Golden Shoes: ರಸೆಲ್‌ಗೆ ಗೋಲ್ಡನ್ ಶೂ ಗಿಫ್ಟ್ ನೀಡಿದ ಡ್ವೇನ್ ಬ್ರಾವೋ
ವೆಸ್ಟ್ ಇಂಡೀಸ್‌ನ ಸ್ಟಾರ್ ದೈತ್ಯ ಆಟಗಾರ ಡ್ವೇನ್ ಬ್ರಾವೋ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಭರ್ಜರಿ ಆಟದಿಂದ ಸುದ್ದಿಯಾಗಿಲ್ಲ. ಆದರೆ ಈ ಬಾರಿ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಉಡುಗೊರೆಯನ್ನು ನೀಡಿ ಭಾರೀ ಸುದ್ದಿಯಲ್ಲಿದ್ದಾರೆ. ಹಾಗಿದ್ದರೆ, ಅವರು ನೀಡಿದ ಗಿಫ್ಟ್ ಏನು?, ಯಾರಿಗೆ ಗಿಫ್ಟ್ ನೀಡಿದ್ದಾರೆ ಇಲ್ಲಿದೆ ವರದಿ.
ಸದ್ಯ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಮಾಜಿ ಆಟಗಾರ ಡ್ವೇನ್ ಬ್ರಾವೋ, ತಮ್ಮ ಸಹ ಆಟಗಾರ ಆಂಡ್ರೆ ರಸೆಲ್ ಗೆ ಭಾರೀ ಮೊತ್ತದ ಉಡುಗೊರೆಯಾಗಿ ನೀಡಿದ್ದಾರೆ. ಇದು ವಿಶ್ವದಾದ್ಯಂತದ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದಿದೆ.

ಗೋಲ್ಡನ್ ಶೂ ಉಡುಗೊರೆ
ಈ ವಿಡಿಯೋದಲ್ಲಿ ಡ್ವೇನ್ ಬ್ರಾವೋ ತಮ್ಮ ಗೋಲ್ಡನ್ ಶೂಗಳನ್ನು ಆಂಡ್ರೆ ರಸೆಲ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಬ್ರಾವೋ ನೀಡಿದ್ದ ಶೂಗನ್ನು ಧರಿಸಿ ಆಂಡ್ರೆ ರಸೆಲ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಒಬ್ಬ ಆಲ್ ರೌಂಡರ್ ತನ್ನ ಪರಂಪರೆಯನ್ನು ಮತ್ತೊಬ್ಬ ಆಲ್ ರೌಂಡರ್ ಆಟಗಾರನಿಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವೈರಲ್ ವೀಡಿಯೊದಲ್ಲಿ, ರಸೆಲ್ ಅವರು ಈ ಶೂಗಳನ್ನು ಧರಿಸಿ ಬೌಲ್ ಮಾಡುವುದಾಗಿ ಮತ್ತು ಬ್ರಾವೋಗೆ ಗೌರವವನ್ನು ತೋರಿಸಲು, ಅವರು ತಮ್ಮ ಕೈಯಿಂದ ಶೂಗಳನ್ನು ಸ್ಪರ್ಶಿಸಿದರು ಮತ್ತು ನಂತರ ಅವುಗಳಿಗೆ ಮುತ್ತಿಟ್ಟರು.
ಇತ್ತೀಚಿಗೆ ಆಗಸ್ಟ್ 31 ರಂದು ವಿಂಡೀಸ್ ತಂಡದ ದೈತ್ಯ ಆಟಗಾರ ಬ್ರಾವೋ ಎಲ್ಲಾ ರೀತಿಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬ್ರಾವೊ ತಮ್ಮ ಕೊನೆಯ ವೃತ್ತಿಪರ ಪಂದ್ಯಾವಳಿಯನ್ನು CPL 2024 ರೂಪದಲ್ಲಿ ಆಡುತ್ತಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಇದಕ್ಕೂ ಮೊದಲು, ಅವರು 2023 ರ ಋತುವಿನ ಆರಂಭದ ಮೊದಲು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬ್ರಾವೋ ನಿವೃತ್ತಿ ಘೋಷಿಸಿದ್ದರು. 2021 ರಲ್ಲಿ T20 ವಿಶ್ವಕಪ್ ನಂತರ, ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಿಂದ ನಿವೃತ್ತರಾದರು.
ಡ್ವೇನ್ ಬ್ರಾವೋ ಅವರ ತಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ರಸ್ತುತ 4 ಅಂಕಗಳೊಂದಿಗೆ CPL 2024 ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ರೈಡರ್ಸ್ ತಂಡ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications