'ದ ಹಂಡ್ರೆಡ್'ನಿಂದ ಆಟಗಾರರ ಒಪ್ಪಂದ ರದ್ದುಗೊಳಿಸಿದ ಇಂಗ್ಲೆಂಡ್

ಲಂಡನ್, ಮೇ 5: ಈ ವರ್ಷ ಉದ್ಘಾಟನೆಗೊಳ್ಳಬೇಕಿದ್ದ ವಿಭಿನ್ನ ಕ್ರಿಕೆಟ್ ಟೂರ್ನಿ 'ದ ಹಂಡ್ರೆಡ್'ನಿಂದ ಆಟಗಾರರ ಒಪ್ಪಂದವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ರದ್ದುಗೊಳಿಸಿದೆ. ದ ಹಂಡ್ರೆಡ್‌ನಲ್ಲಿ ಪಾಲ್ಗೊಳ್ಳುವುದಾಗಿ ಆಟಗಾರರು ಸಹಿ ಹಾಕಿದ್ದರು. ಆದರೆ ಈ ಒಪ್ಪಂದವನ್ನು ಇಸಿಬಿ ರದ್ದು ಮಾಡಿದೆ. ಕೊರೊನಾವೈರಸ್‌ನಿಂದ ದ ಹಂಡ್ರೆಡ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.
ದ ಹಂಡ್ರೆಡ್ ಅಂದರೆ ಒಂದು ಇನ್ನಿಂಗ್ಸ್ 100 ಎಸೆತಗಳಲ್ಲಿ ಮುಗಿಯುವ ಪಂದ್ಯ. ಫುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಟೂರ್ನಿ ನಡೆಸಲು ನಿರ್ಧರಿಸಲಾಗಿತ್ತು. ಒಟ್ಟು 8 ತಂಡಗಳು ಪಾಲ್ಗೊಳ್ಳುವುದರಲ್ಲಿದ್ದವು. ಕೊರೊನಾ ಆತಂಕ ಇಲ್ಲದಿದ್ದರೆ ದ ಹಂಡ್ರೆಡ್ ಜುಲೈ 17ರಿಂದ ಆಗಸ್ಟ್ 15ರ ವರೆಗೆ ನಡೆಯುವುದರಲ್ಲಿತ್ತು.
ಪುರುಷರ ವಿಭಾಗದಲ್ಲಿ ತಂಡಗಳಿಗೆ ಆಟಗಾರರನ್ನು ಆರಿಸಲಾಗಿತ್ತು. ಮಹಿಳಾ ವಿಭಾಗದಲ್ಲಿ ತಂಡಗಳಿಗೆ ಆಟಗಾರ್ತಿಯರನ್ನು ನಿರ್ಧರಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಟೂರ್ನಿಯೇ ಈಗ ಮುಂದಕ್ಕೋಗಿದೆ. ಒಪ್ಪಂದ ರದ್ದಾಗಿರುವ ಬಗ್ಗೆ ಇಸಿಬಿ ಆಟಗಾರರಿಗೆ ಪತ್ರದ ಮೂಲಕ ತಿಳಿಸಿದೆ.
'ಆಟಗಾರರ ಒಪ್ಪಂದಗಳನ್ನು ಕೊನೆಗೊಳಿಸಿರುವ ಪತ್ರವನ್ನು ಭಾಗವಹಿಸಲಿದ್ದ ಎಲ್ಲಾ ಆಟಗಾರರಿಗೂ ನೀಡಲಾಗಿದೆ ಎಂದು ನಾವು ಈ ಮೂಲಕ ಖಚಿತಪಡಿಸುತ್ತಿದ್ದೇವೆ,' ಎಂದು ಇಸಿಬಿ ಹೇಳಿಕೆ ಮೂಲಕ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications