ಗೆಲುವಿನ ಸಂತಸದ ಜೊತೆಗೆ ಕಹಿ ಸುದ್ದಿ ಕೊಟ್ಟ ಚೆನ್ನೈ ಕೋಚ್!

ಅಬುದಾಭಿ, ಸೆ. 20: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ 3 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬೀಗುತ್ತಿದೆ.
ಆದರೆ, ಇದರ ಬೆನ್ನಲ್ಲೇ ಕೋಚ್ ಸ್ಟೀಫನ್ ಫ್ಲೆಮಿಂಗ್ ಕಹಿ ಸುದ್ದಿ ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಡ್ವಾಯ್ನೆ ಬ್ರಾವೋ ಇನ್ನೂ ಕೆಲ ಕಾಲ ಮೈದಾನಕ್ಕಿಳಿಯುವುದು ಕಷ್ಟ ಎಂಬ ಸುದ್ದಿ ನೀಡಿದ್ದಾರೆ. ಬ್ರಾವೋ ಅಭಿಮಾನಿಗಳಿಗೆ ಇದರಿಂದ ಸಹಜವಾಗಿ ಬೇಸರವಾಗಿದೆ.
ಮುಂಬೈ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬ್ರಾವೋ ಆಡಿರಲಿಲ್ಲ. ಪಂದ್ಯದ ನಂತರ ಮಾತನಾಡಿದ ಕೋಚ್ ಫ್ಲೆಮಿಂಗ್, ''ಡ್ವಾಯ್ನೆ ಇನ್ನೂ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ'' ಎಂದಿದ್ದಾರೆ.
ಇತ್ತೀಚೆಗೆ ಕೆರಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ನಾಯು ಸೆಳೆತಕ್ಕೀಡಾಗಿ ನೋವು ಅನುಭವಿಸುತ್ತಿರುವ ಬ್ರಾವೋ ಇನ್ನೂ ಗುಣಮುಖರಾಗಿಲ್ಲ. ಸಿಪಿಎಲ್ ಫೈನಲ್ ನಲ್ಲಿ ಬೌಲಿಂಗ್ ಕೂಡಾ ಮಾಡಲು ಆಗಿರಲಿಲ್ಲ.
ಬ್ರಾವೋ ಜಾಗದಲ್ಲಿ ಆಡಿದ ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್, 6 ಎಸೆತಗಳಲ್ಲಿ 18 ರನ್ ಚೆಚ್ಚಿ ರನ್ ಚೇಸ್ ನಲ್ಲಿ ಉಪಯುಕ್ತ ಕೊಡುಗೆ ನೀಡಿ ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ. ಬ್ರಾವೋ ಹಿಂತಿರುಗುವ ತನಕ ಕರನ್ ಸ್ಥಾನ ಪಕ್ಕ ಆಗಿದೆ. ಬೌಲಿಂಗ್ ನಲ್ಲೂ ಮಿಂಚಿ 28ರನ್ನಿತ್ತು 1 ವಿಕೆಟ್ ಪಡೆದರು.
ಇಲ್ಲಿನ ಹವಾಮಾನಕ್ಕೆ ಆಟಗಾರರು ಇನ್ನೂ ಹೊಂದಿಕೊಳ್ಳುತ್ತಿದ್ದಾರೆ. ಆದಷ್ಟು ಮೊದಲು ಬೌಲಿಂಗ್, ರನ್ ಚೇಸಿಂಗ್ ಪಡೆಯಲು ತಂಡದ ಆಟಗಾರರು ಬಯಸಿದ್ದಾರೆ ಎಂದು ಫ್ಲೆಮಿಂಗ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications