕೌನೈನ್ ಖುರೇಷಿ ಸೆಪ್ಟೆಂಬರ್ 29, 2002ರಂದು ಧನ್‌ಬಾದ್‌ನಲ್ಲಿ ಜನಿಸಿದರು. ಇವರು 23 ವರ್ಷದ ಯುವ ಕ್ರಿಕೆಟಿಗರಾಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸುತ್ತಾರೆ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಇವರು, ಬಲಗೈ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಾರೆ.
ಖುರೇಷಿ ಇದುವರೆಗೆ ಜಾರ್ಖಂಡ್ ಪರ ನಾಲ್ಕು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ 45 ರನ್‌ಗಳನ್ನು 15.00 ಸರಾಸರಿಯಲ್ಲಿ ಮತ್ತು 95.74 ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 43 ಆಗಿದ್ದು, ಸೀಮಿತ ಅವಕಾಶಗಳಲ್ಲಿ ಏಳು ಬೌಂಡರಿಗಳನ್ನು ಬಾರಿಸಿದ್ದಾರೆ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ ಅನುಭವ ಕಡಿಮೆ ಇದ್ದರೂ, ಖುರೇಷಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಈಗಾಗಲೇ ತೋರಿಸಿದ್ದಾರೆ. ಅವರ 96ರ ಸಮೀಪದ ಸ್ಟ್ರೈಕ್ ರೇಟ್ ಆಕ್ರಮಣಕಾರಿ ಆಟವನ್ನು ಸೂಚಿಸುತ್ತದೆ.
ಬೌಲಿಂಗ್‌ನಲ್ಲಿ, ಖುರೇಷಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೇವಲ 12 ಎಸೆತಗಳನ್ನು ಎಸೆದಿದ್ದು, 8 ರನ್‌ಗಳನ್ನು ನೀಡಿ ಯಾವುದೇ ವಿಕೆಟ್ ಪಡೆದಿಲ್ಲ. ಈ ಸಣ್ಣ ಸ್ಪೆಲ್‌ನಲ್ಲಿ ಅವರ ಎಕಾನಮಿ ರೇಟ್ 4.00 ಆಗಿದೆ.
ತಮ್ಮ ವೃತ್ತಿಜೀವನದ ಈ ಹಂತದಲ್ಲಿ, ಖುರೇಷಿ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಕ್ರಿಕೆಟಿಗರಾಗಿದ್ದಾರೆ ಮತ್ತು ಸೀಮಿಯರ್ ಮಟ್ಟದಲ್ಲಿ ಕಡಿಮೆ ಅನುಭವ ಹೊಂದಿದ್ದಾರೆ. ಆದಾಗ್ಯೂ, ಎರಡೂ ವಿಭಾಗಗಳಲ್ಲಿ ಕೊಡುಗೆ ನೀಡುವ ಅವರ ಸಾಮರ್ಥ್ಯ, ದೇಶೀಯ ಕ್ರಿಕೆಟ್‌ನಲ್ಲಿ ಅನುಭವ ಮತ್ತು ಅವಕಾಶಗಳನ್ನು ಪಡೆದಂತೆ ಜಾರ್ಖಂಡ್‌ಗೆ ಉಪಯುಕ್ತ ಆಟಗಾರನಾಗಬಹುದು.
ದುಲೀಪ್ ಟ್ರೋಫಿ 2026 ಈಸ್ಟ್ ಜೋನ್ vs ಸೆಂಟ್ರಲ್ ಜೋನ್: ಆಡುವ ಬಳಗ
ಈಸ್ಟ್ ಜೋನ್ (ಆಡುವ ಬಳಗ): ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಘ್ರ, ಸುದೀಪ್ ಕುಮಾರ್ ಘರಮಿ, ಇಶಾನ್ ಕಿಶನ್(ನಾಯಕ/ವಿ.ಕೀ), ವಿರಾಟ್ ಸಿಂಗ್, ಎಂ.ಡಿ. ಕೌನೈನ್ ಖುರೇಷಿ, ಅನುಕೂಲ್ ರಾಯ್, ಅಭಿಜಿತ್ ಕೆ. ಸರ್ಕಾರ್, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್
ಸೆಂಟ್ರಲ್ ಜೋನ್ (ಆಡುವ ಬಳಗ): ಅಮನ್ ಮೊಖಾದೆ, ಆರ್ಯನ್ ಜುಯಾಲ್(ವಿ.ಕೀ), ಕುನಾಲ್ ಚಾಂಡೆಲಾ, ಯಶ್ ರಾಠೋಡ್, ರಜತ್ ಪಾಟೀದಾರ್(ನಾಯಕ), ರಿಂಕು ಸಿಂಗ್, ಸಾರಾಂಶ ಜೈನ್, ಹರ್ಷ ದುಬೆ, ಅರ್ಷದ್ ಖಾನ್, ಯಶ್ ಠಾಕೂರ್, ಆರ್ಯನ್ ಪಾಂಡೆ
ಈಸ್ಟ್ ಜೋನ್ vs ಸೆಂಟ್ರಲ್ ಜೋನ್: ತಂಡಗಳು
ಈಸ್ಟ್ ಜೋನ್ ತಂಡ: ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಘ್ರ, ಸುದೀಪ್ ಕುಮಾರ್ ಘರಮಿ, ವಿರಾಟ್ ಸಿಂಗ್, ಇಶಾನ್ ಕಿಶನ್(ನಾಯಕ/ವಿ.ಕೀ), ಶಹಬಾಝ್ ಅಹ್ಮದ್, ಅನುಕೂಲ್ ರಾಯ್, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಅಭಿಜಿತ್ ಕೆ. ಸರ್ಕಾರ್, ಸುಭ್ರಾಂಶು ಸೇನಾಪತಿ, ಡೆನಿಶ್ ದಾಸ್, ಸೂರಜ್ ಸಿಂಧು ಜೈಸ್ವಾಲ್, ಶಿಖರ್ ಮೋಹನ್
ಸೆಂಟ್ರಲ್ ಜೋನ್ ತಂಡ: ಆಯುಷ್ ಪಾಂಡೆ, ಆರ್ಯನ್ ಜುಯಾಲ್(ವಿ.ಕೀ), ಯಶ್ ರಾಠೋಡ್, ರಜತ್ ಪಾಟೀದಾರ್(ನಾಯಕ), ರಿಂಕು ಸಿಂಗ್, ಹರ್ಷ ದುಬೆ, ಸಾರಾಂಶ ಜೈನ್, ಅರ್ಷದ್ ಖಾನ್, ಜೀಶಾನ್ ಅನ್ಸಾರಿ, ಯಶ್ ಠಾಕೂರ್, ಆರ್ಯನ್ ಪಾಂಡೆ, ಕುನಾಲ್ ಚಾಂಡೆಲಾ, ನಚಿಕೇತ್ ಭೂತೆ, ಅಮನ್ ಮೊಖಾದೆ, ಕುನಾಲ್ ಸಿಂಗ್ ರಾಠೋಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications