ವಿಶ್ವಕಪ್ ಫೈನಲ್‌ನಲ್ಲಿ ಇದೇ ತಂಡ ಗೆಲ್ಲೋದು ಎಂದ ಪೀಟರ್ಸನ್

ಲಂಡನ್, ಜುಲೈ 14: ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಸುಲಭವಾಗಿ ಗೆದ್ದು ಪ್ರಶಸ್ತಿ ಎತ್ತಿ ಹಿಡಿಯಲಿದೆ ಎಂದು ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಭವಿಷ್ಯ ನುಡಿದಿದ್ದಾರೆ.
ವಿಶ್ವಕಪ್: ನ್ಯೂಜಿಲೆಂಡ್ - ಇಂಗ್ಲೆಂಡ್ ಫೈನಲ್ ಪಂದ್ಯದ ಲೈವ್ ಸ್ಕೋರ್ ಕಾರ್ಡ್
ಈ ಹಿಂದಿನ 11 ಆವೃತ್ತಿಗಳ ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ ಹಲವು ಬಾರಿ ಫೈನಲ್ ತಲುಪಿತ್ತಾದರೂ ಪ್ರಶಸ್ತಿ ಗೆದ್ದಿರಲಿಲ್ಲ. ಇದೀಗ 12ನೇ ಆವೃತ್ತಿಯಲ್ಲಿ ತವರಿನ ಪ್ರೇಕ್ಷಕರ ಎದುರು ಚೊಚ್ಚಲ ವಿಶ್ವಕಪ್ ಮುಡಿಗೇರಿಸಲಿದೆ ಎಂದು ಪೀಟರ್ಸನ್ ಹೇಳಿದ್ದಾರೆ.
"ಕ್ರಿಕೆಟ್‌ನ ತವರೂರಿಗೆ ಮುನ್ನಡೆದಿದ್ದೀರಿ. ಇಂಗ್ಲೆಂಡ್‌ಗೆ ಸುಲಭ ಜಯ ಲಭ್ಯವಾಗಲಿದೆ ಎಂದು ನನಗನಿಸುತ್ತಿದೆ," ಎಂದು ಪೀಟರ್ಸನ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಟ್ವೀಟ್ ಮಾಡಿದ್ದರು. ಇದಕ್ಕೂ ಮುನ್ನ ಟೂರ್ನಿಯ ಕ್ರಿಕೆಟ್ ವೀಕ್ಷಕ ವಿವರಣೆಗಾರ ಭಾರತದ ಸಂಜಯ್ ಮಾಂಜ್ರೆಕರ್ ಕೂಡ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುತ್ತದೆ ಎಂದು ಅಂದಾಜಿಸಿದ್ದರು. "ಹಣೆ ಬರಹದಲ್ಲಿ ನಂಬಿಕೆ ಇದ್ದರೆ ನ್ಯೂಜಿಲೆಂಡ್ ತಂಡ ಗೆಲ್ಲುಲಿದೆ. ಅಂಕಿ ಅಂಶಗಳ ಪ್ರಕಾರ ಬಲಾಬಲಗಳನ್ನು ಅರಿತು ಮಾತನಾಡುವುದಾದರೆ ಇಂಗ್ಲೆಂಡ್ ಗೆಲ್ಲಲಿದೆ," ಎಂದು ಮಾಂಜ್ರೇಕರ್ ಟ್ವೀಟ್ ಮಾಡಿದ್ದರು.
ಸೆಮಿಫೈನಲ್ಸ್‌ನಲ್ಲಿ 5 ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದ ಇಂಗ್ಲೆಂಡ್ ತಂಡ ಫೈನಲ್‌ಗೆ ಅರ್ಹತೆ ಪಡೆದಿತ್ತು. ಇದಕ್ಕೂ ಮುನ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 18 ರನ್‌ಗಳಿಂದ ಪ್ರಶಸ್ತಿ ಫೇವರಿಟ್ ಭಾರತಕ್ಕೆ ಆಘಾತ ನೀಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications