ಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿ

ಶಾರ್ಜಾ, ಆಗಸ್ಟ್ 12: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಿಂದ ಅಧಿಕೃತ ಅನುಮೋದನೆ ದೊರೆತಿರುವುದನ್ನು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಖಾತರಿಪಡಿಸಿದೆ.
ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ಶೇಖ್ ನಹಯನ್ ಮಬಾರಕ್ ಅಲ್ ನಹಯನ್ ಮಾತನಾಡಿ, 'ನಮ್ಮ ನೆಚ್ಚಿನ ಕ್ರೀಡೆಗಳಲ್ಲೇ ಬಹುದೊಡ್ಡ ಕ್ರೀಡೆಯನ್ನು ಇಲ್ಲಿ ಆಯೋಜಿಸುವ ಅವಕಾಶ ಲಭಿಸಿದ್ದಕ್ಕಾಗಿ ನಾವು ತುಂಬಾ ಖುಷಿಗೊಂಡಿದ್ದೇವೆ,' ಎಂದಿದ್ದಾರೆ.
'ಇದು ಯುಎಇಯಲ್ಲಿ ನಡೆಯುತ್ತಿರುವ ಅತೀ ದೊಡ್ಡ ಕ್ರಿಕೆಟ್ ಟೂರ್ನಿ ಇದು ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲಾ ಕ್ರೀಡಾಪ್ರೇಮಿಗಳು ಸಂಭ್ರಮಿಸಿ, ಪಂದ್ಯಾಟ ಯಶಸ್ವಿಯಾಗಿಸುವ ನೆಲೆಯಲ್ಲಿ ನಮ್ಮ ತಂಡ ಎಲ್ಲಾ ರೀತಿಯ ಬೆಂಬಲ ನೀಡಲಿದೆ,' ಎಂದು ಶೇಖ್ ನಹಯನ್ ಮಬಾರಕ್ ಅಲ್ ನಹಯನ್ ಹೇಳಿದ್ದಾರೆ.
ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್ ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. 2014ರ ಸೀಸನ್‌ನ ಕೆಲ ಪಂದ್ಯಗಳು ಯುಎಇಯಲ್ಲಿ ನಡೆದಿತ್ತು. ಆದರೆ ಸಂಪೂರ್ಣ ಟೂರ್ನಿ ಯುಎಇಯಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications