WTC 2021-23ರ ಪ್ರತೀ ಪಂದ್ಯಕ್ಕೂ ಒಂದೇ ರೀತಿಯ ಅಂಕ: ಐಸಿಸಿ

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ದ್ವಿತೀಯ ಆವೃತ್ತಿಯಲ್ಲಿ ಪಾಯಿಂಟ್ಸ್ ನಿಯಮದಲ್ಲಿ ಬದಲಾವಣೆಯಾಗಲಿದೆ. ಮೊದಲಿದ್ದ, ಸರಣಿಗೆ 120 ಅಂಕ ನಿಯಮ ಬದಲಾಗಿ ಮುಂದಿನ WTC ಪಂದ್ಯಗಳಲ್ಲಿ ಪ್ರತೀ ಪಂದ್ಯಕ್ಕೂ ಒಂದೇ ರೀತಿಯ ಅಂಕ ನೀಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಈ ಮೊದಲು ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯೊಂದಕ್ಕೆ 120 ಅಂಕ ನಿಗದಿಪಡಿಸಲಾಗಿತ್ತು. ಅಂದರೆ ನಾಲ್ಕು ಪಂದ್ಯಗಳ ಸರಣಿಯಾದರೆ ಪ್ರತೀ ಪಂದ್ಯಕ್ಕೂ 30 ಅಂಕ, ಎರಡು ಪಂದ್ಯಗಳ ಸರಣಿಯಾದರೆ ಪ್ರತೀ ಪಂದ್ಯಕ್ಕೂ 60ರಂತೆ ಅಂಕ ನಿಯಮವನ್ನು ಐಸಿಸಿ ಘೋಷಿಸಿತ್ತು. ಆದರೆ ಈ ನಿಯಮ ಈಗ ಬದಲಾಗಿದೆ.
ಈಗಿನ ನಿಯಮದ ಪ್ರಕಾರ, ಟೆಸ್ಟ್ ಸರಣಿ ಎಷ್ಟು ಪಂದ್ಯಗಳದ್ದಾದರೂ ಪ್ರತೀ ಗೆಲ್ಲುವ ಪಂದ್ಯಕ್ಕೂ ತಂಡ 12 ಅಂಕ ಗಳಿಸುತ್ತಿದೆ. ಪಂದ್ಯ ಟೈ ಆದರೆ 6, ಡ್ರಾ ಆದರೆ 4 ಅಂಕ ಎಂದು ಐಸಿಸಿ ಘೋಷಿಸಿದೆ. ಇನ್ನು ರ್‍ಯಾಂಕಿಂಗ್‌ನಲ್ಲಿ ತಂಡಗಳ ಶ್ರೇಯಾಂಕವನ್ನು ಸರಣಿಯಲ್ಲಿ ಆಡಿದ ಪಂದ್ಯ ಮತ್ತು ಗೆದ್ದ ಪಂದ್ಯಗಳ ಶೇಕಡಾವಾರಿನಂತೆ ನಿರ್ಧರಿಸಲಾಗುತ್ತದೆ.
ಅಂಕ ನಿಯಮವನ್ನು ಬದಲಾಯಿಸಿರುವ ಬಗ್ಗೆ ವಿವರಣೆ ನೀಡಿರುವ ಐಸಿಸಿ, "ಮೊದಲಿದ್ದ ನಿಯಮ ದೊಡ್ಡ ಸರಣಿಗಿಂತಲೂ ಚಿಕ್ಕ ಸರಣಿಯಲ್ಲಿ ಸಂಪೂರ್ಣ ಅಂಕ ಗಳಿಸಲು ಸುಲಭ ಮಾಡಿ ಕೊಟ್ಟಿತ್ತು. ಅದನ್ನೇ ಗುರಿಯಾಗಿಟ್ಟುಕೊಂಡು ಅಂಕ ನಿಯಮ ಬದಲಾಯಿಸಿದ್ದೇವೆ," ಎಂದು ಐಸಿಸಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications