For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ಕೋಚ್ ಆಗಿ ಬ್ರೆಂಡನ್ ಮೆಕಲಂ ನೇಮಕ

ECB appointed Brendon McCullum as Head Coach of England Mens Test Team

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ಕೋಚ್ ನೇಮಕವಾಗಿದ್ದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಈ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಈ ನೇಮಕವನ್ನು ಘೋಷಣೆ ಮಾಡಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಮೆಕ್‌ಕಲಮ್ ಈ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಮೆಕ್‌ಕಲಮ್ ಈ ಬಾರಿಯ ಆವೃತ್ತಿ ಮುಕ್ತಾಯದ ನಂತರ ಈ ಜವಾಬ್ಧಾರಿಯಿಂದ ಕೆಳಗಿಳಿಯಲಿದ್ದಾರೆ. ನಂತರ ಇಂಗ್ಲೆಂಡ್ ತಂಡದ ಕೋಚ್ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಮೆಕ್‌ಕಲಮ್ ನ್ಯೂಜಿಲೆಂಡ್ ತಂಡದ ಪರವಾಗಿ 2004ರಿಂದ 2016ರ ವರೆಗೆ 101 ಟೆಸ್ಟ್ ಪಂದ್ಯಗಳಲ್ಲಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. 38.64ರ ಸರಾಸರಿಯಲ್ಲಿ 6453 ರನ್‌ಗಳಿಸಿದ್ದು 302ರನ್ ಮೆಕ್‌ಕಲಮ್ ಅವರ ಹೈಯೆಸ್ಟ್ ರನ್ ಆಗಿದೆ. ನ್ಯೂಜಿಲೆಂಡ್ ಪರವಾಗಿ ತ್ರಿತಕ ದಾಖಲಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ಮೆಕ್‌ಕಲಮ್‌ಗೆ ಇದೆ.

ನಿವೃತ್ತಿಯ ನಂತರ ಕೋಚ್ ಆಗಿ ಬ್ಯುಸಿಯಾಗಿರುವ ಮೆಕ್‌ಕಲಮ್ ಟೆಸ್ಟ್ ತಂಡಕ್ಕೆ ಇದೇ ಮೊದಲ ಬಾರಿಗೆ ಕೋಚ್ ಜವಾಬ್ಧಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. 2013ರಿಂದ ನಿವೃತ್ತಿ ಪಡೆಯುವವರೆಗೂ ಮೆಕ್‌ಕಲಮ್ ನ್ಯೂಜಿಲೆಂಡ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.

"ಮೆಕ್‌ಕಲಮ್ ತಮ್ಮ ಜವಾಬ್ಧಾರಿಯನ್ನು ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಆರಂಬಿಸಲಿದ್ದಾರೆ. ಜೂನ್ 2ರಿಂದ ಲಾರ್ಡ್ಸ್‌ನಲ್ಲಿ ಈ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿಸಾ ವಿಚಾರವಾಗಿ ಕಾರ್ಯಗಳು ನಡೆಯುತ್ತಿದೆ" ಎಂದು ಇಸಿಬಿ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್, ಇಂಗ್ಲೆಂಡ್‌ನ ಪುರುಷರ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ, ಕಾರ್ಯತಂತ್ರದ ಸಲಹೆಗಾರ ಆಂಡ್ರ್ಯೂ ಸ್ಟ್ರಾಸ್ ಮತ್ತು ಕಾರ್ಯಕ್ಷಮತೆಯ ನಿರ್ದೇಶಕ ಮೊ ಬೊಬಾಟ್ ಅವರನ್ನೊಳಗೊಂಡ ಆಯ್ಕೆ ಸಮಿತಿ ಮೆಕ್‌ಕಲಮ್ ಆಯ್ಕೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದೆ.

Story first published: Friday, May 13, 2022, 10:13 [IST]
Other articles published on May 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+