ಕೊರೊನಾ ವೈರಸ್: ಹಾಡಿನ ಮೂಲಕ ಡ್ವೇಯ್ನ್ ಬ್ರಾವೋ ಸಂದೇಶ

ಕೊರೊನಾ ವೈರಸ್ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿದೆ. ಮತ್ತೊಂದೆಡೆ ಕೊರೊನಾ ವೈರಸ್ ಕೂಡ ತನ್ನ ಭೀಕರತೆಯನ್ನು ವ್ಯಾಪ್ತಿಯನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದೆ. ಈ ಮಾರಣಾಂತಿಕ ಸೋಂಕಿನ ಹರಡುವಿಕೆಯನ್ನು ತಡೆಯಬೇಕಾದರೆ ಮುನ್ನೆಚ್ಚರಿಕೆ ಹೊರತಾಗಿ ಮತ್ಯಾವ ಉತ್ತಮ ದಾರಿಯೂ ಇಲ್ಲ.
ಹೀಗಾಗಿ ಅನೇಕರು ತಮ್ಮದೇ ರೀತಿಯಲ್ಲಿ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದರಲ್ಲೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಹಾಡೊಂದನ್ನು ಬಿಡುಗಡೆ ಮಾಡಿದ್ದು ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಸ್ಪೂರ್ತಿ ನೀಡುವ ಕೆಲಸ ಮಾಡಿದ್ದಾರೆ.
ವಿಶ್ವಾದ್ಯಂತ ವೈದ್ಯರು ಸರ್ಕಾರಗಳು ಸಂಸ್ಥೆಗಳು ಕೊರೊನಾ ಸೋಕಿತರ ರಕ್ಷಣೆಗಾಗಿ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಾ ಹೋರಾಟದಲ್ಲಿ ಪಾಲ್ಗೊಂಡವರಿಗಾಗಿ ಬ್ರಾವೋ ತಮ್ಮ ಹಾಡಿನ ಮೂಲಕ ಉತ್ತೇಜನ ನೀಡಲು ಮುಂದಾಗಿದ್ದಾರೆ.
View this post on InstagramA post shared by Dwayne Bravo Aka Mr. Champion🏆 (@djbravo47) on
'ವಿ ನಾಟ್ ಗಿವಿಂಗ್ ಅಪ್' ಎಂಬ ಹಾಡನ್ನು ಬ್ರಾವೋ ತಾವೇ ಹಾಡಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವವರನ್ನು ಸ್ಮರಿಸಿಕೊಂಡಿದ್ದಾರೆ. ಮಹಾಮಾರಿ ಹರಡುತ್ತಿರುವ ಈ ಸಂದರ್ಭದಲ್ಲಿ ಸುರಕ್ಷಿತವಾಗಿರುವಂತೆಯೇ ಬ್ರಾವೊ ಕರೆ ನೀಡಿದ್ದಾರೆ. ಅಲ್ಲದೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈ ಹಾಡಿನ ಮೂಲಕ ವಿನಂತಿ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್‌ಗೆ ಈವರೆಗೆ 27 ಮಂದಿ ಮೃತಪಟ್ಟಿದ್ದು ಸೋಂಕಿಗೆ ಸುತ್ತಾದವರ ಸಂಖ್ಯೆ ಸಾವಿರದ ಸಮೀಪಕ್ಕೆ ಬಂದು ನಿಂತಿದೆ. ವಿಶ್ವದಲ್ಲಿ ಇದರ ಪ್ರಮಾಣ ಆರುವರೆ ಲಕ್ಷ ದಾಟಿ ಮುನ್ನುಗ್ಗುತ್ತಿದೆ. ಸರಸುಮಾರು 32 ಸಾವಿರ ಜನರು ಈ ಕೊರೊನಾ ವೈರಸ್‌ಗೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications