ಐಪಿಎಲ್ ಪಂದ್ಯಗಳ ಅಕ್ರಮ ನೇರ ಪ್ರಸಾರ: 8 ಸ್ಥಳಗಳ ಮೇಲೆ ದಾಳಿ, 4 ಕೋಟಿ ವಶ
ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಬ್ರಾಡ್ ಕಾಸ್ಟಿಂಗ್ ಮಾಡುತ್ತಿದವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಮುಂಬೈ ಹಾಗೂ ಗುಜರಾತ್‌ನ ಕಚ್‌ನಲ್ಲಿ ಒಟ್ಟು 8 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಐಪಿಎಲ್ ಪಂದ್ಯಗಳ ಪ್ರಸಾರ ಹಗೂ ಆನ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ ಫೇರ್‌ಪ್ಲೇ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.
ಈ ಪ್ಲಾಟ್‌ಫಾರ್ಮ್ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹೊರತಾಗಿ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶಗಳ ಮೇಲೆ ಆನ್‌ಲೈನ್ ಬೆಟ್ಟಿಂಗ್ ನಡೆಸಿದ ಆರೋಪ ಇದ್ದು, ಇದೇ ಪ್ರಕರಣದ ಭಾಗವಾಗಿ ಮಂಗಳವಾರೂ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಬ್ಯಾಂಕ್ ಖಾತೆ, ಸಿಲ್ವರ್ ಬಾರ್ಸ್‌ಗಳು ಸುಮಾರು 4 ಕೋಟಿ ಮುಖಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಡಿಜಿಟಿಲ್ ಸಾಧನಗಳು, ಸ್ಥಿರ ಆಸ್ತಿಗೆ ಸಂಬಂಧಿತ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮುಂಬೈನಲ್ಲಿ ದೂರು
ಮುಂಬೈನಲ್ಲಿ ವಯಾಕಾಮ್ 18 ಮೀಡಿಯಾ ಪ್ರವೈಟ್ ಲಿಮಿಟೆಡ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದೆ. ಅಲ್ಲದೆ ಎಫ್‌ಐಆರ್‌ನ್ನು ಸಹ ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಮತ್ತು ಕಾಫಿ ರೈಟ್ ಆಕ್ಟ್ 1957 ನಿಯಮ ಉಲ್ಲಂಘಿಸಲಾಗಿದೆ ಎಂದು ಫೇರ್‌ಪ್ಲೇ ಸ್ಟೋರ್ಟ್ ವಿರುದ್ಧ 100 ಕೋಟಿಗೂ ಹೆಚ್ಚು ಆದಾಯದಲ್ಲಿ ನಷ್ಟವನ್ನು ಉಂಟು ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ತಾಂತ್ರಿಕ ಮತ್ತು ಹಣಕಾಸು ನಿರ್ವಹಣೆಯಲ್ಲಿ 'ಫೇರ್‌ಪ್ಲೇ'ಗೆ ನೆರವು ನೀಡಿದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಸಂಚಿನ ಮಾಸ್ಟರ್ ಮೈಂಡ್ ಲಕ್ಷ್ಮಿಚಂದ್ ಶಾ ಇವರು ಫೇರ್‌ಪ್ಲೇ, ಅಲ್ಲದೆ ವಿದೇಶದಲ್ಲಿ ಮಲ್ಟಿಪಲ್ ಕಂಪನಿಗಳನ್ನು ನೊಂದಾಯಿಸಿದ್ದಾರೆ. ಪ್ಲೇ ವೆಂಚರ್ಸ್ ಎನ್‌ವಿ ಮತ್ತು ಡಚ್ ಆಂಟಿಲೀಸ್ ಮ್ಯಾನೇಜ್‌ಮೆಂಟ್ ಎನ್‌ವಿ, ದುಬೈನಲ್ಲಿ ಫೇರ್ ಪ್ಲೇ ಸ್ಪೋರ್ಟ್ ಎಲ್‌ಎಲ್‌ಸಿ ಮತ್ತು ಫೇರ್‌ಪ್ಲೇ ಸೇರಿದಂತೆ ಇನ್ನು ಹಲವು ಕಂಪನಿಗಳನ್ನು ನೊಂದಾಯಿಸಿದ್ದಾರೆ. ಈ ತನಿಖೆಯಲ್ಲಿ ಫೇರ್‌ಪ್ಲೇಗೆ ತಾಂತ್ರಿಕ ಹಾಗೂ ಹಣ ಕಾಸಿನ ಸಹಾಯ ಮಾಡಿದ ಆರೋಪಿಗಳನ್ನು ಗುರಿಯಾಗಿಸಿದೆ. ಭಾರತದಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ಚರ ಆಸ್ತಿ ಹಾಗೂ ಸ್ಥಿರ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು ನಾಲ್ಕು ಬಾರಿ ದಾಳಿ ನಡೆದಿದ್ದು, 117 ಕೋಟಿ ರೂ. ಬೆಲೆ ಚರ ಹಾಗೂ ಚಿರ ಆಸ್ತಿಯನ್ನು ವಶ ಪಡಿಸಿಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications